ಪೇಸಿಎಂ ಪೋಸ್ಟರ್ ಹಾಕಿದ್ದ ಕಾಂಗ್ರೆಸ್ ನಾಯಕರಿಗೆ ಸಿಸಿಬಿ ಶಾಕ್, ವಿಚಾರಣೆಗೆ ಹಾಜರಾಗಲು ನೋಟಿಸ್!

 ಬಿಜೆಪಿ ಸರ್ಕಾರದ ವಿರುದ್ಧ ಪೇಸಿಎಂ ಪೋಸ್ಟರ್ ಮೂಲಕ ಪ್ರತಿಭಟನೆ ನಡೆಸಿದ್ದ ರಾಜ್ಯ ಕಾಂಗ್ರೆಸ್ ನಾಯಕರಿಗೆ ಕೇಂದ್ರ ಅಪರಾಧ ವಿಭಾಗ (CCB) ಅಧಿಕಾರಿಗಳು ಶಾಕ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

ʻಪೇ ಸಿಎಂʼ ಪೋಸ್ಟರ್‌
By: Rekha.M
Online Desk

ಬೆಂಗಳೂರು: ಬಿಜೆಪಿ ಸರ್ಕಾರದ ವಿರುದ್ಧ ಪೇಸಿಎಂ ಪೋಸ್ಟರ್ ಮೂಲಕ ಪ್ರತಿಭಟನೆ ನಡೆಸಿದ್ದ ರಾಜ್ಯ ಕಾಂಗ್ರೆಸ್ ನಾಯಕರಿಗೆ ಕೇಂದ್ರ ಅಪರಾಧ ವಿಭಾಗ (CCB) ಅಧಿಕಾರಿಗಳು ಶಾಕ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

ಹೌದು.. ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಡೆಸಿದ್ದ ಪೇ ಸಿಎಂ ಅಭಿಯಾನದ ಭಾಗವಾಗಿ ಬೆಂಗಳೂರಿನ ಹಲವು ಕಡೆ ಪೇ ಸಿಎಂ ಪೋಸ್ಟರ್ ಅಂಟಿಸಿದ್ದ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಕೇಂದ್ರ ಅಪರಾಧ ವಿಭಾಗದ ಸಿಸಿಬಿ ಪೊಲೀಸರು ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಪದಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ನಡೆದಂತಹ 'ಪೇ ಸಿಎಂ ಪೋಸ್ಟರ್ ಪ್ರಕರಣ' ವನ್ನು ಸಿಸಿಬಿಗೆ ವರ್ಗಾಯಿಸಿ ಬೆಂಗಳೂರು ನಗರ ಕಮೀಷನರ್ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದರು. ಇದೀಗ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಸಿಸಿಬಿ ಅಧಿಕಾರಿಗಳು ಇದೀಗ ಕಾಂಗ್ರೆಸ್ ನಾಯಕರಿಗೆ ನೋಟಿಸ್ ದಾರಿ ಮಾಡಿದ್ದಾರೆ. 

ರಾಜ್ಯದಲ್ಲಿ ಭಾರೀ ಚರ್ಚೆಗೆ ಒಳಗಾಗಿದ್ದ ನಗರದ ಹಲವೆಡೆ ದಾಖಲಾಗಿದ್ದ 'PAY CM' ಪೋಸ್ಟರ್‌ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆಗೊಳಿಸಿ ಬೆಂಗಳೂರು ನಗರ ಕಮೀಷನರ್ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದರು. ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು ಪೇ ಸಿಎಂ ಪೋಸ್ಟರ್ ಅಂಟಿಸಿದ್ದ ಸ್ಥಳಗಳಲ್ಲಿನ ಸಿಸಿಟಿವಿ ದೃಶ್ಯಗಳನ್ನು ಕಲೆಹಾಕಿ ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಬಿ ಆರ್ ನಾಯ್ಡು, ಸಂಜಯ್, ಗಗನ್, ಪವನ್, ವಿಶ್ವನಾಥ್ ಸೇರಿ ಹಲವರಿಗೆ ಅ. 1 ರಂದು ಸಿಸಿಬಿ ಕಚೇರಿಯಲ್ಲಿ ಹಾಜರಾಗುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಿದ್ದಾರೆ.

40% ಕಮಿಷನ್ ಆರೋಪ ಮುಂದಿಟ್ಟುಕೊಂಡು ಪೇ ಸಿಎಂ (Pay Cm Posters) ಎಂದು ಪೇಟಿಎಂ ಮಾದರಿಯಲ್ಲಿ ರಚಿಸಲಾಗಿರುವ ಪೋಸ್ಟರ್ ನಗರದ ಹಲವು ಕಡೆಗಳಲ್ಲಿ ಹಾಕಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರದೊಂದಿಗೆ ರೂಪಿಸಿದ್ದ ಕ್ಯೂ ಆರ್‌ ಕೋಡ್‌ ಒಳಗೊಂಡ ಪೇ ಸಿಎಂ ಪೋಸ್ಟರ್‌ಗಳನ್ನು ಕ್ವೀನ್ಸ್‌ ರಸ್ತೆ, ಜಯಮಹಲ..., ಕಂಟೋನ್ಮೆಂಟ್‌ ಸೇರಿದಂತೆ ನಗರದ ಹಲವೆಡೆ ಅಂಟಿಸಲಾಗಿತ್ತು. ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳು ಸಾರ್ವಜನಿಕ ಸ್ಥಳ ವಿರೂಪಗೊಳಿಸಿದ ಆರೋಪದಡಿ ಸದಾಶಿವನಗರ, ಶೇಷಾದ್ರಿಪುರ, ಹೈಗ್ರೌಂಡ್ಸ್‌, ವಿಧಾನಸೌಧ, ಭಾರತಿನಗರ, ಆರ್‌.ಟಿ.ನಗರ, ಜೆ.ಸಿ.ನಗರ ಹಾಗೂ ಸಂಜಯನಗರ ಠಾಣೆಯಲ್ಲಿಪ್ರಕರಣ ದಾಖಲಿಸಿದ್ದರು.

ಕಾಂಗ್ರೆಸ್ ಪಕ್ಷದ ಈ ವಿನೂತನ ಪ್ರತಿಭಟನೆಗೆ ಸಿಎಂ ಬೊಮ್ಮಾಯಿ ತೀವ್ರ ಕಿಡಿಕಾರಿದ್ದರು. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು. 



Post a Comment

أحدث أقدم