ಬೆಳೆ ಹಾನಿ: 2,435 ಕೋಟಿ ರೂ. ರೈತರ ಖಾತೆಗೆ ಜಮೆ- ಆರ್. ಅಶೋಕ್

 ರಾಜ್ಯದಲ್ಲಿ ಜುಲೈನಿಂದ ಈವರೆಗೆ ಸುರಿದ ಮಳೆಯಿಂದ ಆಗಿರುವ ಬೆಳೆ ಹಾನಿಗೆ 2,435 .57 ಕೋಟಿ ರೂ. ಪರಿಹಾರವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ವಿಧಾನಪರಿಷತ್ತಿನಲ್ಲಿ ತಿಳಿಸಿದ್ದಾರೆ.

                   ಅಶೋಕ್

By : Rekha.M
Online Desk

ಬೆಂಗಳೂರು: ರಾಜ್ಯದಲ್ಲಿ ಜುಲೈನಿಂದ ಈವರೆಗೆ ಸುರಿದ ಮಳೆಯಿಂದ ಆಗಿರುವ ಬೆಳೆ ಹಾನಿಗೆ 2,435 .57 ಕೋಟಿ ರೂ. ಪರಿಹಾರವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ವಿಧಾನಪರಿಷತ್ತಿನಲ್ಲಿ ತಿಳಿಸಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ನಿಧಿ ಮತ್ತು ರಾಷ್ಟ್ರೀಯ ವಿಪತ್ತು ನಿಧಿ ಮಾರ್ಗಸೂಚಿಯಡಿ ಇರುವ ಪರಿಹಾರ ಮೊತ್ತವನ್ನು ದ್ವಿಗುಣ ಮಾಡಿ ಬೆಳೆ ನಷ್ಟ ಹೊಂದಿದ ರೈತರ ನೆರವಿಗೆ ಸರ್ಕಾರ ನಿಂತಿದೆ ಎಂದರು ಹೇಳಿದರು.

ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆ ನಷ್ಟಕ್ಕೆ ಇದ್ದ 6800 ರೂಪಾಯಿಯನ್ನು ಪ್ರತಿ ಹೆಕ್ಟೇರ್‌ಗೆ 13,600 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ನೀರಾವರಿ ಜಮೀನಿಗೆ 13,500 ರೂ.ಗಳಿಂದ 25 ರೂ.ಗಳಿಗೆ ಹಾಗೂ ಬಹು ವಾರ್ಷಿಕ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ ನೀಡುವ 18 ಸಾವಿರ ರೂ. ಪರಿಹಾರವನ್ನು 28 ಸಾವಿರ ರೂ ಗಳಿಗೆ ಹೆಚ್ಚಿಸಲಾಗಿದೆ ಎಂದರು. 

ಹಾನಿಯಾದ ಮನೆಗಳ ಪೈಕಿ ಪರಿಹಾರಕ್ಕೆ ಅರ್ಹ ಇರುವ ಪ್ರಕರಣಗಳನ್ನು ರಾಜೀವ್‌ಗಾಂಧಿ ವಸತಿ ನಿಗಮದ ತಂತ್ರಾಂಶದಲ್ಲಿ ದಾಖಲಿಸಿ ಪರಿಹಾರ ನೀಡುವ ಕೆಲಸ ಮಾಡಲಾಗುತ್ತಿದೆ. ರಾಜ್ಯದ ರೈತರ ಪರವಾಗಿ ಬೊಮ್ಮಾಯಿ ಸರ್ಕಾರ ಕೆಲಸ ಮಾಡಲಿದೆ. ರೈತರ ಸಮಸ್ಯೆಗೆ ಶೀಘ್ರವಾಗಿ ಸ್ಪಂದಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಹಿಂದೆಲ್ಲ 6 ತಿಂಗಳು, 1 ವರ್ಷ ಆದರೂ ಪರಿಹಾರ ಬರುತ್ತಿರಲಿಲ್ಲ. ಈಗ ತ್ವರಿತವಾಗಿ ನಾವು ನೀಡುತ್ತಿದ್ದೇವೆ ಎಂದು ಅಶೋಕ್ ಹೇಳಿದರು.


Post a Comment

أحدث أقدم