ಜೆಡಿಎಸ್ ಶಾಸಕ ಸಾರಾ ಮಹೇಶ್ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು

 ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ ಹಿನ್ನೆಲೆಯಲ್ಲಿ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಒಂದು ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ ಎಂದು ಸಾ. ರಾ. ಮಹೇಶ್ ಹೇಳಿದ್ದಾರೆ.

                             ರೋಹಿಣಿ ಸಿಂಧೂರಿ

 By : Rekha.M

Online Desk

ಮೈಸೂರು: ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ ಹಿನ್ನೆಲೆಯಲ್ಲಿ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಒಂದು ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ ಎಂದು ಸಾ. ರಾ. ಮಹೇಶ್ ಹೇಳಿದ್ದಾರೆ.

ಮೈಸೂರು ಜಿಲ್ಲಾಧಿಕಾಯಾಗಿದ್ದಾಗ ಸರ್ಕಾರದ ಹಣ ದುರುಪಯೋಗ ಮಾಡಿದರು. ಕೋವಿಡ್ ಸಂದರ್ಭದಲ್ಲಿ ಬೇಜವಾಬ್ದಾರಿಯಿಂದ ವರ್ತಿಸಿದ್ದರಿಂದ ಜಿಲ್ಲೆಯಲ್ಲಿ ಸಾವಿರಾರು ಮಂದಿ ಕುಟುಂಬದವರನ್ನು ಕಳೆದುಕೊಂಡರು. ಅದನ್ನು ಮಚ್ಚಿಡಲು ಪರೀಕ್ಷೆಯ ಪ್ರಮಾಣವನ್ನೇ ತಗ್ಗಿಸಿದರು. ಸಾವಿನ ಸಂಖ್ಯೆ ಮುಚ್ಚಿಟ್ಟರು.

ಕೋವಿಡ್ ಸಂದರ್ಭದ ದೌರ್ಬಲ್ಯ ಹಾಗೂ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಭೂ ಅಕ್ರಮದ ವಿಚಾರ ತೆಗೆದರು. 3 ದಶಕಗಳಿಂದ ರಾಜಕೀಯ ಜೀವನದಲ್ಲಿರುವ ನನಗೆ ಕಳಂಕ ಹಚ್ಚಲು ಪ್ರಯತ್ನಿಸಿದ್ದಾರೆ’ ಎಂದು ದೂರಿದರು. ‘ರಾಜಕಾರಣವನ್ನೇ ಬಿಟ್ಟೇನು, ಆದರೆ, ರೋಹಿಣಿಯಂಥವರಿಗೆ ಬುದ್ಧಿ ಕಲಿಸದೆ ಬಿಡುವುದಿಲ್ಲ. ಇದಕ್ಕಾಗಿ ಹೋರಾಡುತ್ತಿರುವೆ’ ಎಂದು ಸಾ.ರಾ ಮಹೇಶ್ ಗುಡುಗಿದ್ದಾರೆ.

ಕೋವಿಡ್ ಪಾಸಿಟಿವಿಟಿ ದರ ಹೆಚ್ಚಿದ್ದರೂ ಸಾವನ್ನು ನಿಯಂತ್ರಿಸಿದ್ದೇವೆ ಎಂದಿದ್ದರು. ಇದೆಲ್ಲದರ ನಂತರ ಹಿಂದಿನ ಮುಖ್ಯ ಕಾರ್ಯದರ್ಶಿ ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ, ಅವರ ವರ್ಗಾವಣೆಯಾಯಿತು. ಅವರನ್ನು ಅಮಾನತು ಮಾಡಬೇಕು ಎನ್ನುವುದು ನನ್ನ ವಾದವಾಗಿದೆ’ ಎಂದರು.

ವರ್ಗಾವಣೆಗೊಂಡ ಅವರು ಭೂ ಅಕ್ರಮದಿಂದ ನನ್ನ ವರ್ಗಾವಣೆ ಆಗಿದೆ ಎಂದು ಬಿಂಬಿಸಲು ಅವರು ಹೊರಟಿದ್ದರು. ಈ ವೇಳೆಯೆ ನಾನು ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಹೇಳಿದ್ದೆ ಅದರಂತೆ ಇದೀಗ ಪ್ರಕರಣ ದಾಖಲಿಸಿದ್ದೇವೆ ಎಂದು ಸಾ. ರಾ. ಮಹೇಶ್ ಹೇಳಿದರು. ಈ ಸಂಬಂಧ ರೋಹಿಣಿ ಅವರ ವಿರುದ್ಧ ಒಂದು ಕೋಟಿ ರೂ.ನ ಮಾನನಷ್ಟ ಮೊಕದ್ದಮೆ ಹೂಡಿದ್ದೇವೆ ಎಂದು ಅವರು ತಿಳಿಸಿದರು.




Post a Comment

أحدث أقدم