ರಾಮ್ ಕೋಸ್ ನ ಅಧ್ಯಕ್ಷರಾಗಿ ಎಚ್ ಎಲ್ ಷಡಕ್ಷರಿ ಮತ್ತು ಉಪಾಧ್ಯಕ್ಷರಾಗಿ ನೂರ್ ಬೇಗ್ ಆಯ್ಕೆ!Shadakshari elected as Ramcos president

 

ರೈತರ ಅಡಿಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘದ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಗುರುವಾರ ರಾಮ್ ಕೋಸ್ ಸಭಾಂಗಣದಲ್ಲಿ ಚುನಾವಣೆ ನಡೆಯಿತು 


ನೂತನ ನಿರ್ದೇಶಕರಾಗಿ ಆಯ್ಕೆಗೊಂಡ 15 ಜನ ನಿರ್ದೇಶಕರಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಎಚ್ ಎಲ್ ಷಡಕ್ಷರಿ ಮತ್ತು ಮಂಜುನಾಥೇಶ್ವರ ನಾಮಪತ್ರ ಸಲ್ಲಿಸಿದ್ದರು . ಕಡೆಯಲ್ಲಿ ಮಂಜುನಾಥೇಶ್ವರ ರವರು ತಮ್ಮ ನಾಮಪತ್ರವನ್ನು ಹಿಂಪಡೆದ ಕಾರಣ ಹೆಚ್ಚು ಷಡಕ್ಷರಿ ಅವರು ಅವಿರೋಧವಾಗಿ ಆಯ್ಕೆಯಾದರು


ಉಪಾಧ್ಯಕ್ಷರ ಸ್ಥಾನಕ್ಕೆ ನೂರು ಬೇಗ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಸಿಡಿಓ ಶಾಂತರಾಜ್ ಮತ್ತು ಸಿಬ್ಬಂದಿ ಚುನಾವಣಾ ಪ್ರಕ್ರಿಯೆ ಕಾರ್ಯ ನಿರ್ವಹಿಸಿದರು.


ಶಾಸಕ ಬಿಕೆ ಸಂಗಮೇಶ್ವರವರ ಮಾರ್ಗದರ್ಶನದಲ್ಲಿ ನಗರಸಭಾ ಮಾಜಿ ಅಧ್ಯಕ್ಷರು ಮತ್ತು ಹಾಲಿ ಸದಸ್ಯರಾದ ಬಿಕೆ ಮೋಹನ್, ಪಿ ಎಲ್ ಡಿ ಬ್ಯಾಂಕ್ ನ ಅಧ್ಯಕ್ಷ ಬಿಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಎಸ್ ಕುಮಾರ್, ವಿದ್ಯುತ್ ಇಲಾಖೆ ನಿರ್ವಹಣಾ ಸಮಿತಿಯ ಸದಸ್ಯ ಬಸವಂತಪ್ಪ, ಡಿಸಿಸಿ ಬ್ಯಾಂಕಿನ ನಿರ್ದೇಶಕ ದಶರಥ ಗಿರಿ, ಕುವೆಂಪು ವಿವಿಯ ಸೆನೆಟ್ ಸದಸ್ಯ ಮುನಾವರ್ ಭಾಷಾ, ಪಂಚ ಗ್ಯಾರೆಂಟಿಗಳ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಟಿ ಎ ಪಿ ಸಿ ಎಂ ಎಸ್ ನ ಸದಸ್ಯ ಲೋಕೇಶ್, ಮುಖಂಡರಾದ ಜೆ ಬಿ ಟಿ ಬಾಬು,


 ಗೌಡರಹಳ್ಳಿಯ ಶೌಕತ್ ಆಲಿ ಜಗದೀಶ್ ಗೌಡರು ರಾಮ್ ಕೋಸ್ ಸಿಇಒ ವಿರೂಪಾಕ್ಷಪ್ಪ ಸೇರಿದಂತೆ ಮುಂತಾದವರು ಇದ್ದರು

Post a Comment

Previous Post Next Post