ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ಸೀಟುಗಳು: ಶುಲ್ಕ ಹೆಚ್ಚಿಸದಂತೆ ಎಐಡಿಎಸ್ ಒ ಮನವಿ

 ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ಅರ್ಜಿ ಸಲ್ಲಿಸುವ ಕೋರ್ಸ್ ಗಳ ಶುಲ್ಕವನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಒಪ್ಪಿಕೊಂಡಿರುವಂತೆ ಶೇ.10ಕ್ಕಿಂತ ಹೆಚ್ಚಿಸಬಾರದು ಎಂದು ಅಖಿಲ ಭಾರತ ಪ್ರಜಾಸತಾತ್ಮಕ ವಿದ್ಯಾರ್ಥಿಗಳ ಸಂಘಟನೆ (ಎಐಡಿಎಸ್ ಒ) ಸರ್ಕಾರಕ್ಕೆ ಮನವಿ ಮಾಡಿದೆ.

       ಸಾಂದರ್ಭಿಕ ಚಿತ್ರ

By : Rekha.M
Online Desk

ಬೆಂಗಳೂರು: ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ಅರ್ಜಿ ಸಲ್ಲಿಸುವ ಕೋರ್ಸ್ ಗಳ ಶುಲ್ಕವನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಒಪ್ಪಿಕೊಂಡಿರುವಂತೆ ಶೇ.10ಕ್ಕಿಂತ ಹೆಚ್ಚಿಸಬಾರದು ಎಂದು ಅಖಿಲ ಭಾರತ ಪ್ರಜಾಸತಾತ್ಮಕ ವಿದ್ಯಾರ್ಥಿಗಳ ಸಂಘಟನೆ (ಎಐಡಿಎಸ್ ಒ) ಸರ್ಕಾರಕ್ಕೆ ಮನವಿ ಮಾಡಿದೆ.

ಸ್ನಾತಕ ಕೋರ್ಸ್ ಗಳಿಗಾಗಿ ವೈದ್ಯಕೀಯ ಮತ್ತು ಡೆಂಟಲ್ ಕೋರ್ಸ್ ಗಳಿಗೆ ಶುಲ್ಕ ಹೆಚ್ಚಳ ಅನ್ವಯವಾಗಲಿದೆ. ಸರ್ಕಾರದ ನಿರ್ಧಾರ ಖಾಸಗಿ ಕಾಲೇಜುಗಳ ಪರವಾಗಿದ್ದು, ಶಿಕ್ಷಣ ಖಾಸಗೀಕರಣಕ್ಕೆ ನೆರವಾಗಲಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಆರೋಪಿಸಿದೆ.

ಈ ವರ್ಷ ಸರಕಾರಿ ಪದವಿ ಕಾಲೇಜುಗಳಲ್ಲಿ ದಾಖಲಾತಿ ಗಣನೀಯವಾಗಿ ಕುಸಿದಿರುವುದು ಸಮಸ್ಯೆಯ ಪ್ರತಿಬಿಂಬವಾಗಿದೆ ಮತ್ತು ವಾಸ್ತವವನ್ನು ಎತ್ತಿ ತೋರಿಸುತ್ತದೆ. ಶುಲ್ಕ ಹೆಚ್ಚಳವು ವೈದ್ಯಕೀಯ ಆಕಾಂಕ್ಷಿಗಳನ್ನು ಉನ್ನತ ಶಿಕ್ಷಣವನ್ನು ಮುಂದುವರಿಸುವುದನ್ನು ಮತ್ತಷ್ಟು ನಿರುತ್ಸಾಹಗೊಳಿಸುತ್ತದೆ ಎಂದು ಸಂಘಟನೆಯ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಹೇಳಿದ್ದಾರೆ. ಶುಲ್ಕ ಹೆಚ್ಚಳದ ಬಗ್ಗೆ ಇಲಾಖೆ ಅಥವಾ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅಧಿಕೃತ ಘೋಷಣೆ ಮಾಡಬೇಕಿದೆ.




    Post a Comment

    أحدث أقدم