ಹಿಂದೂ ಆಗಿರುವವರೆಗೂ ನೀನು ಶೂದ್ರ. ಶೂದ್ರನಾಗಿರುವವರೆಗೂ ನೀನು ವೇಶ್ಯೆಯ ಮಗ. ನೀನು ಹಿಂದೂ ಆಗಿರುವವರೆಗೂ ದಲಿತ ಮತ್ತು ನೀನು ಹಿಂದೂ ಆಗಿರುವವರೆಗೆ ಅಸ್ಪೃಶ್ಯ ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಎ.ರಾಜಾ
ಚೆನ್ನೈ: ಡಿಎಂಕೆ ಪ್ರಧಾನ ಕಾರ್ಯದರ್ಶಿ ಎ.ರಾಜಾ ಶೂದ್ರರ ಬಗ್ಗೆ ಮಾತನಾಡುವ ಮೂಲಕ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದಾರೆ. ಹಿಂದೂ ಆಗಿರುವವರೆಗೂ ನೀನು ಶೂದ್ರ. ಶೂದ್ರನಾಗಿರುವವರೆಗೂ ನೀನು ವೇಶ್ಯೆಯ ಮಗ. ನೀನು ಹಿಂದೂ ಆಗಿರುವವರೆಗೂ ದಲಿತ ಮತ್ತು ನೀನು ಹಿಂದೂ ಆಗಿರುವವರೆಗೆ ಅಸ್ಪೃಶ್ಯ ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಮನುಸ್ಮೃತಿಯಲ್ಲಿ ಶೂದ್ರರನ್ನು ಅವಮಾನಿಸಲಾಗಿದೆ ಮತ್ತು ಸಮಾನತೆ, ಶಿಕ್ಷಣ, ಉದ್ಯೋಗ ಮತ್ತು ದೇವಾಲಯಗಳಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ ಎಂದು ನೀಲಗಿರಿ ಕ್ಷೇತ್ರದ ಸಂಸದರೂ ಆಗಿರುವ ರಾಜಾ ಈ ರೀತಿಯ ಹೇಳಿಕೆ ನೀಡಿದ್ದಾರೆ.
ನೀವು ಕ್ರಿಶ್ಚಿಯನ್, ಮುಸ್ಲಿಂ ಅಥವಾ ಪರ್ಷಿಯನ್ ಆಗಿಲ್ಲದಿದ್ದರೆ, ಹಿಂದೂ ಆಗಿರುತ್ತೀರಾ ಎಂದು ಸುಪ್ರೀಂ ಕೋರ್ಟ್ ಹೇಳುತ್ತಿದೆ. ಇಂತಹ ದುಷ್ಕೃತ್ಯವನ್ನು ಬೇರೆ ಯಾವುದೇ ದೇಶದಲ್ಲಿ ನೋಡಿದ್ದೀರಾ ಎಂದು ಟೀಕಿಸಿದ್ದಾರೆ.
ಕಳೆದ ವಾರ ತಮಿಳುನಾಡಿನ ನಾಮಕ್ಕಲ್‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಎ ರಾಜಾ ಅವರು, ಹಿಂದೂಗಳ ನಂಬಿಕೆ ಹಾಗೂ ಜಾತಿ ಪದ್ಧತಿಯ ವಿಚಾರವಾಗಿ ಮಾತನಾಡಿದ್ದರು. ಈ ವೇಳೆ ವರ್ಣ ವ್ಯವಸ್ಥೆಯಲ್ಲಿ ಅತ್ಯಂತ ಕೆಳವರ್ಗದ ಶೂದ್ರರು, ವೇಶ್ಯೆಯರ ಮಕ್ಕಳು, ಹಿಂದೂ ಧರ್ಮದ ಆಚರಣೆಗಳನ್ನು ಮಾಡುವುದರಿಂದ ಅವರು ಹಿಂದೂಗಳಾಗಿಯೇ ಉಳಿಯುತ್ತಾರೆ ಎಂದಿದ್ದರು.
"ನಿಮ್ಮಲ್ಲಿ ಎಷ್ಟು ಮಂದಿ ವೇಶ್ಯೆಯರ ಮಕ್ಕಳಾಗಿ ಉಳಿಯಲು ಬಯಸುತ್ತೀರಿ? ನಿಮ್ಮಲ್ಲಿ ಎಷ್ಟು ಮಂದಿ ಅಸ್ಪೃಶ್ಯರಾಗಿ ಉಳಿಯಲು ಬಯಸುತ್ತೀರಿ? ಈ ಪ್ರಶ್ನೆಗಳ ಬಗ್ಗೆ ನಾವು ಧ್ವನಿ ಎತ್ತಿದರೆ ಮಾತ್ರ ಅದು ಸನಾತನ ಧರ್ಮ ಒಡೆಯುವಲ್ಲಿ ಪ್ರಮುಖ ವಿಷಯವಾಗುತ್ತದೆ ಎಂದಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಟ್ವಿಟರ್‌ನಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ರಾಜಾ, "ಶೂದ್ರರು ಯಾರು? ಅವರು ಹಿಂದೂಗಳಲ್ಲವೇ? ಮನುಸ್ಮೃತಿಯಲ್ಲಿ ಅವರನ್ನು ಏಕೆ ಅವಮಾನಿಸಲಾಗಿದೆ ಮತ್ತು ಸಮಾನತೆ, ಶಿಕ್ಷಣ, ಉದ್ಯೋಗ ಮತ್ತು ದೇವಾಲಯ ಪ್ರವೇಶವನ್ನು ನಿರಾಕರಿಸಲಾಗಿದೆ ಎಂದಿದ್ದಾರೆ.
ಈ ಕುರಿತಂತೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಟ್ವೀಟ್ ಮಾಡಿದ್ದು, ಇವರು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ತಮಿಳುನಾಡಿನ ರಾಜಕೀಯ ಪರಿಸ್ಥಿತಿ ಹೀಗಿರುವುದಕ್ಕೆ ಕ್ಷಮಿಸಿ. ಸಂಸದರು ಇತರರನ್ನು ಓಲೈಸುವ ಉದ್ದೇಶದಿಂದ ಮತ್ತೊಂದು ಸಮುದಾಯದ ದ್ವೇಷವನ್ನು ಬಿತ್ತರಿಸುತ್ತಿದ್ದಾರೆ. ತಮಿಳುನಾಡು ತಮ್ಮದೇ ಎಂದು ಭಾವಿಸುವ ಈ ರಾಜಕೀಯ ನಾಯಕರ ಮನಸ್ಥಿತಿ ಅತ್ಯಂತ ದುರದೃಷ್ಟಕರ ಎಂದು ಕಿಡಿಕಾರಿದ್ದಾರೆ.
إرسال تعليق