ಸೌರ ಫಲಕಗಳ ತ್ಯಾಜ್ಯ ಅಪಾಯಕಾರಿಯಾಗುವ ಸಾಧ್ಯತೆ: ಹೊಸ ಆತಂಕ ಸೃಷ್ಟಿ!

 ರಾಜ್ಯ ಸರ್ಕಾರ ಹಸಿರು ಇಂಧನವನ್ನು ಪ್ರೋತ್ಸಾಹಿಸುತ್ತಿರುವಂತೆಯೇ, ಸೌರ ಫಲಕಗಳ ತ್ಯಾಜ್ಯ ನಿರ್ವಹಣೆ ಬಗ್ಗೆ ಚಿಂತನೆ ನಡೆಸಿಲ್ಲ. ಈಗ, ಬಳಸಿದ ಸೌರ ಫಲಕಗಳನ್ನು ಜಮೀನುಗಳಲ್ಲಿ ಎಸೆಯಲಾಗುತ್ತಿದೆ ಮತ್ತು ಅವುಗಳನ್ನು ಸಾಮಾನ್ಯ ತ್ಯಾಜ್ಯವೆಂದು ಪರಿಗಣಿಸಲಾಗುತ್ತಿದೆ.

                          ಸೌರ ಫಲಕಗಳು

By : Rekha.M
Online Desk

ಬೆಂಗಳೂರು: ರಾಜ್ಯ ಸರ್ಕಾರ ಹಸಿರು ಇಂಧನವನ್ನು ಪ್ರೋತ್ಸಾಹಿಸುತ್ತಿರುವಂತೆಯೇ, ಸೌರ ಫಲಕಗಳ ತ್ಯಾಜ್ಯ ನಿರ್ವಹಣೆ ಬಗ್ಗೆ ಚಿಂತನೆ ನಡೆಸಿಲ್ಲ. ಈಗ, ಬಳಸಿದ ಸೌರ ಫಲಕಗಳನ್ನು ಜಮೀನುಗಳಲ್ಲಿ ಎಸೆಯಲಾಗುತ್ತಿದೆ ಮತ್ತು ಅವುಗಳನ್ನು ಸಾಮಾನ್ಯ ತ್ಯಾಜ್ಯವೆಂದು ಪರಿಗಣಿಸಲಾಗುತ್ತಿದೆ.  ಮರುಬಳಕೆದಾರರು ಕೂಡ ಸೌರ ಫಲಕಗಳನ್ನು ಮರು ಬಳಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಹೊಸ ಸೌರ ಫಲಕಗಳ ಉತ್ಪಾದನಾ ವೆಚ್ಚವು ತೀವ್ರವಾಗಿ ಇಳಿಯುತ್ತಿದೆ. ಪ್ರಸ್ತುತ ಘನ ತ್ಯಾಜ್ಯ ನಿರ್ವಹಣಾ ನಿಯಮಗಳ ನೀತಿಯಡಿ ಸೌರ ಘಟಕ ತ್ಯಾಜ್ಯ ಒಳಗೊಂಡಿಲ್ಲ ಎಂದು ಪರಿಸರವಾದಿಗಳು ಹೇಳಿದ್ದು, ಇದು ನಂತರ ಪರಿಸರ ಮಾಲಿನ್ಯಕ್ಕೆ ಕಾರಣವಾಗಬಹುದೆಂಬ ಆತಂಕ ಶುರುವಾಗಿದೆ.

ಸೌರ ತ್ಯಾಜ್ಯವನ್ನು ಮರುಬಳಕೆ ಮಾಡಲು ಅಥವಾ ವಿಲೇವಾರಿ ಮಾಡಲು ಬೆಂಗಳೂರಿಗೆ ಪ್ರತ್ಯೇಕ ಕೇಂದ್ರವಿಲ್ಲ ಎಂದು ಸೌರ ವಿದ್ಯುತ್ ಉಪಕರಣಗಳ ಪೂರೈಕೆ ಕಂಪನಿ ವಿ1 ಎನರ್ಜಿ ಮಾಲೀಕ ವಿನೋದ್ ಹೇಳುತ್ತಾರೆ. ಒಂದು ವೇಳೆ ಕಡಿಮೆ ತ್ಯಾಜ್ಯವಾದರೆ ಅದನ್ನು ಸಾಮಾನ್ಯ ತ್ಯಾಜ್ಯದಂತೆ ವಿಲೇವಾರಿ ಮಾಡಲಾಗುತ್ತದೆ. ಒಂದು ವೇಳೆ ಅದರ ಸಂಖ್ಯೆ ಹೆಚಿದ್ದರೆ, ಗುಜರಿ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ. ಆದರೆ, ಮರು ಬಳಕೆ ಸಾಧ್ಯವಾಗಿಲ್ಲ, ಏಕೆಂದರೆ ಹೊಸ ಫಲಕಗಳ ಉತ್ಪಾದನೆ ದುಬಾರಿಯಾಗಿರುತ್ತದೆ ಎಂದರು. 

ಮುಂದಿನ ಐದು ವರ್ಷದ ರಾಜ್ಯ ನವೀಕರಿಸಬಹುದಾದ ಇಂಧನ ನೀತಿಯನ್ನು ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಲಿಮಿಟೆಡ್ ಜಾರಿಗೊಳಿಸಿದೆ. ಆದರೆ ಅದರಲ್ಲಿ ಸೌರ ಫಲಕಗಳ ತ್ಯಾಜ್ಯ ವಿಲೇವಾರಿ ಬಗ್ಗೆ ಯಾವುದೇ ಉಲ್ಲೇಖವಿಲ್ಲ. 
ಕಳವಳಕಾರಿ ಸಂಗತಿಯೆಂದರೆ, ಈ ತ್ಯಾಜ್ಯವು ಅಗಾಧ ಮಟ್ಟಕ್ಕೆ ಏರಬಹುದು, ಏಕೆಂದರೆ ನವೀಕರಿಸಬಹುದಾದ ಇಂಧನ  ವಲಯದ ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕವು ಒಂದಾಗಿದೆ.


Post a Comment

أحدث أقدم