ಬೆಂಗಳೂರು: 5 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ, ಮಹಿಳೆ ಸೇರಿ ಏಳು ಪೆಡ್ಲರ್ ಗಳ ಬಂಧನ

 ದಕ್ಷಿಣ ವಿಭಾಗದ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸುಮಾರು 5 ಕೋಟಿ ರೂಪಾಯಿ ಮೌಲ್ಯದ 6 ಕೆಜಿ ಹಶಿಷ್ ಆಯಿಲ್ ಮತ್ತು 556 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

                                      ಡ್ರಗ್ಸ್

By : Rekha.M
Online Desk

ಬೆಂಗಳೂರು: ದಕ್ಷಿಣ ವಿಭಾಗದ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸುಮಾರು 5 ಕೋಟಿ ರೂಪಾಯಿ ಮೌಲ್ಯದ 6 ಕೆಜಿ ಹಶಿಷ್ ಆಯಿಲ್ ಮತ್ತು 556 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಮಹಿಳೆ ಸೇರಿದಂತೆ ಏಳು ಮಂದಿ ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಬಂಧಿಸಲು ಆಂಧ್ರಪ್ರದೇಶಕ್ಕೆ ತೆರಳಿದ್ದ ಟೆಂಪೋ ಟ್ರಾವೆಲರ್‌ಗೆ ಕಲ್ಲು ಎಸೆದು ಪರಾರಿಯಾಗಿರುವ ಇಬ್ಬರು ಅಂತಾರಾಜ್ಯ ಮಾದಕ ದ್ರವ್ಯ ದಂಧೆಕೋರರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಆದಾಗ್ಯೂ, ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಅಡಗುತಾಣದಿಂದ ಹಶಿಷ್ ತೈಲವನ್ನು ವಶಪಡಿಸಿಕೊಂಡಿದ್ದಾರೆ. ಕೆ.ಜಿ.ನಗರ ಮತ್ತು ಜಯನಗರ ಪೊಲೀಸರು ಒಂದು ಆಟೋರಿಕ್ಷಾ ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

7 ದಂಧೆಕೋರರ ಪೈಕಿ ಐವರನ್ನು ಕೆ.ಜಿ.ನಗರ ಪೊಲೀಸರು ನಂಜಾಂಬ ಅಗ್ರಹಾರ ಬಳಿ ಬಂಧಿಸಿದ್ದಾರೆ. 
ಬಂಧಿತ ಆರೋಪಿಗಳನ್ನು ಗೋರಿಪಾಳ್ಯದ ನಯಾಜ್ ಪಾಷಾ, ಕೋಟ್ಟಿಗೆಪಾಳ್ಯದ ನೂರ್ ಅಹಮ್ಮದ್, ವಾಲ್ಮೀಕಿನಗರದ ಇಮ್ರಾನ್ ಪಾಷಾ, ಕೆಪಿ ಅಗ್ರಹಾರದ ಕಿರಣ್ ಅಲಿಯಾಸ್ ಬಂಗಾರಪ್ಪ ಹಾಗೂ ದೊಡ್ಡಬಸ್ತಿಯ ಮಹಿಳಾ ಪೆಡ್ಲರ್ ಮುಬಾರಕ್ ಎಂದು ಗುರುತಿಸಲಾಗಿದೆ.

ಆರೋಪಿಗಳು ಒಡಿಶಾದಿಂದ ಗಾಂಜಾವನ್ನು ರೈಲಿನಲ್ಲಿ ತಂದು ಕೆಆರ್ ಪುರಂ ರೈಲು ನಿಲ್ದಾಣದಲ್ಲಿ ಇಳಿಯುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಕೆಂಗೇರಿಯ ಮನೆಯೊಂದರಲ್ಲಿ ಶೋಧ ನಡೆಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಜಯನಗರ ಪೊಲೀಸರು ಬಂಧಿಸಿರುವ ಇತರ ಇಬ್ಬರು ಪೆಡ್ಲರ್‌ಗಳನ್ನು ಸಾಗರ್ ಸಾಹೋ ಮತ್ತು ಶೇಷಗಿರಿ ಎಂದು ಗುರುತಿಸಲಾಗಿದೆ.

ಬನಶಂಕರಿಯ ನಯಾಜ್ ಪಾಷಾ ಎಂಬ ಮಾದಕ ವ್ಯಸನಿಯನ್ನು ಪೊಲೀಸರು ಆರಂಭದಲ್ಲಿ ವಿಚಾರಣೆ ನಡೆಸಿದ್ದರು. ಆತನ ಮಾಹಿತಿ ಮೇರೆಗೆ ಪೊಲೀಸರು ಅಂತಾರಾಜ್ಯ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಲು ಆಂಧ್ರ ಪ್ರದೇಶಕ್ಕೆ ತೆರಳಿದ್ದರು. ನಾಲ್ವರು ಪೆಡ್ಲರ್‌ಗಳ ಪೈಕಿ ಇಬ್ಬರು ಪರಾರಿಯಾಗಿದ್ದಾರೆ. ಬಂಧಿತ ಇಬ್ಬರಿಂದ ಹಶಿಷ್ ತೈಲವನ್ನು ವಶಪಡಿಸಿಕೊಳ್ಳಲಾಗಿದೆ.





Post a Comment

أحدث أقدم