ಕರ್ನಾಟಕ ರಾಜ್ಯವನ್ನ ಮುಸ್ಲೀಂರಿಗೆ ಮಾರಿಬಿಡಿ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಮಾಜಿ ಡಿಸಿಎಂ ಈಶ್ವರಪ್ಪ ಸಲಹೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ ಜಿಲ್ಲೆಯಲ್ಲಿ ಸ್ವಾತಿ ಎಂಬ ಯುವತಿಯನ್ನ ಲವ್ ಜಿಹಾದ್ ಮಾಡಿ, ಕಾಡಿನಲ್ಲಿ ಹತ್ಯೆ ಮಾಡಿ ನದಿಗೆ ಬಿಸಾಕಿ ಹೋಗುತ್ತಾರೆ. ಸರ್ಕಾರ ಗಪ್ ಚುಪ್ ಆಗಿದೆ. ಸ್ವಾತಿ ನಿಮ್ಮಮಗಳೆ ಆಗಿದ್ದರೆ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.
ಸ್ವಾತಿ ಹಾವೇರಿ ಜಿಲ್ಲೆ ಮಾಸೂರಿನಲ್ಲಿ ಕಾಣೆಯಾದ ದಿನದಂದಲೇ ಮಿಸ್ಸಿಂಗ್ ಆಗಿದೆ ಎಂದು ದೂರು ನೀಡಿದ್ದಾರೆ. ಹುಡುಕಲೇ ಇಲ್ಲ. ತುಂಗ ಭದ್ರ ನದಿಯಲ್ಲಿ ಸ್ವಾತಿಯ ಶವ ಮೇಲೆ ಬಂದಿದೆ. ಆತುರ ಆತುರವಾಗಿ ಅಂತ್ಯ ಸಂಸ್ಕಾರ ಮಾಡಲಾಗಿದೆ.
ದೂರು ನೀಡಿದವರು ಯಾರು ಎಂದು ಗೊತ್ತಿದ್ದರೂ ಆತುರ ಆತುರವಾಗಿ ಅಂತ್ಯ ಸಂಸ್ಕಾರ ನಡೆಸುವ ದರ್ದು ಏನಿತ್ತು? ಕರ್ನಾಟಕ ಜನ ತಲೆತಗ್ಗಿಸುವ ವಿಷಯವಾಗಿದೆ. ಮುಸ್ಲೀಂ ಸಮಾಜಕ್ಲೆ ಪ್ರಶ್ನೆ ಕೇಳುವುದಾಗಿ ಹೇಳಿದ ಈಶ್ವರಪ್ಪ ಮುಸ್ಲೀಂ ಯುವತಿಯನ್ನಹಿಂದು ಯುವಕನೋರ್ವ ಪ್ರೀತಿಸಿ ಹತ್ಯೆ ಮಾಡಿದ್ದರೆ ಇಷ್ಟು ಹೊತ್ತಿಗೆ ಸುಮ್ಮನಿರುತ್ತಿದ್ದರಾ ಎಂದು ಪ್ರಶ್ನಿಸಿದರು.
ಮುಸ್ಲೀಂ ಗೂಂಡಗಳ ಬಗ್ಗೆ ಎಚ್ಚರಿಕೆಯಿಂದ ಇರಿ. ಕೊಲೆ ಮಾಡುವ ಅಂತರ ಧರ್ಮಿಯರು ಕೊಲೆ ಮಾಡಿದರೆ ಗುಂಡಿಕ್ಕಿ ಕೊಲ್ಲುವ ಕಾನೂನು ತನ್ನಿ ಎಂದರು. ನಾಳೆ ರಾಷ್ಟ್ರಭಕ್ತರ ಬಳಗ ಸ್ವಾತಿ ಮನೆ ಭೇಟಿ ಮಾಡಿ ಸಾಂತ್ವಾನ ಹೇಳಲಿದ್ದೇವೆ ಎಂದರು.
ಹಿಂದೂ ಯುವತಿಯವರ ಹತ್ಯೆ ಮಾಡುತ್ತಿರುವ ಮುಸ್ಲೀಂರಿಗೆ ಈ ರಾಜ್ಯ ಮಾರಿಬಿಡಿ. ಬಜೆಟ್ ನಲ್ಲಿ ಗುತ್ತಿಗೆ ವಿಚಾರದಲ್ಲಿ ಮುಸ್ಲೀಂ ರಿಗೆ ಮೀಸಲಾತಿ ನೀಡಲಾಗಿದೆ. ಕುವೆಂಪು ಅವರ ನಾಡಗೀತೆಯನ್ನ ಮತ್ತೊಮ್ಮೆ ಓದಲಿ ಎಂದು ಡಿಕೆಶಿ ಹೇಳಿದ್ದಾರೆ. ನೀವು ಸಂವಿಧಾನ ಓದಿ. 4% ಮೀಸಾತಿ ಗುತ್ತಿಗೆಯಲ್ಲಿ ಮೀಸಲಾತಿ ನೀಡಲಾಗಿದೆ. ಸುಪ್ರೀಂ ಕೋರ್ಟ್ ಸಹ ಧರ್ಮಾಧಾರಿತ ಕಾನೂನು ಇರಬಾರದು ಎಂದಿದೆ. ಅದನ್ನೂ ಉಲ್ಲಂಘಿಸಿ ಕಾಂಗ್ರೆಸ್ ಸರ್ಕಾರ ಮುಸ್ಲೀಂರ ಪರವಿದೆ ಎಂದರು.
ಮುಸ್ಲೀಂ ಗೂಂಡಾಗಳಿಗೆ ಕಾಂಗ್ರೆಸ್ ಸಹಕಾರ ನೀಡುತ್ತಿದೆ. ದೇಶದ ಜನತೆ ಎದುರು ಕರ್ನಾಟಕವನ್ನ ಕಾಂಗ್ರೆಸ್ ಬೆತ್ತಲೆಗೊಳಿಸಿದೆ. ಹಿಂದೂ ಸಮಾಜ ಜಾಗೃತಿ ಆಗಲಿದೆ. ದೇಶದಲ್ಲಿ ಕಾಂಗ್ರೆಸ್ ನಿರ್ನಾಮವಾಗಿದೆ ಕರ್ನಾಟಕದಲ್ಲಿ ಪಕ್ಷ ಕುಟು ಕುಟು ಎಂದು ಸಾಗಿದೆ. ಈಗಲಾದರೂ ಸಂವಿಧಾನಕ್ಕೆ ಗೌರವಕೊಡಿ ಎಂದರು.
ಮೈಸೂರು ಉದಯಗಿರಿ ಪ್ತಕರಣದಲ್ಲಿ ಡಿವೈಎಸ್ಪಿ ಕಾರಿಗೆ ಕಲ್ಲುತೂರಲಾಗಿದೆ. ಗೃಹಸಚಿವರನ್ನ ಜನ ಬೀದಿಗೆ ಅಟ್ಟಿಸಿಕೊಂಡು ಹೊಡೆಯಲಿದ್ದಾರೆ. ಹಿಂದೂ ಸಮಾಜವನ್ನ ತಾತ್ಸಾರ ಮಾಡಿದವರು ಮಣ್ಣುಮುಕ್ಕುಲಿದ್ದಾರೆ. ಇದು ಕೊನೆಯ ಕಾಂಗ್ರೆಸ್ ಸರ್ಕಾರವಾಗಿದೆ. ಹಿಂದೂಗಳ ತಾಳ್ಮೆ ಪರೀಕ್ಷೆ ಮಾಡಬೇಡಿ. ಕರ್ನಾಟಕವನ್ನ ಮುಸ್ಲೀಂ ರಾಜ್ಯವನ್ನಾಗಿಸ ಬೇಡಿ ಎಂದರು.
Post a Comment