ಚೆನ್ನೈ: ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟಿದ ದಿನ ನಾಳೆ (ಸೆಪ್ಟೆಂಬರ್ 17).
ಮೋದಿಯವರ 72ನೇ ವರ್ಷದ ಬರ್ತ್ ಡೇಯನ್ನು ತಮಿಳುನಾಡು ಬಿಜೆಪಿ ಘಟಕ ತುಂಬ ವಿಭಿನ್ನವಾಗಿ ಆಚರಿಸಲು ಮುಂದಾ ಗಿದೆ. ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ರಾಷ್ಟ್ರಾದ್ಯಂತ ಬಿಜೆಪಿ ರಕ್ತದಾನ ಶಿಬಿರ, ಉಚಿತ ವೈದ್ಯಕೀಯ ತಪಾಸಣೆ ಯಂಥ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿದೆ.
ಆದರೆ ತಮಿಳು ನಾಡು ಬಿಜೆಪಿ ಘಟಕ ‘ನಾಳೆ ಹುಟ್ಟಲಿರುವ ಶಿಶುಗಳಿಗೆ ಬಂಗಾರದ ಉಂಗುರ ಕೊಡಲು ನಿರ್ಧಾರ ಮಾಡಿದೆ’
ತಮಿಳುನಾಡಿನ ಆರ್ಎಸ್ಆರ್ಎಂ ಸರ್ಕಾರಿ ಆಸ್ಪತ್ರೆಯಲ್ಲಿ ಸೆ.17ರಂದು ಹುಟ್ಟುವ ಮಕ್ಕಳಿಗೆ ಬಿಜೆಪಿ ಚಿನ್ನದ ಉಂಗುರ ಉಡುಗೊರೆ ಕೊಡಲಿದೆ.
ರಾಜ್ಯ ಬಿಜೆಪಿ ಮೀನುಗಾರಿಕೆ ಹಾಗೂ ಮಾಹಿತಿ ಮತ್ತು ಪ್ರಸಾರ ವಿಭಾಗದ ಉಸ್ತುವಾರಿ ಎಲ್.ಮುರುಗನ್ ಮಾಹಿತಿ ನೀಡಿದ್ದು ‘ನಾವು ಪ್ರಧಾನಿ ಮೋದಿಯವರ ಹುಟ್ಟಿದ ದಿನವನ್ನು ಸಂಭ್ರಮಿಸಲು ನಿರ್ಧಾರ ಕೈಗೊಂಡಿದ್ದೇವೆ. ಪ್ರತಿ ಉಂಗುರದಲ್ಲೂ 2 ಗ್ರಾಂ.ಚಿನ್ನ ಇರಲಿದ್ದು, 5000 ರೂಪಾಯಿ ಬೆಲೆ ಬಾಳಲಿದೆ ಎಂದು ಹೇಳಿದ್ದಾರೆ. ಇದರೊಂದಿಗೆ 720 ಗ್ರಾಂ ಮೀನನ್ನು ಕೂಡ ಕೊಡಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಎಲ್ಲ ಕಡೆ ಉಚಿತ ವೈದ್ಯಕೀಯ ತಪಾಸಣೆ, ರಕ್ತದಾನ ಶಿಬಿರಗಳು ನಡೆಯಲಿವೆ. ಇನ್ನು ಯಾರೂ ಕೇಕ್ ಕತ್ತರಿಸುವುದಾಗಲೀ, ಹವನಗಳನ್ನು ನಡೆಸುವುದಾಗಲೀ ಮಾಡುವಂತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ಸಿಂಗ್ ಆಗಸ್ಟ್ 30ರಂದು ಎಲ್ಲ ರಾಜ್ಯಗಳ ಬಿಜೆಪಿ ಕಚೇರಿಗೆ ಬರೆದ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
إرسال تعليق