ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಾಲ್ವರು ಸಾಧುಗಳನ್ನು ಥಳಿಸಿದ್ದ ಪ್ರಕರಣದಲ್ಲಿ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.
ಪೊಲೀಸ್ ಠಾಣೆ
Online Desk
ಮುಂಬೈ: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಾಲ್ವರು ಸಾಧುಗಳನ್ನು ಥಳಿಸಿದ್ದ ಪ್ರಕರಣದಲ್ಲಿ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.
ಮಕ್ಕಳ ಕಳ್ಳರೆಂದು ತಪ್ಪು ಭಾವಿಸಿ ಸಾಧುಗಳನ್ನು ಸಾರ್ವಜನಿಕರು ಥಳಿಸಿದ್ದರು. ಈ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು 20 ಮಂದಿ ವಿರುದ್ಧ ಪ್ರಕರಾಣ ದಾಖಲಿಸಿದ್ದಾರೆ.
ತಮ್ಮನ್ನು ಥಳಿಸಿದವರ ವಿರುದ್ಧ ಸಾಧುಗಳು ಯಾವುದೇ ದೂರನ್ನು ದಾಖಲಿಸಿಲ್ಲ ಹಾಗೂ ಪೊಲೀಸರ ಸಮ್ಮುಖದಲ್ಲಿ ಅವರು ಉತ್ತರ ಪ್ರದೇಶದ ಅಖಾಡ ಒಂದರ ಸದಸ್ಯರು ಎಂಬ ಸ್ಪಷ್ಟನೆ ದೊರೆತು ಗೊಂದಲ ಬಗೆಹರಿಯುತ್ತಿದ್ದಂತೆಯೇ ಅವರು ಆ ಸ್ಥಳದಿಂದ ನಿರ್ಗಮಿಸಿದ್ದಾರೆ. ಸಾಧುಗಳನ್ನು ಕೋಲಿನಿಂದ ಥಳಿಸುತ್ತಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
إرسال تعليق