ಮುಂದಿನ ವರ್ಷ ಅಕ್ಟೋಬರ್‌ನಿಂದ ಕಾರುಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಿದ ಸರ್ಕಾರ

 ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರವು ಮುಂದಿನ ವರ್ಷ ಅಕ್ಟೋಬರ್ ತಿಂಗಳಿನಿಂದ ಪ್ರಯಾಣಿಕರ ವಾಹನಗಳಲ್ಲಿ ಕನಿಷ್ಠ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಿದೆ.

        ಪ್ರಾತಿನಿಧಿಕ ಚಿತ್ರ

By : Rekha.M
Online Desk

ನವದಹೆಲಿ: ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರವು ಮುಂದಿನ ವರ್ಷ ಅಕ್ಟೋಬರ್ ತಿಂಗಳಿನಿಂದ ಪ್ರಯಾಣಿಕರ ವಾಹನಗಳಲ್ಲಿ ಕನಿಷ್ಠ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಿದೆ. ಅಲ್ಲದೆ, ಈ ನಿಯಮ ಉಲ್ಲಂಘಿಸುವವರಿಗೆ ದಂಡದೊಂದಿಗೆ ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ಹೇಳಿದೆ.

ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದಾಗಿ ಪ್ರಯಾಣಿಕ ವಾಹನಗಳಲ್ಲಿ 2023ರ ಅಕ್ಟೋಬರ್‌ನಿಂದ ಆರು ಏರ್ ಬ್ಯಾಗ್ ಕಡ್ಡಾಯ ಜಾರಿಗೆ ಬರಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಇದೇ ಅಕ್ಟೋಬರ್ 1 ರಿಂದ 8 ಆಸನಗಳು ಇರುವಂತಹ ಕಾರುಗಳಲ್ಲಿ ಕನಿಷ್ಠ 6 ಏರ್‌ಬ್ಯಾಗ್‌ಗಳು ಇರಲೇಬೇಕು ಎಂಬ ನಿಯಮವನ್ನು ಜಾರಿಗೊಳಿಸಲಾಗುತ್ತದೆ ಎಂದು ಹೇಳಿತ್ತು.

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವರು, 'ಜಾಗತಿಕ ಆಟೋ ಪೂರೈಕೆ ಸರಪಳಿಯು ಹಲವಾರು ತೊಂದರೆಗಳನ್ನು ಅನುಭವಿಸುತ್ತಿದೆ. ಇದು ಸ್ಥೂಲ ಆರ್ಥಿಕತೆ ಮೇಲೂ ಪರಿಣಾಮ ಬೀರುತ್ತಿದೆ. ಹೀಗಾಗಿ, ಪ್ರಯಾಣಿಕ ಕಾರುಗಳಲ್ಲಿ ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು  ಈ ಕೂಡಲೇ ಏರ್‌ಬ್ಯಾಗ್‌ ಕಡ್ಡಾಯಗೊಳಿಸುವ ಪ್ರಸ್ತಾವನೆಯನ್ನು ಒಂದು ವರ್ಷ ಮುಂದೂಡುತ್ತಿದ್ದೇವೆ' ಎಂದು ಟ್ವೀಟ್‌ ಮಾಡಿದ್ದಾರೆ.

    'ಆಟೋ ಕಂಪನಿಗಳು ಪ್ರಯಾಣಿಕ ವಾಹನಗಳ ವೆಚ್ಚ ಮತ್ತು ಭಿನ್ನತೆ ನೋಡದೆ ಅತ್ಯಂತ ಉನ್ನತಮಟ್ಟದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಅವುಗಳ ಆದ್ಯ ಕರ್ತವ್ಯವಾಗಿರುತ್ತದೆ' ಎಂದು ಗಡ್ಕರಿ ತಿಳಿಸಿದ್ದಾರೆ.

    ಭೀಕರ ರಸ್ತೆ ಅಪಘಾತದಲ್ಲಿ ಟಾಟಾ ಗ್ರೂಪ್‌ನ ಮಾಜಿ ಅದ್ಯಕ್ಷ ಸೈರಸ್ ಮಿಸ್ತ್ರಿ ಅವರ ಮರಣದ ನಂತರ, ತಜ್ಞರು ಮತ್ತು ವಿಮರ್ಶಕರು ಸಾರಿಗೆ ಮತ್ತು ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿನ ಲೋಪಗಳನ್ನು ಎತ್ತಿ ತೋರಿಸಿದ್ದಾರೆ. ಸೆಪ್ಟೆಂಬರ್‌ನಲ್ಲಿ ಸರ್ಕಾರವು ಕಾರಿನಲ್ಲಿರುವ ಎಲ್ಲಾ ಪ್ರಯಾಣಿಕರಿಗೆ ಸೀಟ್‌ಬೆಲ್ಟ್ ಅನ್ನು ಕಡ್ಡಾಯಗೊಳಿಸಿತು.


    Post a Comment

    أحدث أقدم