ಕಳೆದ ಶನಿವಾರ, ಭಾನುವಾರ ತಾಂತ್ರಿಕ ಸಮಸ್ಯೆಯಿಂದಾಗಿ ೧೦೮ ಆಂಬ್ಯುಲೆನ್ಸ್‌ನ ಸೇವೆಯಲ್ಲಿ ವ್ಯತ್ಯಾಸವಾಗಿದ್ದು ಭಾರೀ ಸುದ್ದಿ
ಯಾಗಿತ್ತು. ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಈ ಕುರಿತು ಕ್ಷಮೆಯನ್ನೂ ಕೇಳಿ, ಸಮಸ್ಯೆ ಬಗೆಹರಿಸಿದ್ದಾಗಿ ಹೇಳಿದ್ದಾರೆ.
ಆದರೆ ಆರೋಗ್ಯ ಕವಚ 108 ಯೋಜನೆ ತಾಂತ್ರಿಕ ಸಮಸ್ಯೆಯಿಂದ ಮಾತ್ರ ಬಳಲುತ್ತಿಲ್ಲ. ಸಿಬ್ಬಂದಿ ಕೊರತೆಯನ್ನೂ ಅನುಭ ವಿಸುತ್ತಿದ್ದು, ಸಚಿವರು ಈ ಕುರಿತು ಗಮನಹರಿಸ ಬೇಕಿದೆ. ಆರೋಗ್ಯ ಕವಚ ಯೋಜನೆಯ ಮಾನದಂಡದ ಪ್ರಕಾರ, ಒಂದು ಆಂಬ್ಯುಲೆನ್ಸ್ ನಲ್ಲಿ ಐವರು ಸಿಬ್ಬಂದಿ ಇರಬೇಕು. ಸದ್ಯ ನಾಲ್ಕಕ್ಕಿಂತ ಕಡಿಮೆ ಸಿಬ್ಬಂದಿ ಕಾರ್ಯನಿರ್ವ ಹಿಸುತ್ತಿದ್ದಾರೆ.
ವಾಹನ ಚಾಲಕ, ದಾದಿಯರ ಕೊರತೆಯಿಂದಾಗಿ ಸಕಾಲದಲ್ಲಿ ಆಂಬ್ಯುಲೆನ್ಸ್‌ಗಳು ತಲುಪಲು ಸಾಧ್ಯವಾಗುತ್ತಿಲ್ಲ ಎಂಬ ದೂರು ಗಳು ಎಲ್ಲೆಡೆ ಕೇಳಿಬರುತ್ತಿದೆ. ಸದ್ಯ ಕಾರ್ಯ ನಿರ್ವಹಿಸುತ್ತಿರುವ ಆಂಬ್ಯುಲೆನ್ಸ್‌ಗಳು 2014ರಲ್ಲಿ ಖರೀದಿ ಮಾಡಿದವು. ಇವುಗಳಲ್ಲಿ ಕೆಲವು ಗ್ಯಾರೇಜ್ ಸೇರಿದರೆ, ಇನ್ನೂ ಕೆಲವು ಸಂಚಾರವನ್ನೆ ನಿಲ್ಲಿಸಿವೆ. ಈ ಯೋಜನೆಯ ಉಸ್ತುವಾರಿಯನ್ನು ವಹಿಸಿಕೊಂಡಿರುವ ಜಿವಿಕೆ ಸಂಸ್ಥೆಯಾಗಲಿ, ಸರಕಾರವಾಗಲಿ ಹೊಸ ವಾಹನಗಳನ್ನು ಖರೀದಿಸಿ, ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು ಎಂಬ ಯೋಚನೆ ಮಾಡುತ್ತಿಲ್ಲ.
ಇದರಿಂದಾಗಿ ರಾಜ್ಯದ ಅನೇಕ ಕಡೆ ನಿತ್ಯ ಆಂಬ್ಯುಲೆನ್ಸ್ ಸೇವೆಯಲ್ಲಿ ವ್ಯತ್ಯಯವಾಗುತ್ತಿದೆ. ಈಗಾಗಲೇ ಆರೋಗ್ಯ ಕವಚ ಯೋಜನೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೂ ಸರಿಯಾಗಿ ಸಂಬಳ ಕೊಡುತ್ತಿಲ್ಲ, ಕೊಟ್ಟ ಸಂಬಳದಲ್ಲೂ ಕಾರಣವಿಲ್ಲದೆ ಸಾವಿರಾರು ರುಪಾಯಿಗಳನ್ನು ಕಟ್ ಮಾಡಲಾಗುತ್ತದೆ ಎಂಬ ದೂರುಗಳು ಕೇಳಿಬರುತ್ತಿವೆ. ಇದು ಹೀಗೆಯೇ ಮುಂದುವರಿದರೆ ಕಷ್ಟದ ಸಂದರ್ಭದಲ್ಲಿ ಜನರ ನೆರವಿಗೆ ನಿಲ್ಲಬೇಕಾದ ಆರೋಗ್ಯ ಇಲಾಖೆ ಸಿಬ್ಬಂದಿಯೂ ಜನರ ಬಳಿ ದುಡ್ಡು ಕೇಳುವ ಮಟ್ಟ ಕ್ಕಿಳಿಯಬಹುದು.
ಇನ್ನು ಆಂಬ್ಯುಲೆನ್ಸ್ ಸೇವೆಗೆ ಕರೆ ಮಾಡಿದರೆ ಎಷ್ಟೊ ಬಾರಿ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎನ್ನುವ ಆರೋಪವೂ ಇದೆ. ವಾರ್ಷಿಕ ಸುಮಾರು 1.50 ಲಕ್ಷ ಕರೆಗಳು 108ಗೆ ಬರುತ್ತಿವೆ. ಇದರಲ್ಲಿ ಶೇ.೪೨ರಷ್ಟು ಕರೆಗಳಿಗೆ ಮಾತ್ರ ಸೇವೆ ಒದಗಿಸಲಾಗಿದೆ ಎನ್ನಲಾಗಿದೆ.
ಆದ್ದರಿಂದ 108 ಸಹಾಯವಾಣಿಯಲ್ಲಿ ಆಗಿರುವ ದೋಷವನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು.
إرسال تعليق