Shivamogga Nagareeka hitharakshna vedike accused-ನಾಗರೀಕ ಹಿತರಕ್ಷಣ ವೇದಿಕೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬಿಸಿಲಿನಲ್ಲಿ ಪ್ರತಿಭಟನೆ-ಅಧಿಕಾರಿಗಳ ವಿರುದ್ಧ ಕೆಂಡಕಾರಿದ ಪ್ರತಿಭಟನಾಕಾರರು


 ಶಿವಮೊಗ್ಗದಲ್ಲಿ ನಾಗರೀಕರ ಹಿತರಕ್ಷಣೆ ವೇದಿಕೆ ಅಧಿಕಾರಿಗಳ ವಿರುದ್ಧ ಕೆಂಡಕಾರುತ್ತಿದೆ. ಮೊದಲು ಪಾಲಿಕೆ ಆಯುಕ್ತರನ್ನ ಭೇಟಿ ಮಾಡಲು ಹೋದಾಗ ಆಯುಕ್ತರು ಮನವಿ ಸ್ವೀಕರಿಸದೆ ಹೋಗಿದ್ದು, ಇದನ್ನ ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬಿಸಿಲಿನಲ್ಲಿ ಗಂಟೆಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಬಂದು ಮಾತುಕತೆ ನಡೆಸಲು ಜಿಲ್ಲಾಡಳಿತ ಸಿದ್ದರಿಲ್ಲವೆಂದರೆ ಇದು ಪ್ರಜಾಪ್ರಭುತ್ವಕ್ಕೆ ಮಾಡಿರುವ ಅವಮಾನ ಎಂದು ದೂರಿದೆ. 


ಇಂದು ಶಿವಮೊಗ್ಗ ನಾಗರೀಕ ಹಿತರಕ್ಷಣ ವೇದಿಕೆ ಇ-ಸ್ವತ್ತು ಕುರಿತು ಪಾಲಿಕೆ ಆಯುಕ್ತರಿಗೆ ಮನವಿ ನೀಡಲು ಪಾಲಿಕೆಗೆ ತೆರಳಿತ್ತು. ಇ-ಸ್ವತ್ತಿನ ಕರಡುಪ್ರತಿಗಳನ್ನ ನಮೂನೆ 2/3 ಅರ್ಜಿಯನ್ನ ನೀಡುವ ಪ್ರಕ್ರಿಯೆಯನ್ನ ತಕ್ಷಣ ಆರಂಭಿಸುವಂತೆ ಒತ್ತಾಯಿಸಿ ಆಯುಕ್ತರಿಗೆ ಮನವಿ ನೀಡಲು ಹೋದಾಗ ಆಯುಕ್ತರು ಮನವಿ ಸ್ವೀಕರಿಸದೆ ತೆರಳಿರುವುದು ವೇದಿಕೆಯ ಕೆಂಗಣ್ಣಿಗೆ ಗುರಿಯಾಗಿದೆ. 


ಆಯುಕ್ತರ ಈ ನಡವಳಿಕೆಯನ್ನ ಖಂಡಿಸಿ ಪಾಲಿಕೆಯಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿ ಕಳೆದ ಒಂದು ಗಂಟೆಯಿಂದ ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿಗಳು ಹೋಗದೆ ಇರುವುದಕ್ಕೆ ವೇದಿಕೆಯ ಹೋರಾಟಗಾರರ ಆಕ್ರೋಶದ ಕಟ್ಟೆ ಒಡೆಯಲು ಕಾರಣವಾಗಿದೆ. ಈ ಕುರಿತು ಸುದ್ದಿಲೈವ್ ನೊಂದಿಗೆ ಮಾತನಾಡಿದ ವೇದಿಕೆಯ ಅಧ್ಯಕ್ಷ ವಸಂತ್ ಕುಮಾರ್ ನಾವು ಕಳೆದ 25 ವರ್ಷದಿಂದ ಈ ನಗರದಲ್ಲಿ ನಾಗರೀಕರಾಗಿ ವಾಸವಾಗಿದ್ದೇವೆ. 


ಆದರೆ ಮನವಿ ಸ್ವೀಕರಿಸಲಾಗಲಿ, ನಮ್ಮೊಂದಿಗೆ ಮಾತನಾಡಲಾಗಲಿ ಅಧಿಕಾರಿಗಳಿಗೆ ಆಗ್ತಾಯಿಲ್ಲ ಎಂದರೆ ಇದು ಉದ್ದೇಶ ಪೂರಕವಾಗಿ ಪ್ರಜಾಪ್ರಭುತ್ವವನ್ನ ಹತ್ತಿಕ್ಕುವ ಕಾರ್ಯವಾಗಿದೆ. ನಾವೆಲ್ಲ ಹಿರಿಯ ನಾಗರೀಕರಾಗಿದ್ದೇವೆ. ನಮ್ಮ ಮನವಿ ಏನೆಂಬುದನ್ನ ಸ್ವೀಕರಿಸಲು ಸಾಧ್ಯವಾಗಲಿಲ್ಲ ಎಂದರೆ ಅಧಿಕಾರಿಗಳ ದರ್ಪ ಮೆರೆದಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದರು‌ 

Post a Comment

Previous Post Next Post