ರಾಜ್ಯದ 12 ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳಲ್ಲಿ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಅರ್ಜಿಗಳ ಸಂಗ್ರಹ

 ಸಾರ್ವಜನಿಕರಿಗೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ (ಪಿಸಿಸಿ) ನೀಡುವ ಪ್ರಕ್ರಿಯೆಯನ್ನು ಸರಾಗಗೊಳಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಸಂಬಂಧ ಅರ್ಜಿಗಳನ್ನು ಸಂಗ್ರಹಿಸಲು ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳಿಗೆ (ಪಿಒಪಿಎಸ್‌ಕೆ) ಅಧಿಕಾರ ನೀಡಿದೆ.

           ಪ್ರಾತಿನಿಧಿಕ ಚಿತ್ರ

By : Rekha.M

ಬೆಂಗಳೂರು: ಸಾರ್ವಜನಿಕರಿಗೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ (ಪಿಸಿಸಿ) ನೀಡುವ ಪ್ರಕ್ರಿಯೆಯನ್ನು ಸರಾಗಗೊಳಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಸಂಬಂಧ ಅರ್ಜಿಗಳನ್ನು ಸಂಗ್ರಹಿಸಲು ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳಿಗೆ (ಪಿಒಪಿಎಸ್‌ಕೆ) ಅಧಿಕಾರ ನೀಡಿದೆ. ಹೀಗಾಗಿ ರಾಜ್ಯದಲ್ಲಿ ಒಟ್ಟು 23 ಪಿಒಪಿಎಸ್‌ಕೆಗಳಲ್ಲಿ 12 ಕೇಂದ್ರಗಳಲ್ಲಿ ಬುಧವಾರದಿಂದ (ಸೆ. 28) ಸೇವೆ ಲಭ್ಯವಾಗಿದೆ.

ವಸತಿ ಸ್ಥಿತಿ, ಉದ್ಯೋಗ, ದೀರ್ಘಾವಧಿಯ ವೀಸಾ ಅಥವಾ ಆಯ್ದ ವಿದೇಶಗಳಿಗೆ ತೆರಳಲು ಅರ್ಜಿ ಸಲ್ಲಿಸುವ ಭಾರತದ ಪಾಸ್‌ಪೋರ್ಟ್ ಹೊಂದಿರುವವರಿಗೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್‌ಗಳನ್ನು ನೀಡಲಾಗುತ್ತದೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ಕೃಷ್ಣ ಕೆ, ಆಯ್ದ ವಿದೇಶಗಳಲ್ಲಿ ಕೆಲಸ ಮಾಡಲು ಪ್ರಮಾಣಪತ್ರ ಕಡ್ಡಾಯವಾಗಿದೆ. ಇದು ವ್ಯಕ್ತಿಯು ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲ ಎಂಬುದನ್ನು ದೃಢಪಡಿಸುತ್ತದೆ. ಸೆಪ್ಟೆಂಬರ್ 27ರವರೆಗೆ ಹುಬ್ಬಳ್ಳಿ, ಮಂಗಳೂರು, ಮಾರತ್‌ಹಳ್ಳಿ, ಕಲಬುರಗಿ ಮತ್ತು ಲಾಲ್‌ಬಾಗ್‌ನಲ್ಲಿರುವ ಐದು ಪಾಸ್‌ಪೋರ್ಟ್ ಸೇವಾ ಕೇಂದ್ರಗಳಲ್ಲಿ ಮಾತ್ರ ಅರ್ಜಿಗಳನ್ನು ಸಂಗ್ರಹಿಸುವ ಅಧಿಕಾರವಿತ್ತು' ಎಂದು ತಿಳಿಸಿದ್ದಾರೆ.

ಪಿಸಿಸಿಯನ್ನು ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯಿಂದ ಮಾತ್ರ ನೀಡುವುದನ್ನು ಮುಂದುವರಿಸಲಾಗುತ್ತದೆ. ಆದರೆ, ಸಾರ್ವಜನಿಕರಿಗೆ ಹತ್ತಿರವಿರುವ ಅಂಚೆ ಕಚೇರಿ ಪಾಸ್‌ಪೋರಟ್ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಸಿಗುವುದರಿಂದ ಅನುಕೂಲವಾಗುತ್ತದೆ. ಇದರಿಂದ ಅನೇಕರು ಬೇರೆ ಜಿಲ್ಲೆಗಳಿಗೆ ಪ್ರಯಾಣಿಸಬೇಕಾಗುವುದಿಲ್ಲ' ಎಂದು ಹೇಳಿದರು.

ಸದ್ಯ ಲಾಲ್‌ಬಾಗ್‌ನಲ್ಲಿರುವ ಪಾಸ್‌ಪೋರ್ಟ್ ಸೇವಾ ಕೇಂದ್ರಗಳಲ್ಲಿ ಪ್ರತಿದಿನ ಸರಾಸರಿ 180 ಪಿಸಿಸಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ ಮತ್ತು ಮಾರತ್‌ಹಳ್ಳಿಯ ಸಾಯಿ ಆರ್ಕೇಡ್ ಕೇಂದ್ರವು ದಿನಕ್ಕೆ 120 ಮನವಿಗಳನ್ನು ಸ್ವೀಕರಿಸುತ್ತಿದೆ ಎಂದರು.

ಬಳ್ಳಾರಿ, ಬೆಳಗಾವಿ, ಬೀದರ್, ದಾವಣಗೆರೆ, ಗದಗ, ಹಾಸನ, ಮೈಸೂರು, ರಾಯಚೂರು ಶಿವಮೊಗ್ಗ, ತುಮಕೂರು, ಉಡುಪಿ ಮತ್ತು ವಿಜಯಪುರದಲ್ಲಿ ಪಿಒಪಿಎಸ್‌ಕೆಗಳು ಪಿಸಿಸಿ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ. ಇದನ್ನು ಉಳಿದ ಪಿಒಪಿಎಸ್‌ಕೆಗಳಿಗೂ ವಿಸ್ತರಿಸಲಾಗುವುದು. ಬೆಂಗಳೂರಿನ ಪಿಒಪಿಎಸ್‌ಕೆ ಇನ್ನೂ ಈ ಪ್ರಕ್ರಿಯೆಯನ್ನು ಪ್ರಾರಂಭಿಸಿಲ್ಲ ಎಂದು ತಿಳಿಸಿದರು.

ಅಫ್ಗಾನಿಸ್ತಾನ, ಬಹ್ರೇನ್, ಇರಾಕ್, ಇಂಡೋನೇಷ್ಯಾ, ಸೌದಿ ಅರೇಬಿಯ ಸಾಮ್ರಾಜ್ಯ, ಕುವೈತ್, ಜೋರ್ಡಾನ್, ಲಿಬಿಯಾ, ಲೆಬನಾನ್, ಮಲೇಷ್ಯಾ, ಒಮನ್, ಕತಾರ್, ಸುಡಾನ್, ಸಿರಿಯಾ, ಥೈಲ್ಯಾಂಡ್, ಯುಎಇ, ಯೆಮೆನ್, ಕೆನಡಾ ಮತ್ತು ಆಸ್ಟ್ರೇಲಿಯಾ ದೇಶಗಳಿಗೆ ತೆರಳುವ ಭಾರತೀಯರಿಂದ ಪಿಸಿಸಿಯನ್ನು ಕೇಳುತ್ತವೆ.

ಪಿಸಿಸಿ ಪ್ರಮಾಣಪತ್ರವು ಆರು ತಿಂಗಳ ಮಾನ್ಯತೆಯನ್ನು ಹೊಂದಿರುತ್ತದೆ. ಎಲ್ಲಾ ಪರಿಶೀಲನೆ ಪೂರ್ಣಗೊಂಡ ನಂತರ ಅದನ್ನು ನೀಡಲು ಸರಾಸರಿ ಎರಡರಿಂದ ಮೂರು ವಾರಗಳವರೆಗೆ ಸಮಯ ತೆಗೆದುಕೊಳ್ಳುತ್ತದೆ.

Post a Comment

أحدث أقدم