ಸೆ.19ಕ್ಕೆ ಬ್ರಿಟನ್ ರಾಣಿ 2ನೇ ಎಲಿಜಬೆತ್ ಅಂತ್ಯಕ್ರಿಯೆ

ಲಂಡನ್, ಸೆ.9- ನಿನ್ನೆ ವಯೋ ಸಹಜ ಕಾಯಿಲೆಯಿಂದ ಮೃತಪಟ್ಟ ಬ್ರಿಟನ್ ರಾಣಿ ಎರಡನೇ ಎಲಿಜ ಬೆತ್ ಅವರ ಅಂತ್ಯ ಕ್ರಿಯೆ ಸೆ.19 ರಂದು ಸೆಂಟ್ರಲ್ ಲಂಡನ್‍ನ ವೆಸ್ಟ್ ಮಿನಿಸ್ಟರ್ ಅಬ್ಬೆಯಲ್ಲಿ ಭಾರೀ ಜನಸ್ತೋಮದ ನಡುವೆ ನಡೆಯುವ ಸಾಧ್ಯತೆಯಿದೆ.

ಎರಡು ನಿಮಿಷ ಮೌನಾಚರಣೆಯ ಮೂಲಕ ರಾಣಿಯ ಪಾರ್ಥಿವ ಶರೀರ ಇರಿಸಿದ ಶವಪೆಟ್ಟಿಗೆಯನ್ನು ಫಿರಂಗಿ ಯಲ್ಲಿ ಅಬ್ಬೆಗೆ ಕೊಂಡೊಯ್ಯುವು ದರಿಂದ ರಾಜಮನೆತನದ ಹಿರಿಯ ಸದಸ್ಯರು, ಅದರ ಹಿಂದೆ ನಡೆಯುವ ಸಾಧ್ಯತೆಯಿದೆ. ನಂತರ ರಾಣಿಯ ಶವಪೆಟ್ಟಿಗೆಯನ್ನು ವಿಂಡ್ಸರ್ ಕ್ಯಾಸಲ್‍ಗೆ ಕೊಂಡೊಯ್ದು, 6ನೇ ಕಿಂಗ್ ಜಾರ್ಜ್ ಸ್ಮಾರಕ ಪ್ರಾರ್ಥನಾ ಮಂದಿರದಲ್ಲಿ ಪತಿ ಪ್ರಿನ್ಸ್ ಫಿಲಿಪ್ ಸೇರಿದಂತೆ ಸಹೋ ದರಿ ಮಾರ್ಗರೇಟ್, ತಾಯಿ ಎಲಿಜ ಬೆತ್ ಮತ್ತು ತಂದೆ 5ನೇ ಜಾರ್ಜ್ ಅವರ ಸಮಾಧಿಯೊಂದಿಗೆ ರಾಣಿಯ ಸಮಾಧಿ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಬ್ರಿಟನ್ ಇತಿಹಾಸ ದಲ್ಲಿ ಅತ್ಯಂತ ಹೆಚ್ಚಿನ ದಿನ ಆಳ್ವಿಕೆ ನಡೆಸಿದ ಎರಡನೇ ಎಲಿಜಬೆತ್ ರಾಣಿ 96ನೇ ವಯಸ್ಸಿನಲ್ಲಿ ಗುರುವಾರ ನಿಧನರಾದರು.

ನಾಳೆ ದೇಶಾದ್ಯಂತ ಶೋಕಾಚರಣೆ: ಬ್ರಿಟನ್ ರಾಣಿ ಎಲಿಜಬೆತ್II ನಿಧನದ ಹಿನ್ನೆಲೆಯಲ್ಲಿ ಭಾರತದಾದ್ಯಂತ ಒಂದು ದಿನದ ಶೋಕಾಚರಣೆ ನಡೆಸಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ.

 

Post a Comment

أحدث أقدم