ಚಂಡಿಗಢ್: ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ತಮ್ಮ ಪಂಜಾಬ್ ಲೋಕ್ ಕಾಂಗ್ರೆಸ್ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲಿದ್ದಾರೆ.
ಸೆ. 19ರಂದು, ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವ ದಲ್ಲಿ ಪಿಎಲ್ಸಿ ಪಕ್ಷ ಬಿಜೆಪಿಯೊಟ್ಟಿಗೆ ಕೂಡಿಕೊಳ್ಳಲಿದೆ. ಬಳಿಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆಯಲಿದ್ದಾರೆ.
ಈ ಪಕ್ಷದಲ್ಲಿದ್ದ ಮಾಜಿ ಶಾಸಕರ ಜತೆ, ಅಮರಿಂದರ್ ಸಿಂಗ್ರ ಮಗಳು ಜೈ ಇಂದರ್ ಕೌರ್, ಪುತ್ರ ರಾಣಿಂದರ್ ಸಿಂಗ್, ಮೊಮ್ಮಗ ನಿರ್ವಾನ್ ಸಿಂಗ್ ಅವರೂ ಬಿಜೆಪಿಗೆ ಸೇರ್ಪಡೆಯಾಗಿ ದ್ದಾರೆ. ಆದರೆ ಪತ್ನಿ, ಸಂಸದೆ ಪ್ರಣೀತ್ ಕೌರ್ ಕಾಂಗ್ರೆಸ್ನಲ್ಲಿಯೇ ಉಳಿಯಲಿದ್ದಾರೆ.
ಸೆಪ್ಟೆಂಬರ್ 19ಕ್ಕೆ ವಿಲೀನ ಪ್ರಕ್ರಿಯೆ ದೆಹಲಿಯಲ್ಲಿ ನಡೆಯಲಿದೆ. ಪಂಜಾಬ್ ವಿಧಾನಸಭೆ ಚುನಾವಣೆಗೂ ಪೂರ್ವ ಪಂಜಾಬ್ನಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕಾಂಗ್ರೆಸ್ ಮೇಲೆ ಬೇಸರ ಗೊಂಡು ಪಕ್ಷವನ್ನು ತೊರೆದಿದ್ದರು.
إرسال تعليق