ಗಾನಕೋಗಿಲೆ ಲತಾ ಮಂಗೇಶ್ಕರ್ ಜನ್ಮಜಯಂತಿ: ಪ್ರಧಾನಿ ಮೋದಿ ಗೌರವ; ಅಯೋಧ್ಯೆಯ ಚೌಕವೊಂದಕ್ಕೆ ಗಾಯಕಿ ಹೆಸರು

 ಅಪ್ರತಿಮ ಗಾಯಕಿ, ಗಾನಕೋಗಿಲೆ  ಲತಾ ಮಂಗೇಶ್ಕರ್ ಅವರ ಜನ್ಮಜಯಂತಿಯಾದ ಸೆಪ್ಟೆಂಬರ್ 28ರ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 

     ಲತಾ ಮಂಗೇಶ್ಕರ್

By : Rekha.M
Online Desk

ನವದೆಹಲಿ: ಅಪ್ರತಿಮ ಗಾಯಕಿ, ಗಾನಕೋಗಿಲೆ  ಲತಾ ಮಂಗೇಶ್ಕರ್ ಅವರ ಜನ್ಮಜಯಂತಿಯಾದ ಸೆಪ್ಟೆಂಬರ್ 28ರ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 

ಅಯೋಧ್ಯೆಯಲ್ಲಿರುವ ಚೌಕಕ್ಕೆ ಲತಾ ಮಂಗೇಶ್ಕರ್ ಅವರ ಹೆಸರನ್ನು ಇಡಲಾಗುವುದು, ಇದು ಅವರಿಗೆ ನಾವು ಸಲ್ಲಿಸುವ ಗೌರವವಾಗಿದೆ ಎಂದಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅವರು, ಲತಾ ದೀದಿ ಅವರ ಜನ್ಮ ವಾರ್ಷಿಕೋತ್ಸವದಂದು ನಾನು ನೆನಪಿಸಿಕೊಳ್ಳುತ್ತೇನೆ. ಪ್ರೀತಿಗೆ ಅನ್ವರ್ಥವೆಂಬಂತೆ ಇದ್ದರು. ಅಯೋಧ್ಯೆಯ ಚೌಕ್‌ಗೆ ಅವರ ಹೆಸರನ್ನಿಡುತ್ತೇವೆ. ಭಾರತದ ದಂತಕಥೆಗಳಲ್ಲಿ ಒಬ್ಬರಾದ ಲತಾ ದೀದಿಯವರಿಗೆ ನಾವು ಸಲ್ಲಿಸುವ ಗೌರವ ಎಂದಿದ್ದಾರೆ. 

1929 ರಲ್ಲಿ ಜನಿಸಿದ ಲತಾ ಮಂಗೇಶ್ಕರ್ ದಶಕಗಳ ಕಾಲ ಗಾಯನಲೋಕದ ಸಾಮ್ರಾಜ್ಞಿಯಾಗಿ ಮೆರೆದವರು. ಕಳೆದ ಫೆಬ್ರವರಿ ತಿಂಗಳಲ್ಲಿ ಇಹಲೋಕ ತ್ಯಜಿಸಿದರು.

Post a Comment

أحدث أقدم