ಸರ್ಕಾರದ ಉನ್ನತ ಅಧಿಕಾರಿಗಳಿಗೆ ಹೈ ಎಂಡ್ ಕಾರುಗಳನ್ನು ಖರೀದಿಸಲು ಸರ್ಕಾರ ಆದೇಶ ಹೊರಡಿಸಿದೆ, ಹೀಗಾಗಿ ಸರ್ಕಾರದ ಬೊಕ್ಕಸಕ್ಕೆ ಮತ್ತಷ್ಟು ಹೊರೆಯಾಗಲಿದೆ.
ಬೆಂಗಳೂರು: ಸರ್ಕಾರದ ಉನ್ನತ ಅಧಿಕಾರಿಗಳಿಗೆ ಹೈ ಎಂಡ್ ಕಾರುಗಳನ್ನು ಖರೀದಿಸಲು ಸರ್ಕಾರ ಆದೇಶ ಹೊರಡಿಸಿದೆ, ಹೀಗಾಗಿ ಸರ್ಕಾರದ ಬೊಕ್ಕಸಕ್ಕೆ ಮತ್ತಷ್ಟು ಹೊರೆಯಾಗಲಿದೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ವಿವಿಧ ಇಲಾಖೆಗಳ ಮುಖ್ಯಸ್ಥರಿಂದ ಹಿಡಿದು, ಹಿರಿಯ ಅಧಿಕಾರಿಗಳು ಇನ್ನು ಮುಂದೆ ದುಬಾರಿ ಕಾರುಗಳನ್ನು ಖರೀದಿಸಬಹುದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧೀನ ಕಾರ್ಯದರ್ಶಿ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿವಾಹನಗಳ ಖರೀದಿಗೆ, ಅದರಲ್ಲೂ ವಿಶೇಷವಾಗಿ ಹೈ ಎಂಡರ್ ಕಾರುಗಳ ಬೆಲೆ ಮಿತಿಗಳನ್ನು ಹೆಚ್ಚಿಸುವಂತೆ ಹಲವು ಸಮಯದಿಂದ ಬೇಡಿಕೆ ಇತ್ತು. "ನಾವು ಮಿತಿಗಳನ್ನು ಪರಿಷ್ಕರಿಸಿ ಐದು ವರ್ಷಗಳಿಗಿಂತಲೂ ಹೆಚ್ಚು ಕಾಲ ಕಳೆದಿದೆ. ಈ ಆದೇಶವು ಸಚಿವರು ಮತ್ತು ಇತರ ಕ್ಯಾಬಿನೆಟ್ ದರ್ಜೆಯ ರಾಜಕೀಯ ನಾಯಕರಿಗೆ ಅನ್ವಯಿಸುವುದಿಲ್ಲ ಎಂದು ಆಡಳಿತ ಸುಧಾರಣಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾರುಗಳ ಬೆಲೆ ಹೆಚ್ಚಾಗಿರುವುದರಿಂದ ಅಧಿಕಾರಿಗಳಿಗೆ ಆ ದರದಲ್ಲಿ ಕಾರು ಖರೀದಿಸಲು ಕಷ್ಟಕರವಾಗಿರುವುದರಿಂದ, ಸರ್ಕಾರವು ಮಿತಿಯನ್ನು ಪರಿಷ್ಕರಿಸಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಹೇಳಿದ್ದಾರೆ.
ವಿಶೇಷವಾಗಿ ಕಳೆದ ವರ್ಷಗಳಲ್ಲಿ ರಾಜ್ಯದ ಆದಾಯದಲ್ಲಿ ದೊಡ್ಡ ಕುಸಿತ ಕಂಡಿದೆ. ಸಿಬ್ಬಂದಿ ನೇಮಕಾತಿ ಮತ್ತು ಗುತ್ತಿಗೆದಾರರ ಬಾಕಿ ಬಿಲ್‌ಗಳನ್ನು ತೆರವುಗೊಳಿಸುವುದು ಸೇರಿದಂತೆ ಆದ್ಯತೆಯ ಮೇಲೆ ಕಾಳಜಿ ವಹಿಸಬೇಕಾದ ಹಲವು ಅಗತ್ಯತೆಗಳಿವೆ. ಸರ್ಕಾರಿ ಇಲಾಖೆಗಳಲ್ಲಿ 2.5 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಈಗಿರುವ ಸಿಬ್ಬಂದಿಗೆ ಹೆಚ್ಚುವರಿ ಸಮಯ ಕೆಲಸ ಮಾಡುವಂತೆ ಒತ್ತಾಯಿಸಲಾಗಿದೆ. ಸದ್ಯಕ್ಕೆ ಕಾರು ಖರೀದಿಯ ಮಿತಿ ಹೆಚ್ಚಿಸುವ ಅಗತ್ಯವಿರಲಿಲ್ಲ’ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮತ್ತು ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಗಳು ಈಗ 20 ಲಕ್ಷದವರೆಗಿನ ಕಾರುಗಳನ್ನು ಖರೀದಿಸಬಹುದು, ಹಿಂದೆ 14 ಲಕ್ಷ ರೂ. ಮಿತಿಯಿತ್ತು.
ಅದೇ ರೀತಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಸೆಷನ್ಸ್ ಕೋರ್ಟ್ ನ್ಯಾಯಾಧೀಶರು, ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ನಗರ ಪೊಲೀಸ್ ಕಮಿಷನರ್‌ಗಳು ಈಗ 18 ಲಕ್ಷ ರೂ. ಮೌಲ್ಯದ ಕಾರು ಖರೀದಿಸಬಹುದು, ಈ ಹಿಂದೆ ಕಾರು ಖರೀದಿಯ ಮೊತ್ತ 9 ಲಕ್ಷ ರೂ. ಇತ್ತು.
ಜಿಲ್ಲಾ ಮಟ್ಟದ ಹಿರಿಯ ಪೊಲೀಸ್ ಮತ್ತು ಇತರೆ ಅಧಿಕಾರಿಗಳು 12.5 ಲಕ್ಷ ರೂ.ಗೆ ವಾಹನಗಳನ್ನು ಖರೀದಿಸಬಹುದು, ಈ ಹಿಂದೆ 6.5 ಲಕ್ಷ ರೂ ಗಳ ಮಿತಿಯಿತ್ತು, ತಹಶೀಲ್ದಾರ್ ಶ್ರೇಣಿಯ ಇತರ ಹಿರಿಯ ಅಧಿಕಾರಿಗಳು 9 ಲಕ್ಷ ರೂ. ವರೆಗಿನ ಕಾರು ಖರೀದಿಸಬಹುದಾಗಿದೆ
إرسال تعليق