ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ವಿರುದ್ಧ ವಿಶೇಷ ತನಿಖಾ ತಂಡ (ಎಸ್ಐಟಿ) ಒಂದೊಂದೇ ಗಂಭೀರ ಆರೋಪಗಳನ್ನು ಮಾಡತೊಡಗಿದೆ.
ತೀಸ್ತಾ ಸೆಟಲ್ವಾಡ್
ನವದೆಹಲಿ: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ವಿರುದ್ಧ ವಿಶೇಷ ತನಿಖಾ ತಂಡ (ಎಸ್ಐಟಿ) ಒಂದೊಂದೇ ಗಂಭೀರ ಆರೋಪಗಳನ್ನು ಮಾಡತೊಡಗಿದೆ.
2002 ರ ಗೋದ್ರೋತ್ತರ ದಂಗೆಗಳ ಪ್ರಕರಣದಲ್ಲಿ ಗುಜರಾತ್ ಸರ್ಕಾರಕ್ಕೆ ಅಪಖ್ಯಾತಿ ಉಂಟು ಮಾಡಲು ಹಾಗೂ ಅಂದಿನ ಗುಜರಾತ್ ಸಿಎಂ ನರೇಂದ್ರ ಮೋದಿ ಅವರನ್ನು ಮರಣದಂಡನೆ ಶಿಕ್ಷೆಗೆ ಗುರಿ ಮಾಡುವುದಕ್ಕೆ ಸೆಟಲ್ವಾಡ್ ಸಂಚು ರೂಪಿಸಿದ್ದರು ಎಂದು ಎಸ್ಐಟಿ ದಾಖಲಿಸಿರುವ ಚಾರ್ಜ್ ಶೀಟ್ ಮೂಲಕ ತಿಳಿದುಬಂದಿದೆ.
ಸೆಟಲ್ವಾಡ್, ಮಾಜಿ ಪೊಲೀಸ್ ಮಹಾ ನಿರ್ದೇಶಕ ಆರ್ ಬಿ ಶ್ರೀಕುಮಾರ್ (ನಿವೃತ್ತ) ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ವಿರುದ್ಧದ ಗಲಭೆ ಪ್ರಕರಣದಲ್ಲಿ "ಪುರಾವೆಗಳ ತಯಾರಿಕೆ" ಆರೋಪದ ಸಂಬಂಧ100 ಪುಟಗಳ ಚಾರ್ಜ್ ಶೀಟ್ ನ್ನು ಅಹ್ಮದಾಬಾದ್ ಮೆಟ್ರೋ ಕೋರ್ಟ್ ಗೆ ಸಲ್ಲಿಸಲಾಯಿತು.
ಎಸ್ಐಟಿ ಪ್ರಕಾರ, ಆರೋಪಿ ತೀಸ್ತಾ ಸೆಟಲ್ವಾಡ್ ಅಂದಿನ ಸಿಎಂ ನರೇಂದ್ರ ಮೋದಿ ಅವರಿಗೆ ಮರಣದಂಡನೆ ಶಿಕ್ಷೆಯಾಗುವಂತೆ ಸಂಚು ರೂಪಿಸಿದ್ದರು. ಸರ್ಕಾರ ಭಾಗವಾಗಿದ್ದರೂ ಆರ್ ಬಿ ಶ್ರೀಕುಮಾರ್ ಹಾಗೂ ಸಂಜೀವ್ ಭಟ್ ತೀಸ್ತಾಗಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು ಹಾಗೂ ಅದನ್ನು ಅಧಿಕೃತ ಎಂಟ್ರಿಗಳಿಗೆ ಸೇರಿಸಿದ್ದರು ಎಂದು ಎಸ್ಐಟಿ ಹೇಳಿದೆ.
ಆರೋಪಿಗಳು ನರೇಂದ್ರ ಮೋದಿ ಅವರ ರಾಜಕೀಯ ಭವಿಷ್ಯವನ್ನು ಅಂತ್ಯಗೊಳಿಸಲು ಬಯಸಿದ್ದರು ಹಾಗೂ ಅವರ ಖ್ಯಾತಿಗೆ ಧಕ್ಕೆ ಉಂಟುಮಾಡಲು ಬಯಸಿದ್ದರು, ಇದಕ್ಕಾಗಿ ನಕಲಿ ದಾಖಲೆ, ಅಫಿಡವಿಟ್ ಗಳನ್ನು ಸೃಷ್ಟಿಸಲು ವಕೀಲರ ಪಡೆಯನ್ನೇ ನೇಮಕ ಮಾಡಿಕೊಳ್ಳಲಾಗಿತ್ತು ಎಂದು ಚಾರ್ಜ್ ಶೀಟ್ ನಲ್ಲಿ ಆರೋಪಿಸಲಾಗಿದೆ.
إرسال تعليق