104 ಎಕರೆ ಗೋಪಿಶೆಟ್ಟಿ ಕೊಪ್ಪದಲ್ಲಿ ಬಡಾವಣೆ ನಿರ್ಮರ್ಮಿಸಲು ಯೋಚಿಸಿದ್ದು ಇದರಲ್ಲಿ 34 ಎಕರೆ ಭೂಮಿ ಕೊಡಲು ರೈತರು ಮುಂದೆ ಬಂದಿದ್ದಾರೆ ಎಂದು ಸೂಡ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಳಿದ ರೈತರು 50-50 ಅನುಪಾತದಲ್ಲಿ ಮನೆ ರಚಿಸಲು ಮುಂದೆ ಬರಬೇಕು. ಸೋಮಿನಕೊಪ್ಪ1½ ಎಕರೆ ಮತ್ತು ನಿಧಿಗೆಯಲ್ಲಿ 3 ಎಕರೆ ಸೈಟ್ ಕೊಡಲು ನಿರ್ಧರಿಸಲಾಗಿದೆ. 50-50 ಅನುಪಾತದಲ್ಲಿ ರೈತರು ಭೂಮಿಕೊಡಲು ಮುಂದೆ ಬಂದರೆ ಸೈಟ್ ಹಂಚಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸರ್ಕಾರ ಹಣ ನೀಡಿದ್ದು ನೇರ ಖರೀದಿಗೆ ಔಟ್ ರೇಜ್ ಪರ್ಚೇಸ್ ಗೆ (ನೇರ ಖರೀದಿ ಮಾಡಲು) ಸಾಧ್ಯವಾಗಿದೆ. ಊರುಗಡೂರಿನಲ್ಲಿ 437 ಸೈಟನ್ನ ಎರಡು ತಿಂಗಳಲ್ಲಿ ಹಂಚಲಾಗುವುದು 34 ಉದ್ಯಾನವನ ಅಭಿವೃದ್ಧಿ, ರಸ್ತೆ ಅಭಿವೃದ್ಧಿಗೆ 42 ಕೋಟಿ ಹಣ ನಿಗದಿ ನೀಡಲಾಗುತ್ತದೆ ಎಂದರು.
ಊರಗಡೂರಿನಲ್ಲಿ ಅಪಾರ್ಟ್ ಮೆಂಟ್ ನಿರ್ಮಾಣ ಮಾಡಲಾಹುತ್ತಿದೆ. ವಾಚಪೇಯಿ ಬಡಾವಣೆಯಲ್ಲಿ ಸೂಡಾಕಚೇರಿ ನಿರ್ಮಿಸಲು ಯೋಚಿಸಲಾಗಿದೆ. ನಗರದ ಸೌಂದರ್ಯದ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.
37 ಉದ್ಯಾನವನದಲ್ಲಿ ನೀರಿನ ವ್ಯವಸ್ಥೆ, ನಿವಾಸಿಸಂಘಗಳೊಂದಿಗೆ ಗಿಡ ನೆಡುವ ಕುರಿತು. 9 ಕೆರೆಗಳ ಅಭಿವೃದ್ಧಿಗೆ ಕ್ರಮ, ಕೆರೆಯಲ್ಲಿ ನೀರು ಸಂಗ್ರಹ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದರು.
ಎಲ್ಲಡೆ ಬಾಕಿಯಿರುವ ಸೂಡಾ ಕಾರ್ನರ್ ಸೈಟ್ ಗಳನ್ನ ಮಾರಾಟ ಮಾಡಲು ನಿರ್ಧರಿಸಲಾಗುವುದು. ಸೋಗಾನೆಯಲ್ಲಿ 15 ಎಕರೆ ಬಗುರ್ ಹುಕುಂ ಜಾಗವಿದೆ. ಡಿಸಿಯವರಿಗೆ ಮನವಿ ಮಾಡಿಕೊಳ್ಳಲಾಗಿದ್ದು ಸರಿಯಾಗಿ ಸರ್ವೆ ಮಾಡಿ ಸರ್ಕಾರಿ ಜಾಗ ನೀಡಲು ಕೋರಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ 10 ಕಿಮಿ ದೂರದಲ್ಲಿ ಬಗುರ್ ಹುಕುಂ ಜಾಗ ಇರಬಾರದು ಎಂದು ಸರ್ಕಾರಿ ಆದೇಶವಿದೆ. ಈ ಸರ್ಕಾರಿ ಜಾಗ ಸಿಕ್ಕರೆ ಡೆವೆಲಪ್ ನೆಂಟ್ ಚಾರ್ಜ್ ನಲ್ಲಿ ಸೈಟ್ ನೀಡಬಹುದು ಎಂದರು.
ರಾಜ್ಯ ಸರ್ಕಾರದ ಬಜೆಟ್ ಉತ್ತಮವಾಗಿದೆ. ಬ್ರಾಂಡ್ ಬೆಂಗಳೂರು, ಸಮಾಜ ಕಲ್ಯಾಣ, ಉದ್ಯೋಗ ಕ್ಕೆ ಒತ್ತುಕೊಡಲಾಗಿದೆ ಎಂದರು.
Post a Comment