ಸಿ ಬಿ ಐ ದಾಳಿ : ಜಮ್ಮು - ಕಾಶ್ಮೀರ ಸಬ್ ಇನ್ಸ್ಪೇಕ್ಟರ್ ನೇಮಕಾತಿ ಹಗರಣ ; ಬೆಂಗಳೂರಿನ ೩೬ ಸ್ಥಳದಲ್ಲಿ ಪರಿಶೀಲನೆ

 ಜಮ್ಮು ಮತ್ತು ಕಾಶ್ಮೀರದ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ(ಸಿಬಿಐ) ಮಂಗಳವಾರ ಬೆಂಗಳೂರಿನ ಕೆಲವು ಸೇರಿದಂತೆ 36 ಸ್ಥಳಗಳಲ್ಲಿ ಶೋಧ ನಡೆಸಿದೆ.

                  ಸಾಂದರ್ಭಿಕ ಚಿತ್ರ

By : Rekha.M
Online Desk

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ ಮಂಗಳವಾರ ಬೆಂಗಳೂರಿನ ಕೆಲವು ಸೇರಿದಂತೆ 36 ಸ್ಥಳಗಳಲ್ಲಿ ಶೋಧ ನಡೆಸಿದೆ.

ಇನ್‌ಸ್ಪೆಕ್ಟರ್ (SI) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಮ್ಮು, ಶ್ರೀನಗರ, ಕರ್ನಾಲ್, ಮಹೇಂದರ್‌ಗಢ, ಹರಿಯಾಣದ ರೇವಾರಿ, ಗುಜರಾತ್‌ನ ಗಾಂಧಿನಗರ, ಉತ್ತರ ಪ್ರದೇಶದ ಗಾಜಿಯಾಬಾದ್, ಕರ್ನಾಟಕದ ಬೆಂಗಳೂರು ಮತ್ತು ದೆಹಲಿ ಸೇರಿದಂತೆ ದೇಶದಾದ್ಯಂತ ಸುಮಾರು 36 ಸ್ಥಳಗಳಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ದಾಳಿ ನಡೆಸಿದೆ.

ಪರಿಶೀಲನೆ ವೇಳೆ ಕೆಲವು ತಿದ್ದುಪಡಿ ಮಾಡಿದ ದಾಖಲೆಗಳು, ಡಿಜಿಟಲ್ ಪುರಾವೆಗಳು ದೊರೆತಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ,  ಸಿಬಿಐ ತನಿಖೆಯ ಸಂದರ್ಭದಲ್ಲಿ, ಬೆಂಗಳೂರಿನ ಕೋಚಿಂಗ್ ಸೆಂಟರ್‌ನ ಮಾಲೀಕ, ಮಾರ್ಚ್ 27, 2022 ರಂದು ಲಿಖಿತ ಪರೀಕ್ಷೆಯಲ್ಲಿ ಅಕ್ರಮಗಳಲ್ಲಿ ಕೆಲವು ವ್ಯಕ್ತಿಗಳು ಭಾಗಿಯಾಗಿರುವುದು ಕಂಡುಬಂದಿದೆ.

ಜೂನ್ 4, 2022 ರಂದು ಫಲಿತಾಂಶಗಳನ್ನು ಪ್ರಕಟಿಸಲಾಯಿತು. ಜೆಕೆಎಸ್‌ಎಸ್‌ಬಿ ಅಧಿಕಾರಿಗಳ ಪಿತೂರಿ ನಡೆಸರುವ ಪ್ರಕರಣವನ್ನು ಪರಿಶೀಲಿಸಲು ಜೆ & ಕೆ ಸರ್ಕಾರವು ತನಿಖಾ ಸಮಿತಿಯನ್ನು ರಚಿಸಿತ್ತು. ಜಮ್ಮು, ರಜೌರಿ ಮತ್ತು ಸಾಂಬಾ ಜಿಲ್ಲೆಗಳಿಂದ ಅಸಹಜವಾಗಿ ಹೆಚ್ಚಿನ ಶೇಕಡಾವಾರು ಆಯ್ಕೆಯಾಗಿದೆ ಎಂದು ಆರೋಪಿಸಲಾಗಿದೆ.





Post a Comment

أحدث أقدم