ಪೇಸಿಎಂ ಅಲ್ಲ.. ಮೊದಲು 'ಪೇ ಫಾರ್ಮರ್'; ರೈತರ ಸಂಕಷ್ಟ ಆಲಿಸಿ: ರಾಜಕೀಯ ನಾಯಕರಿಗೆ ರೈತ ಸಂಘ ಚಾಟಿ!

 ಕರ್ನಾಟಕದಲ್ಲಿ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಆರಂಭಿಸಿರುವ ‘ಪೇಸಿಎಂ’ ಪೋಸ್ಟರ್ ಅಭಿಯಾನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ರಾಜ್ಯ ರೈತ ಸಂಘ ಮೊದಲು ಪೇ ಫಾರ್ಮರ್ ಅಭಿಯಾನದ ಮೂಲಕ ರೈತರಿಗೆ ಸಲ್ಲಬೇಕಾದ ಬಾಕಿ ಪಾವತಿ ಮಾಡಿಸುವತ್ತ  ಗಮನ ಹರಿಸಿ ಎಂದು ಚಾಟಿ ಬೀಸಿದೆ.

          ರೈತರ ಪೇ ಫಾರ್ಮರ್ ಅಭಿಯಾನ

By : Rekha.M
Online Desk

ಬೆಂಗಳೂರು: ಕರ್ನಾಟಕದಲ್ಲಿ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಆರಂಭಿಸಿರುವ ‘ಪೇಸಿಎಂ’ ಪೋಸ್ಟರ್ ಅಭಿಯಾನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ರಾಜ್ಯ ರೈತ ಸಂಘ ಮೊದಲು ಪೇ ಫಾರ್ಮರ್ ಅಭಿಯಾನದ ಮೂಲಕ ರೈತರಿಗೆ ಸಲ್ಲಬೇಕಾದ ಬಾಕಿ ಪಾವತಿ ಮಾಡಿಸುವತ್ತ  ಗಮನ ಹರಿಸಿ ಎಂದು ಚಾಟಿ ಬೀಸಿದೆ.

ಕರ್ನಾಟಕದಲ್ಲಿ ಕಬ್ಬಿಗೆ ಸೂಕ್ತ ಬೆಲೆಗೆ ಆಗ್ರಹಿಸಿ ರೈತ ಸಂಘಟನೆ ಕರ್ನಾಟಕ ರಾಜ್ಯ ರೈತ ಸಂಘ ಸೋಮವಾರ ‘ಪೇಫಾರ್ಮರ್’ ಅಭಿಯಾನವನ್ನು ಆರಂಭಿಸಿದ್ದು, ಕೂಡಲೇ ರೈತರಿಗೆ ಬಾಕಿ ಹಣ ಪಾವತಿಸುವಂತೆ ರೈತ ನಾಯಕರು ಆಗ್ರಹಿಸಿದ್ದಾರೆ. ಈ ಕುರಿತು ಮಾತನಾಡಿರುವ ಕೆಆರ್‌ಆರ್‌ಎಸ್‌ನ ದರ್ಶನ್ ಬಣ, 'ಇಲ್ಲಿ ಪಾವತಿದಾರರು ಒಪ್ಪಿಕೊಂಡಿದ್ದಾರೆ, ಕಬ್ಬಿಗೆ ಪ್ರತಿ ಟನ್‌ಗೆ 4,500 ರೂ. ಎಂದು... ಆದಾಗ್ಯೂ ರೈತರಿಗೆ ಬೆಲೆ ಸಿಗುತ್ತಿಲ್ಲ ಎಂದು ಕಿಡಿಕಾರಿದರು. ದರ್ಶನ್ ಪುಟ್ಟಣ್ಣಯ್ಯ ಅವರು ಮಾಜಿ ಶಾಸಕ ಮತ್ತು ಕೆಆರ್‌ಆರ್‌ಎಸ್ ಮುಖಂಡ ಕೆ ಎಸ್ ಪುಟ್ಟಣ್ಣಯ್ಯ ಅವರ ಪುತ್ರ.

“ಕಾಂಗ್ರೆಸ್, ಬಿಜೆಪಿ ಮತ್ತು ಇತರ ಪಕ್ಷಗಳು ಪೋಸ್ಟರ್ ವಾರ್‌ನೊಂದಿಗೆ ಕೆಸರೆರಚಾಟದಲ್ಲಿ ತೊಡಗಿವೆ. ಆದರೆ ನಮ್ಮ ಅಭಿಯಾನವು ರೈತರ ಹಿತಾಸಕ್ತಿಯಾಗಿದೆ. ಕರ್ನಾಟಕದಲ್ಲಿ ಪ್ರತಿ ಟನ್‌ಗೆ 2,500 ರಿಂದ 2,800 ರೂ ನೀಡಲಾಗುತ್ತಿದ್ದು, ಉತ್ತರ ಪ್ರದೇಶದಲ್ಲಿ 3,500 ರೂ. ಇರುವಂತೆಯೇ ನಮ್ಮಲ್ಲೂ ಕಬ್ಬಿಗೆ ನ್ಯಾಯಯುತ ಲಾಭದಾಯಕ ಬೆಲೆ (ಎಫ್‌ಆರ್‌ಪಿ) ನೀಡಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ದರ್ಶನ್ ಟಿಎನ್‌ಐಇಗೆ ತಿಳಿಸಿದರು.

ಮಂಡ್ಯದಲ್ಲಿ ‘ಪೇಫಾರ್ಮರ್’ ಅಭಿಯಾನಕ್ಕೆ ಚಾಲನೆ ನೀಡಿದ ರೈತ ಸಂಘದ ಸದಸ್ಯರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪೋಸ್ಟರ್‌ಗಳನ್ನು ಅಂಟಿಸಿ ರಾಜ್ಯಾದ್ಯಂತ ಜಾಗೃತಿ ಮೂಡಿಸಿದರು. ಸರ್ಕಾರ ತಮ್ಮ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಮೈಸೂರು ದಸರಾ ಸಂದರ್ಭದಲ್ಲಿ ‘ರಸ್ತಾ ರೋಕೋ’ ನಡೆಸುವುದಾಗಿ ಎಚ್ಚರಿಸಿದರು.

ರೈತ ಹೋರಾಟ ದಿಗ್ಗಜ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಪುತ್ರ ಪಚ್ಚೆ ಮಾತನಾಡಿ, ರೈತರಿಂದ ‘ಪೇಫಾರ್ಮರ್’ ಭಿತ್ತಿಪತ್ರ ಅಭಿಯಾನವನ್ನು ಸ್ವಾಗತಿಸಿದರು. ಸಕ್ಕರೆ ಕಾರ್ಖಾನೆಗಳು ಕಾಕಂಬಿಯಂತಹ ವಿವಿಧ ಉಪ ಉತ್ಪನ್ನಗಳ ಮೂಲಕ ಟನ್‌ಗೆ 10,000 ರೂ.ಗೂ ಹೆಚ್ಚು ಲಾಭ ಪಡೆಯುತ್ತವೆ, ಆದ್ದರಿಂದ ಪ್ರತಿ ಟನ್‌ಗೆ ಎಫ್‌ಆರ್‌ಪಿ 4,500 ರೂ. ನೀಡಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಮುಖಂಡ ಕುರುಬೂರು ಶಾಂತಕುಮಾರ್ ಟಿಎನ್‌ಐಇಗೆ ಮಾಹಿತಿ ನೀಡಿ, ಕರ್ನಾಟಕದಲ್ಲಿ ಕಬ್ಬು ಬೆಳೆಗಾರರಿಗೆ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳು 200 ಕೋಟಿ ರೂ ಬಾಕಿ ನೀಡಬೇಕಿದ್ದು, ಎಫ್‌ಆರ್‌ಪಿ ಪ್ರತಿ ಟನ್‌ಗೆ 3,050 ರೂ.ಗಳಾಗಿದ್ದು, ಇದನ್ನು ಕನಿಷ್ಠ 3,500 ರೂ.ಗೆ ಹೆಚ್ಚಿಸಬೇಕು ಎಂದು ಅವರು ಹೇಳಿದರು.

ಭ್ರಷ್ಟಾಚಾರದ ಕುರಿತ ಕಾಂಗ್ರೆಸ್-ಬಿಜೆಪಿ ಜಗಳಕ್ಕೆ ಪ್ರತಿಕ್ರಿಯೆಯಾಗಿ, “ನಮ್ಮ ಆದ್ಯತೆಯು #ಪೇಫಾರ್ಮರ್‌ಗೆ ಆಗಿರಬೇಕೇ ಹೊರತು #ಪೇಸಿಎಂ ಅಥವಾ #ಪೇಮೇಡಮ್ ಗೆ ಅಲ್ಲ,” ಎಂದು ಸಿಇಒ ಮತ್ತು ಆರ್ಗ್ಯಾನಿಕ್ ಮಂಡ್ಯದ ಸಂಸ್ಥಾಪಕ ಮಧುಚಂದನ್ ಎಸ್‌ಸಿ ಟ್ವೀಟ್ ಮಾಡಿದ್ದಾರೆ. ಕುತೂಹಲಕಾರಿಯಾಗಿ, ಮಧುಚಂದನ್ ಮಂಡ್ಯದಿಂದ ಶಾಸಕ ಆಕಾಂಕ್ಷಿಯಾಗಿದ್ದು, 2023 ರ ವಿಧಾನಸಭಾ ಚುನಾವಣೆಯಲ್ಲಿ ರೈತ ಸಂಘದ ಟಿಕೆಟ್‌ನಲ್ಲಿ ಚುನಾವಣಾ ಧುಮುಕುವ ಸಾಧ್ಯತೆಯಿದೆ.





Post a Comment

أحدث أقدم