ಶ್ರೀಲಂಕಾ: ಗೊಟಬಯ ರಾಜಪಕ್ಸ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ

 

ಶ್ರೀಲಂಕಾ: ಗೊಟಬಯ ರಾಜಪಕ್ಸ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ

ಗೊಟಬಯ ರಾಜಪಕ್ಸ ರಾಜೀನಾಮೆಯಿಂದ ತೆರವಾಗಿರುವ ಶ್ರೀಲಂಕಾದ ಅಧ್ಯಕ್ಷ ಹುದ್ದೆಗೆ ಚುನಾವಣೆ ಆರಂಭವಾಗಿದೆ. ಸ್ಪರ್ಧೆಯ ಕಣದಲ್ಲಿ ಹಂಗಾಮಿ ಅಧ್ಯಕ್ಷ, ಶ್ರೀಲಂಕಾ ಪೊದುಜನ ಪೆರಮುನ (ಎಸ್‌ಎಲ್‌ಪಿಪಿ) ಪಕ್ಷದ ರನಿಲ್‌ ವಿಕ್ರಮಸಿಂಘೆ, ಸಿಂಹಳ ಬುದ್ಧಿಸ್ಟ್‌ ನ್ಯಾಷನಲ್‌ ಪಾರ್ಟಿಯ ಡಲ್ಲಾಸ್‌ ಅಲಹೆಪ್ಪೆರುಮ ಜನತಾ ವಿಮುಕ್ತಿ ಪೆರುಮುನ ಪಕ್ಷದ ಅನುರ ಕುಮಾರ ದಿಸ್ಸನಾಯಕೆ ಇದ್ದಾರೆ

By : Nandan singh
Online Desk

ಕೊಲಂಬೋ: ಗೊಟಬಯ ರಾಜಪಕ್ಸ ರಾಜೀನಾಮೆಯಿಂದ ತೆರವಾಗಿರುವ ಶ್ರೀಲಂಕಾದ ಅಧ್ಯಕ್ಷ ಹುದ್ದೆಗೆ ಚುನಾವಣೆ ಆರಂಭವಾಗಿದೆ. ಸ್ಪರ್ಧೆಯ ಕಣದಲ್ಲಿ ಹಂಗಾಮಿ ಅಧ್ಯಕ್ಷ, ಶ್ರೀಲಂಕಾ ಪೊದುಜನ ಪೆರಮುನ (ಎಸ್‌ಎಲ್‌ಪಿಪಿ) ಪಕ್ಷದ ರನಿಲ್‌ ವಿಕ್ರಮಸಿಂಘೆ, ಸಿಂಹಳ ಬುದ್ಧಿಸ್ಟ್‌ ನ್ಯಾಷನಲ್‌ ಪಾರ್ಟಿಯ ಡಲ್ಲಾಸ್‌ ಅಲಹೆಪ್ಪೆರುಮ ಮತ್ತು ಜನತಾ ವಿಮುಕ್ತಿ ಪೆರುಮುನ ಪಕ್ಷದ ಅನುರ ಕುಮಾರ ದಿಸ್ಸನಾಯಕೆ ಇದ್ದಾರೆ.

ಈ ನಡುವೆ, ಸಮಗಿ ಜನ ಬಲವೇಗಯಾ ಪಕ್ಷದ ಸಜಿತ್‌ ಪ್ರೇಮದಾಸ ನಮ್ಮ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ಇದರೊಂದಿಗೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.  225 ಸದಸ್ಯ ಬಲದ ಲಂಕಾ ಸಂಸತ್‌ನಲ್ಲಿ ಆಡಳಿತಾರೂಢ ಎಸ್‌ಎಲ್‌ಪಿಪಿ ಪಕ್ಷದ 100 ಸದಸ್ಯರಿರುವ ಕಾರಣ, ಎಲ್ಲಾ ಸಂಸದರು ರನಿಲ್‌ ಪರ ಮತ ಹಾಕಿ, ವಿಪಕ್ಷಗಳ ಮತ ವಿಭಜನೆಯಾದರೆ ರನಿಲ್‌ ವಿಕ್ರಮಸಿಂಘೆ ಸುಲಭವಾಗಿ ಜಯಸಾಧಿಸುವ ಸಾಧ್ಯತೆ ಇದೆ.ಆರ್ಥಿಕ ಬಿಕ್ಕಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ  ಶ್ರೀಲಂಕಾದಿಂದ ಸಿಂಗಾಪುರ್​ಗೆ ಪಲಾಯನ ಮಾಡಿದ್ದಾರೆ. ಅಲ್ಲಿಂದಲೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದಾರೆ. ಇದೀಗ ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಅಧಿಕಾರ ವಹಿಸಿಕೊಂಡಿದ್ದಾರೆ.  ಶ್ರೀಲಂಕಾದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ಆರಂಭವಾಗಿದೆ.

Post a Comment

أحدث أقدم