ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ವಿಧಾನಸೌಧದಲ್ಲಿ ನಾಗರಿಕ ಸನ್ಮಾನ: ಜೋಗತಿ ಮಂಜಮ್ಮ, ಪ್ರಕಾಶ್ ಪಡುಕೋಣೆ ಸೇರಿ ಹಲವರಿಂದ ಸನ್ಮಾನ

 ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದಲ್ಲಿ ನಡೆದ ನಾಗರಿಕ ಸ್ವಾಗತ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸನ್ಮಾನಿಸಲು ವಿವಿಧ ಕ್ಷೇತ್ರಗಳ ವ್ಯಕ್ತಿಗಳನ್ನು ಆಯ್ಕೆ ಮಾಡಲಾಯಿತು. ಇಸ್ಕಾನ್‌ನ ಮಧು ಪಂಡಿತ್ ದಾಸ (ಸಮಾಜ ಸೇವೆ), ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ (ಸಾಹಿತ್ಯ), ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ, ಕಿರಣ್ ಮಜುಂದಾರ್-ಶಾ (ಉದ್ಯಮ)

         ರಾಷ್ಟ್ರಪತಿಗಳಿಗೆ ಜೋಗತಿ ಮಂಜಮ್ಮ ಅವರಿಂದ ಕಲಾಕೃತಿ ಉಡುಗೊರೆ

By : Rekha.M
Online Desk

ಬೆಂಗಳೂರು: ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದಲ್ಲಿ ನಡೆದ ನಾಗರಿಕ ಸ್ವಾಗತ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸನ್ಮಾನಿಸಲು ವಿವಿಧ ಕ್ಷೇತ್ರಗಳ ವ್ಯಕ್ತಿಗಳನ್ನು ಆಯ್ಕೆ ಮಾಡಲಾಯಿತು. ಇಸ್ಕಾನ್‌ನ ಮಧು ಪಂಡಿತ್ ದಾಸ (ಸಮಾಜ ಸೇವೆ), ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ (ಸಾಹಿತ್ಯ), ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ, ಕಿರಣ್ ಮಜುಂದಾರ್-ಶಾ (ಉದ್ಯಮ) ಮತ್ತು ತೃತೀಯಲಿಂಗಿ ಕಾರ್ಯಕರ್ತೆ ಮತ್ತು ಪದ್ಮಶ್ರೀ ಪ್ರಶಸ್ತಿ ವಿಜೇತೆ ಜೋಗತಿ ಮಂಜಮ್ಮ (ಜಾನಪದ) ಮುರ್ಮು ಅವರನ್ನು ಸನ್ಮಾನಿಸಿದರು. ಪ್ರತಿಯೊಬ್ಬ ಗಣ್ಯರು ಮುರ್ಮು ಅವರಿಗೆ ರಾಜ್ಯವನ್ನು ಪ್ರತಿನಿಧಿಸುವ ಕೆತ್ತಿದ ಶ್ರೀಗಂಧದ ಆನೆ, ಬಿದ್ರಿ ಕೆಲಸದ ನವಿಲು ಮತ್ತು ಹೆಚ್ಚಿನ ಕಲಾಕೃತಿಗಳನ್ನು ನೀಡಿದರು.

ದೇಶದ ಪ್ರಥಮ ಪ್ರಜೆಯನ್ನು ಸ್ವಾಗತಿಸಲು ವಿಧಾನಸೌಧವನ್ನು ಕಳೆದ ರಾತ್ರಿ ದೀಪಾಲಂಕಾರ ಮಾಡಲಾಗಿತ್ತು, ಸಮಾರಂಭವನ್ನು ವೀಕ್ಷಿಸಲು ಪದ್ಮ ಪ್ರಶಸ್ತಿ ವಿಜೇತರು ಸೇರಿದಂತೆ ಗಣ್ಯರಿಂದ ಬ್ಯಾಂಕ್ವೆಟ್ ಹಾಲ್ ತುಂಬಿತ್ತು. ಕರ್ನಾಟಕಕ್ಕೆ ರಾಷ್ಟ್ರಪತಿ ಮುರ್ಮು ಅವರ ಮೊದಲ ಭೇಟಿಯಾಗಿದೆ, ಇದು ಉನ್ನತ ಹುದ್ದೆಯನ್ನು ವಹಿಸಿಕೊಂಡ ನಂತರ ಅವರ ಮೊದಲ ರಾಜ್ಯ ಭೇಟಿಯಾಗಿದೆ. 

ಭಾಷಣದ ಆರಂಭದಲ್ಲಿ ಕನ್ನಡದಲ್ಲಿ ಮಾತನಾಡಿದ ದ್ರೌಪದಿ ಮುರ್ಮು ಅವರು, ತಾಯಿ ಭುವನೇಶ್ವರಿ ಮಕ್ಕಳಿಗೆ ನಮಸ್ಕಾರಗಳು, ನಾನು ನನ್ನ ದಾರಿಯಲ್ಲಿ ಮಕ್ಕಳ ಮತ್ತು ದೊಡ್ಡವರ ಪ್ರೀತಿ ಮತ್ತು ವಾತ್ಸಲ್ಯವನ್ನು ಅನುಭವಿಸಿದೆ. ನಿಮ್ಮ ಸೇವೆಯಲ್ಲಿ ಸದಾ ಇರುತ್ತೇನೆ ಎಂದರು. 

ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ, ಸಂಗೊಳ್ಳಿ ರಾಯಣ್ಣ, ಪಂಪ, ರನ್ನ, ಭೀಮಸೇನ ಜೋಶಿ, ಅಕ್ಕ ಮಹಾದೇವಿ, ಪುರಂದರ ದಾಸ, ಕನಕದಾಸ, ಅಲ್ಲಮಪ್ರಭು, ಸರ್.ಎಂ.ವಿಶ್ವೇಶ್ವರಯ್ಯ, ಕೆಂಪೇಗೌಡ, ಸಿ.ವಿ.ರಾಮನ್ ಅವರ ಕೊಡುಗೆಯನ್ನು ದ್ರೌಪದಿ ಮುರ್ಮು ಸ್ಮರಿಸಿದರು.

ಹಂಪಿ, ಐಹೊಳೆ, ಪಟ್ಟದಕಲ್ಲು ಮತ್ತು ಬೇಲೂರಿನ ವಾಸ್ತುಶಿಲ್ಪವನ್ನು ಉಲ್ಲೇಖಿಸಿದ್ದಾರೆ ಮತ್ತು ರಾಜ್ಯದ ಮೂಲಕ ಹರಿಯುವ ಕಾವೇರಿ, ಕೃಷ್ಣ, ತುಂಗಾ ಮತ್ತು ಇತರ ನದಿಗಳನ್ನು ಶ್ಲಾಘಿಸಿದರು. ಶಿವಪುರ ಧ್ವಜ ಪ್ರತಿಭಟನೆ ಸೇರಿದಂತೆ ಸ್ವಾತಂತ್ರ್ಯಕ್ಕೆ ಕರ್ನಾಟಕದ ಕೊಡುಗೆ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಉಪಸ್ಥಿತರಿದ್ದರು.


    Post a Comment

    أحدث أقدم