ಕೋವಿಡ್ 2ನೇ ಅಲೆಯ ಸಮಯದಲ್ಲಿ ಆಮ್ಲಜನಕದ ಕೊರತೆಯಿಂದ ಉಂಟಾದ ಸಾವುಗಳನ್ನು ಕಂಡುಕೊಳ್ಳಲು ಮತ್ತು ಸಂತ್ರಸ್ತರ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ಒದಗಿಸಲು ಪರಿಶೀಲಿಸುವ ಅಗತ್ಯವಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಪ್ರಾತಿನಿಧಿಕ ಚಿತ್ರ
ನವದೆಹಲಿ: ಕೋವಿಡ್ 2ನೇ ಅಲೆಯ ಸಮಯದಲ್ಲಿ ಆಮ್ಲಜನಕದ ಕೊರತೆಯಿಂದ ಉಂಟಾದ ಸಾವುಗಳನ್ನು ಕಂಡುಕೊಳ್ಳಲು ಮತ್ತು ಸಂತ್ರಸ್ತರ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ಒದಗಿಸಲು ಪರಿಶೀಲಿಸುವ ಅಗತ್ಯವಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಸರ್ಕಾರದ ಈ ಸಂಪೂರ್ಣ ಅಜ್ಞಾನದಿಂದ ನಿರಾಶೆಗೊಂಡಿರುವ ಸಮಿತಿಯು, ವಿಶೇಷವಾಗಿ ಕೋವಿಡ್‌ನ ಎರಡನೇ ಅಲೆಯ ಸಮಯದಲ್ಲಿ ಆಮ್ಲಜನಕದ ಕೊರತೆಯಿಂದ ಮೃತಪಟ್ಟವರು ಎಷ್ಟು ಮಂದಿ ಎಂಬುದನ್ನು ಪರಿಶೀಲಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಬಲವಾಗಿ ಶಿಫಾರಸು ಮಾಡುತ್ತದೆ' ಎಂದು ಸಮಾಜವಾದಿ ಪಕ್ಷದ ಸದಸ್ಯ ರಾಮ್ ಗೋಪಾಲ್ ಯಾದವ್ ನೇತೃತ್ವದ ಸಮಿತಿ ತಿಳಿಸಿರುವುದಾಗಿ ವರದಿ ಹೇಳಿದೆ.
ರಾಜ್ಯಗಳೊಂದಿಗೆ ಸಮನ್ವಯದೊಂದಿಗೆ ಸಚಿವಾಲಯವು, ಆಮ್ಲಜನಕದ ಕೊರತೆಯಿಂದ ಸಂಭವಿಸಿದ ಸಾವುಗಳನ್ನು ಲೆಕ್ಕಪರಿಶೋಧಿಸಬೇಕು ಮತ್ತು ಕೋವಿಡ್ ಸಾವುಗಳ ದೃಢವಾದ ದಾಖಲಾತಿಯನ್ನು ಸಕ್ರಿಯಗೊಳಿಸಬೇಕು. ವಾಸ್ತವವಾಗಿ ಇದು ಸರ್ಕಾರದ ಸ್ಪಂದಿಸುವ ಮತ್ತು ಜವಾಬ್ದಾರಿಯುತ ನಡವಳಿಕೆಯನ್ನು ಉಂಟುಮಾಡುತ್ತದೆ ಮತ್ತು ನೀತಿ ರಚನೆಯ ಎಚ್ಚರಿಕೆ ಮತ್ತು ಸಾಂದರ್ಭಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಸುಧಾರಿಸಲು ನೆರವಾಗುತ್ತದೆ ಎಂದು ಸಮಿತಿಯ ವರದಿ ತಿಳಿಸಿದೆ.
ಸಮಿತಿಯು ಸರ್ಕಾರಿ ಸಂಸ್ಥೆಗಳಿಂದ ಹೆಚ್ಚು ಪಾರದರ್ಶಕತೆ ಮತ್ತು ಹೆಚ್ಚಿನ ಹೊಣೆಗಾರಿಕೆಯನ್ನು ನಿರೀಕ್ಷಿಸುತ್ತದೆ. ಆಮ್ಲಜನಕದ ಕೊರತೆಯಿಂದಾದ ಕೋವಿಡ್ ರೋಗಿಗಳ ಸಾವುಗಳನ್ನು ಸಚಿವಾಲಯ ಸೂಕ್ಷ್ಮವಾಗಿ ಪರಿಶೀಲಿಸಬೇಕು ಮತ್ತು ಸಂತ್ರಸ್ತರ ಕುಟುಂಬಗಳಿಗೆ ಸರಿಯಾದ ಪರಿಹಾರವನ್ನು ನೀಡಲಾಗಿದೆಯೇ ಎಂಬುದನ್ನೂ ಖಚಿತಪಡಿಸಿಕೊಳ್ಳಬೇಕು ಎಂದಿದೆ.
ರೋಗಿಗಳ ಕುಟುಂಬಗಳು ಆಕ್ಸಿಜನ್‌ಗಾಗಿ ಮೊರೆಯಿಡುವ ಮತ್ತು ಆಮ್ಲಜನಕದ ಸಿಲಿಂಡರ್‌ಗಳಿಗಾಗಿ ಸರತಿ ಸಾಲಿನಲ್ಲಿ ಕಾಯ್ದಿದ್ದ ಹಲವಾರು ನಿದರ್ಶನಗಳಿವೆ. ಆಮ್ಲಜನಕದ ಕೊರತೆಯಿಂದ ಬಳಲುತ್ತಿರುವ ಆಸ್ಪತ್ರೆಗಳ ಕಥೆಗಳನ್ನು ಮತ್ತು ಆಸ್ಪತ್ರೆಗಳು ಕೆಲವೇ ಗಂಟೆಗಳ ಆಮ್ಲಜನಕ ಪೂರೈಕೆ ಮಾಡಿದ್ದನ್ನು ಮಾಧ್ಯಮಗಳು ವರದಿ ಮಾಡಿವೆ.
2021 ರ ಏಪ್ರಿಲ್‌ನಲ್ಲಿ ವೈದ್ಯಕೀಯ ಆಮ್ಲಜನಕದ ವಿತರಣೆಯಲ್ಲಿನ ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ದೆಹಲಿ ಹೈಕೋರ್ಟ್ ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಅಲ್ಲದೆ, ಮೇನಲ್ಲಿ ಕೋವಿಡ್-19 ಪರಿಸ್ಥಿತಿ ಸುಧಾರಿಸುತ್ತಿರುವ ರಾಜ್ಯಗಳಿಂದ ಬಳಕೆಯಾಗದ ಆಮ್ಲಜನಕದ ಟ್ಯಾಂಕರ್‌ಗಳನ್ನು ದೆಹಲಿಗೆ ತರುವಂತೆಯೂ ಕೇಂದ್ರ ಸರ್ಕಾರವನ್ನು ಕೇಳಿದೆ.
ಈ ಹಿಂದೆ, ಕೇಂದ್ರ ಆರೋಗ್ಯ ಸಚಿವಾಲಯವು ಕೋವಿಡ್ ಎರಡನೇ ಅಲೆಯ ಸಮಯದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಸಾವಿಗೀಡಾದವರ ಅಂಕಿಅಂಶಗಳನ್ನು ಒದಗಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಳಿತ್ತು. ಈ ವೇಳೆ 20 ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎನ್ನುವ ಉತ್ತರ ಲಭ್ಯವಾಗಿತ್ತು. ಆದರೆ, ಈಗ ಸಮಿತಿಯು ಸಚಿವಾಲಯವು ರಾಜ್ಯಗಳೊಂದಿಗೆ ಸಮನನ್ವಯ ಸಾಧಿಸಬೇಕು ಮತ್ತು ಆಮ್ಲಜನಕದ ಕೊರತೆಯಿಂದಾದ ಸಾವುಗಳ ಲೆಕ್ಕಪರಿಶೋಧನೆ ನಡೆಸಬೇಕು ಎಂದಿದೆ.
إرسال تعليق