ಪ್ರಧಾನಿ ಮೋದಿ ಅಹಮದಾಬಾದ್‌ನಿಂದ ಗಾಂಧಿನಗರಕ್ಕೆ ತೆರಳುತ್ತಿದ್ದ ವೇಳೆ ಅವರ ಬೆಂಗಾವಲು ಪಡೆ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟಿದ್ದು, ಇದಕ್ಕಾಗಿ ಬೆಂಗಾವಲು ವಾಹನಗಳು ಸ್ವಲ್ಪ ಹೊತ್ತು ರಸ್ತೆಯಲ್ಲಿ ನಿಂತಿದ್ದವು.
ಆ್ಯಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟ ಪ್ರಧಾನಿ ಬೆಂಗಾವಲು ಪಡೆ ವಾಹನಗಳುಅಹ್ಮದಾಬಾದ್: ಪ್ರಧಾನಿ ಮೋದಿ ಅಹಮದಾಬಾದ್‌ನಿಂದ ಗಾಂಧಿನಗರಕ್ಕೆ ತೆರಳುತ್ತಿದ್ದ ವೇಳೆ ಅವರ ಬೆಂಗಾವಲು ಪಡೆ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟಿದ್ದು, ಇದಕ್ಕಾಗಿ ಬೆಂಗಾವಲು ವಾಹನಗಳು ಸ್ವಲ್ಪ ಹೊತ್ತು ರಸ್ತೆಯಲ್ಲಿ ನಿಂತಿದ್ದವು.
ಪ್ರಧಾನಿ ಬೆಂಗಾವಲು ಪಡೆಯ ಭಾಗವಾಗಿದ್ದ ಎರಡು SUV ಗಳು ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು ಅಹಮದಾಬಾದ್-ಗಾಂಧಿನಗರ ರಸ್ತೆಯಲ್ಲಿ ನಿಧಾನವಾಗಿ ಎಡಭಾಗಕ್ಕೆ ಚಲಿಸಿದವು. ತಮ್ಮ ತವರು ರಾಜ್ಯ ಗುಜರಾತ್'ಗೆ 2 ದಿನಗಳ ಭೇಟಿ ನೀಡಿರುವ ಪ್ರಧಾನಿ ಮೋದಿ, ತಮ್ಮ ಸರ್ಕಾರದ ಯುಗದಲ್ಲಿ ಯಾವುದೇ ವಿಐಪಿ ಸಂಸ್ಕೃತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಧಾನಿ ಮೋದಿ ಇಂದು ಮಧ್ಯಾಹ್ನ ಅಹಮದಾಬಾದ್‌ನ ದೂರದರ್ಶನ ಕೇಂದ್ರದ ಬಳಿ ಸಾರ್ವಜನಿಕ ರ್ಯಾಲಿ ಮುಗಿಸಿ ಗಾಂಧಿನಗರದ ರಾಜಭವನಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.ಅಹಮದಾಬಾದ್‌ನಿಂದ ಗಾಂಧಿನಗರಕ್ಕೆ ಹೋಗುವ ಮಾರ್ಗದಲ್ಲಿ, ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು ಪ್ರಧಾನಿ ಮೋದಿಯವರ ವಾಹನವನ್ನು ನಿಲ್ಲಿಸಲಾಯಿತು ಎಂದು ಗುಜರಾತ್ ಬಿಜೆಪಿ ಹೇಳಿಕೆಯಲ್ಲಿ ತಿಳಿಸಿದೆ.
ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಪ್ರಧಾನಿ ಮೋದಿ ಶುಕ್ರವಾರ ಅಹಮದಾಬಾದ್‍ನಿಂದ ಗಾಂಧಿನಗರಕ್ಕೆ ಪ್ರಯಾಣಿಸುತ್ತಿದ್ದಾಗ ಆಂಬ್ಯುಲೆನ್ಸ್'ಗೆ ದಾರಿ ಮಾಡಿಕೊಟ್ಟಿದ್ದಾರೆ. ಗುಜರಾತ್ ಪ್ರವಾಸದಲ್ಲಿ ಇಂದು ಸಂಜೆ ಬನಸ್ಕಾಂತ ಜಿಲ್ಲೆಗೆ ಆಗಮಿಸುವ ಪ್ರಧಾನಿಯವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮತ್ತು ಪ್ರಸಿದ್ಧ ಅಂಬಾಜಿ ದೇವಸ್ಥಾನದಲ್ಲಿ ಆರತಿ ಮಾಡುತ್ತಾರೆ.
ಈ ಹಿಂದೆ 2017ರಲ್ಲಿ, ಪ್ರಧಾನಿ ಮೋದಿ ಅವರು ಇಪಿಐ(EPI) (everyone is important) ವಿಐಪಿಯನ್ನ ಬದಲಾಯಿಸಬೇಕು ಎಂದು ಹೇಳಿದ್ದರು. 'ಪ್ರತಿಯೊಬ್ಬ ವ್ಯಕ್ತಿಗೂ ಮೌಲ್ಯ ಮತ್ತು ಮಹತ್ವವಿದೆ' ಎಂದು ಪ್ರಧಾನಿ ಮೋದಿ ಹೇಳಿದ್ದರು. ವಿಶೇಷವೆಂದರೆ, ಪ್ರಧಾನಿ ಮೋದಿ ಅವರು ವಿಐಪಿ ಸಂಸ್ಕೃತಿಯ ಸಂಕೇತವಾದ ವಾಹನಗಳ ಮೇಲೆ ಕೆಂಪು ದೀಪಗಳನ್ನ ಬಳಸುವುದನ್ನ ಸಹ ಕೊನೆಗೊಳಿಸಿದ್ದರು.
إرسال تعليق