ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ದಿಂಡೋರಿ ಜಿಲ್ಲೆಯ ಕುರುಬರೊಬ್ಬರು ತಮ್ಮ ಹಳ್ಳಿಯ ದೀರ್ಘಕಾಲದ ಬಾಯಾರಿಕೆಯನ್ನು ನೀಗಿಸಲು ನೀರಿನ ಟ್ಯಾಂಕ್ ನಿರ್ಮಾಣಕ್ಕೆ ತಮ್ಮ ಭೂಮಿಯನ್ನೇ ದಾನ ಮಾಡಿದ್ದಾರೆ.
ಪ್ರಾತಿನಿಧಿಕ ಚಿತ್ರ
ಭೋಪಾಲ್: ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ದಿಂಡೋರಿ ಜಿಲ್ಲೆಯ ಕುರುಬರೊಬ್ಬರು ತಮ್ಮ ಹಳ್ಳಿಯ ದೀರ್ಘಕಾಲದ ಬಾಯಾರಿಕೆಯನ್ನು ನೀಗಿಸಲು ನೀರಿನ ಟ್ಯಾಂಕ್ ನಿರ್ಮಾಣಕ್ಕೆ ತಮ್ಮ ಭೂಮಿಯನ್ನೇ ದಾನ ಮಾಡಿದ್ದಾರೆ.
57 ವರ್ಷ ವಯಸ್ಸಿನ ತೆಂಕು ಪ್ರಸಾದ್ ಬನವಾಸಿ ಅವರು ತಮ್ಮ ಮೂರು ಎಕರೆ ಭೂಮಿಯಲ್ಲಿ 1,000 ಚದರ ಅಡಿ ಭೂಮಿಯನ್ನು ರಾಜ್ಯದ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ (ಪಿಹೆಚ್‌ಇ) ಇಲಾಖೆಗೆ ಓವರ್‌ಹೆಡ್ ವಾಟರ್ ಟ್ಯಾಂಕ್ ನಿರ್ಮಿಸಲು ಅನುವು ಮಾಡಿಕೊಟ್ಟಿದ್ದಾರೆ. ಇದರಿಂದ ದಿಂಡೋರಿ ಜಿಲ್ಲೆಯ ಶಹಪುರಾ ಬ್ಲಾಕ್‌ನ ಬರಗಾಂವ್ ಗ್ರಾಮದ 4,500 ನಿವಾಸಿಗಳ ದೀರ್ಘಕಾಲದ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ.
'ನನ್ನ ಜೀವನೋಪಾಯವು ನಮ್ಮ ಹಳ್ಳಿಗರ ದನಗಳನ್ನು ಪ್ರತಿದಿನ ಹುಲ್ಲುಗಾವಲುಗಳಿಗೆ ಮೇಯಿಸಲು ಕರೆದುಕೊಂಡು ಹೋಗುವುದಾದರೂ, ನನಗಿರುವ ಸಣ್ಣ ಜಮೀನಿನಲ್ಲಿ ನನ್ನ ಕುಟುಂಬಕ್ಕೆ ಏನನ್ನಾದರೂ ಬೆಳೆಯಲು ಸಹಾಯ ಮಾಡುತ್ತದೆ. ಆದರೆ ಹಳ್ಳಿಗರ ಬಹುಕಾಲದ ನೀರಿನ ಸಂಕಷ್ಟದ ಮುಂದೆ ಕುಟುಂಬಕ್ಕೆ ಏನಾದರು ಬೆಳೆಯುವುದು ಗೌಣವಾಗುತ್ತದೆ. ನೀರಿನ ತೊಟ್ಟಿಯ ನಿರ್ಮಾಣವು ನೀರಿನ ತೊಂದರೆಯನ್ನು ಶಾಶ್ವತವಾಗಿ ಕೊನೆಗೊಳಿಸುತ್ತದೆ. ಹೀಗಾಗಿಯೇ ನಾನು ಭೂಮಿಯ ಒಂದು ಭಾಗವನ್ನು ದಾನ ಮಾಡಿದ್ದೇನೆ' ಎನ್ನುತ್ತಾರೆ ತೆಂಕು ಪ್ರಸಾದ್ ಬನ್ವಾಸಿ.
'ಗ್ರಾಮದ ನೀರಿನ ಸಮಸ್ಯೆಗಳು ಶೀಘ್ರದಲ್ಲೇ ಕೊನೆಗೊಳ್ಳುವಂತೆ ನೋಡಿಕೊಳ್ಳಲು ನಾನು ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಮಾಡುತ್ತೇನೆ' ಎಂದು ಹೇಳಿದರು.
ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮಾಡಿ, 'ನಲ್ ಜಲ ಯೋಜನೆಗೆ 1,000 ಚದರ ಅಡಿ ಭೂಮಿಯನ್ನು ದಾನ ಮಾಡುವ ಮೂಲಕ ತೆಂಕು ಬನ್ವಾಸಿ ಅವರು ಪೂಜ್ಯ ಕೆಲಸ ಮಾಡಿದ್ದಾರೆ. ಈ ಮಹಾನ್ ಪ್ರಯತ್ನಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ' ಎಂದಿದ್ದಾರೆ.
ಬರಗಾಂವ ಗ್ರಾಮವು ನೀರಿನ ಅಸಮರ್ಪಕ ಲಭ್ಯತೆಯಿಂದ ದೀರ್ಘಕಾಲದಿಂದ ತೊಂದರೆಗೊಳಗಾಗಿದೆ. ವಿಶೇಷವಾಗಿ ಬೇಸಿಗೆಯಲ್ಲಿ ಗ್ರಾಮದ ಎರಡು ಭಾಗಗಳಾದ ಬನ್ವಾಸಿ ಮೊಹಲ್ಲಾ ಮತ್ತು ಶಂಕರ ತೋಳದ ಮಹಿಳೆಯರು ಮತ್ತು ಮಕ್ಕಳು ಸಾಲಗಿ ನದಿಯಿಂದ ನೀರು ತರಲು 2.3 ಕಿ.ಮೀ ದೂರ ಹೋಗಬೇಕಿದೆ.
إرسال تعليق