ವಾರಣಾಸಿ: ವಿವಾದಿತ ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿ ವಾರಣಾಸಿ ನ್ಯಾಯಾಲಯ ಸೋಮವಾರ ಮಹತ್ವದ ತೀರ್ಪು ನೀಡಲಿದೆ.
ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಹಿಂದೂ ಧರ್ಮೀಯರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ತೀರ್ಪನ್ನು ಇಂದಿಗೆ ಮುಂದೂಡಿದೆ.
ಮಸೀದಿಯಲ್ಲಿ ಪೂಜೆಗೆ ಅನುಮತಿ ನೀಡುವ ಕುರಿತು ನಡೆಯುತ್ತಿರುವ ವಿಚಾರಣೆ ಸ್ವೀಕಾರಾರ್ಹವೇ ಮತ್ತು ಇದಕ್ಕೆ ಕಾನೂನು ಕಾರಣಗಳೇನು ಎಂಬ ಬಗ್ಗೆ ವಾರಣಾಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ತೀರ್ಪು ನೀಡಲಿದ್ದಾರೆ.
ಆಗಸ್ಟ್ 24ರಂದು ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ ತೀರ್ಪನ್ನು ಸೆ.12ಕ್ಕೆ ಕಾಯ್ದಿರಿಸಿತು.
ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗವಿದೆ ಮತ್ತು ಶಿವಲಿಂಗವನ್ನು ಪೂಜಿಸಲು ಅವಕಾಶ ನೀಡಬೇಕು ಎಂದು ಕೆಲವು ಹಿಂದೂ ಧರ್ಮೀಯರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹಿಂದೂ-ಮುಸ್ಲಿಂ ವಿವಾದಗಳ ಮಧ್ಯೆ, ನ್ಯಾಯಾಲಯವು ಮಸೀದಿಯ ಸಮೀಕ್ಷೆಗೆ ಸಮಿತಿಯನ್ನು ನೇಮಿಸಿತು.
إرسال تعليق