ಕೋರ್ಟ್ ಆವರಣದಲ್ಲಿ ಮೂವರು ರೌಡಿಶೀಟರ್ ಗಳ ನ್ನ ವಶಕ್ಕೆ ಪಡೆದ ಪೊಲೀಸರು-The police have taken three rowdy sheeters into custody

 

ಶಿವಮೊಗ್ಗದಲ್ಲಿ ಹಂದಿ ಅಣ್ಣಿಯ ಕೊಲೆ ಆರೋಪಿಗಳ ಹತ್ಯೆ ಮಾಡಿದವರು ಇಂದು ಕೋರ್ಟ್ ಗೆ ಹಾಚರದಾಗ ಮೂವರು ರೌಡಿ ಶೀಟರ್ ಗಳನ್ನ ಕೋರ್ಟ್ ಆವರಣದಲ್ಲಿಯೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. 


ಹಂದಿ ಅಣ್ಣಿ ಕೊಲೆ ಆರೋಪಿಗಳಿಗೆ ಬೆದರಿಕೆ ಇದ್ದ ಬೆನ್ನಲ್ಲೇ ಈ ಮೂವರ ಆರೋಪಿಗಳ ಬಂಧನ ಸಂಚಲನ ಮೂಡಿಸಿದೆ. ನ್ಯಾಯಾಲಯದ ವ್ಯಾಪ್ತಿಯಲ್ಲಿಯೇ ಕೊಲೆಯ ಸಂಚು ನಡೆಸಲಾಗುತ್ತಿದೆ ಎಂಬ ವದಂತಿಯ ಬೆನ್ನಲ್ಲೇ ಈ ಮೂವರ ಬಂಧನ ಸಂಚಲನ ಮೂಡಿಸಿದೆ. 


ಡಿವೈಎಸ್ಪಿ ಸಂಜೀವ್ ಕುಮಾರ್ ಅವರ ನೇತೃತ್ವದಲ್ಲಿ ಮೂವರು ರೌಡಿ ಶೀಟರ್ ಗಳನ್ನ ವಶಕ್ಕೆ ಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇಂದು ಹಂದಿ ಅಣ್ಣಿಯ ಹತ್ಯೆ ಆರೋಪಿಗಳಾದ ಚಂದನ್, ಫಾರೂಕ್, ನದನ್ ರಾಜ್, ಮಧುಸೂದನ್ ಮತ್ತು ಮದು ಎಂ ಐವರು ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು.


ಇದರಲ್ಲಿ ಆರೋಪಿ ಮಧು ಒಬ್ಬ ಹಾಜರಾಗಿರಲಿಲ್ಲ. ನಾಲ್ವರು ಐಒ ಮುಂದೆ ಸಬ್ ಮಿಷನ್ ಪ್ರಕ್ರಿಯೆ ನಡೆಯಬೇಕಿತದತು. ಕೋರ್ಟ್ ಆವರದಲ್ಲಿ ಮೂವರನ್ನ ವಶಕ್ಕೆ ಪಡೆಯಲಾಗಿದೆ. ಮೂರನ್ನ ರೌಡಿ ಶೀಟರ್ ಗಳ ಮಲ್ಲಿಯ ಸಹಚರರಿರಬೇಕೆಂದು ಹೇಳಲಾಗಿದೆ.


ಸಂಜೀವ್ ಕುಮಾರ್ ಅವರ ನೇತೃತ್ವದ ಈ ಆರೇಷನ್ ನಲ್ಲಿ ಸಿಕ್ಕಿಬಿದ್ದವರನ್ನ ಜಯನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ. ಇವರೆಲ್ಲಾ ಮಾರಕಾಸ್ತ್ರ ಹಿಡಿದು ಬಂದಿರುವುದು ಸಹ ಈ ಎಲ್ಲಾ ಅನುಮಾನಗಳಿಗೆ ಕಾರಣವಾಗಿದೆ.

Post a Comment

Previous Post Next Post