ಮೊನ್ನೆ ಭಾನುವಾರದಿಂದ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಬಹುತೇಕ ಕಡೆ ಪ್ರವಾಹವೇ ಉಂಟಾಗಿ ಪರಿಸ್ಥಿತಿ ನಿಯಂತ್ರಣ ಮೀರಿ ಹೋಗುತ್ತಿದೆ. ಧಾರಾಕಾರ ಮಳೆ, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಜೀವವೊಂದು ಬಲಿಯಾಗಿದೆ.
ಮೃತಪಟ್ಟ ಯುವತಿ
ಬೆಂಗಳೂರು: ಮೊನ್ನೆ ಭಾನುವಾರದಿಂದ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಬಹುತೇಕ ಕಡೆ ಪ್ರವಾಹವೇ ಉಂಟಾಗಿ ಪರಿಸ್ಥಿತಿ ನಿಯಂತ್ರಣ ಮೀರಿ ಹೋಗುತ್ತಿದೆ. ಧಾರಾಕಾರ ಮಳೆ, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಜೀವವೊಂದು ಬಲಿಯಾಗಿದೆ.
23 ವರ್ಷದ ಬಿ ಕಾಂ ಪದವೀಧರೆ ನಿನ್ನೆ ರಾತ್ರಿ ವಿದ್ಯುತ್ ಕಂಬ ತಗುಲಿ ಶಾಕ್ ಹೊಡೆದು ಮೃತಪಟ್ಟಿದ್ದಾರೆ. ಯುವತಿಯನ್ನು ಅಖಿಲಾ ಎಂದು ಗುರುತಿಸಲಾಗಿದ್ದು ವೈಟ್ ಫೀಲ್ಡ್ ನ ಸಿದ್ದಾಪುರ ನಿವಾಸಿ. ಖಾಸಗಿ ಶಾಲೆಯೊಂದರಲ್ಲಿ ಆಡಳಿತ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.
ನಿನ್ನೆ ರಾತ್ರಿ 9.30ರ ಸುಮಾರಿಗೆ ದುರ್ಘಟನೆ ನಡೆದಿದೆ. ಕೆಲಸ ಮುಗಿಸಿ ಸ್ಕೂಟಿಯಲ್ಲಿ ಅಖಿಲಾ ಮನೆಗೆ ಬರುತ್ತಿದ್ದರು. ನೀರು ತುಂಬಿದ ರಸ್ತೆಯಲ್ಲಿ ಸ್ಕೂಟಿಯಲ್ಲಿ ಹೋಗುತ್ತಿರಬೇಕಾದರೆ ಜಾರಿ ಬಿದ್ದಿದ್ದಾರೆ. ಈ ವೇಳೆ ರಕ್ಷಣೆಗೆಂದು ಅಖಿಲಾ ವಿದ್ಯುತ್ ಕಂಬವನ್ನು ಹಿಡಿದಿದ್ದಾರೆ. ಆಗ ವಿದ್ಯುತ್ ಪ್ರವಹಿಸಿದೆ.
ಪ್ರಜ್ಞಾಹೀನಳಾಗಿ ಬಿದ್ದ ಅಖಿಲಾರನ್ನು ಸ್ಥಳದಲ್ಲಿದ್ದವರು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅಷ್ಟು ಹೊತ್ತಿಗೆ ಪ್ರಾಣಪಕ್ಷಿ ಹಾರಿಹೋಗಿತ್ತು. ವೈಟ್ ಫೀಲ್ಡ್ ವಿಭಾಗ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಬೆಸ್ಕಾಂ ಮೇಲೆ ಆರೋಪ: ಯುವತಿಯ ಕುಟುಂಬಸ್ಥರು ತಮ್ಮ ಮಗಳ ಸಾವಿಗೆ ಬೆಸ್ಕಾಂ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ. ವಿದ್ಯುತ್ ಕಂಬದ ಬಾಕ್ಸ್ ವೈರ್ ನ್ನು ಮುಚ್ಚದೆ ತೆರೆದಿಟ್ಟಿದ್ದೇ ಕಾರಣ. ಬೆಂಗಳೂರಿನಲ್ಲಿ ಕಳೆದ ತಿಂಗಳಿನಿಂದಲೇ ಸಾಕಷ್ಟು ಮಳೆಯಾಗುತ್ತಿದ್ದರೂ ವಿದ್ಯುತ್ ಕಂಬಗಳ ಬಗ್ಗೆ ಮುಂಜಾಗ್ರತೆ ತೆಗೆದುಕೊಳ್ಳದೆ ಇದ್ದ ಬಿಬಿಎಂಪಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
إرسال تعليق