ಜನರಿಗೆ ಹೊರೆಯಾಗದಂತೆ ಪಾಲಿಕೆಯನ್ನ ವಿಂಗಡಿಸಲು ಮನವಿ- petition has been made to the Commissioner

 

ಜನರಿಗೆ ಹೊರೆಯಾಗದಂತೆ ಮಹಾನಗರ ಪಾಲಿಕೆಯ ವಲಯ ಕಛೇರಿ ನಿರ್ದಿಷ್ಟಪಡಿಸಬೇಕೆಂದು ಮಾಜಿ ಕಾರ್ಪರೇಟರ್ ಯಮುನಾರಂಗೇಗೌಡರವರ ನೇತೃತ್ವದಲ್ಲಿ ಆಯುಕ್ತರಿಗೆ ಮನವಿ ನೀಡಿದ್ದಾರೆ. 


ಮಹಾನಗರ ಪಾಲಿಕೆಯನ್ನು 3 ವಲಯ ಕಛೇರಿಗಳನ್ನಾಗಿ ವಿಂಗಡಿಸಲು ಸ್ಥಳವನ್ನು ಗುರುತು ಮಾಡಿರುವ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿರುತ್ತದೆ. ಅದರಂತೆ ದಕ್ಷಿಣ ವಲಯ ಕಛೇರಿಯನ್ನು ಇಮಾಮ್ ಬಡಾ ಪ್ರದೇಶದಲ್ಲಿ ನಿರ್ದಿಷ್ಟಗೊಳಿಸಲಾಗಿರುತ್ತದೆ. 


ಆದರೆ ದಕ್ಷಿಣ ವಲಯದಲ್ಲಿ ಮೀಸಲಿರುವ ವಾರ್ಡ್‌ಗಳ ಪೈಕಿ ಬಹುತೇಕ ಪ್ರದೇಶಗಳು ಉದಾಹರಣಗೆ ವಾರ್ಡ್ ನಂ.12ರ ಸಿದ್ದೇಶ್ವರ ನಗರ, ಚಿಕ್ಕಲ್, ಗುರುಪುರ, ಪುರಲೆ, ವೆಂಕಟೇಶ್ ನಗರ, ವಾರ್ಡ್ ನಂ. 17ರ ವಿದ್ಯಾನಗರ, ಜ್ಯೋತಿರಾವ್ ಬೀದಿ, ಸುಭಾಷ್ ನಗರ. ವಾರ್ಡ್ ನಂ.15ರ ಹರಿಗೆ, ಮಲವಗೊಪ್ಪ, ವಾರ್ಡ್ ನಂ.16ರ ಶಾಂತಿನಗರ, ಊರುಗಡೂರು, ವಿದ್ಯಾನಗರ ದಕ್ಷಿಣ ಈ ಪ್ರದೇಶದ ನಾಗರೀಕರಿಗೆ ನಿರ್ದಿಷ್ಟಪಡಿಸಿರುವ ಜಾಗಕ್ಕೆ ಅವಶ್ಯವಾಗಿರುವ ಸಾರಿಗೆ ವ್ಯವಸ್ಥೆ ಇರುವುದಿಲ್ಲ 


ಹಾಗೂ ಈ ಭಾಗದ ಜನರು ಅತ್ಯಂತ ಬಡವರಾಗಿದ್ದು, ಆಟೋ ಶುಲ್ಕವನ್ನು ಭರಿಸಲು ಸಾಧ್ಯವಿರುವುದಿಲ್ಲ ಹಾಗೂ ಮೇಲ್ಕಂಡ ವಾರ್ಡ್‌ಗಳಿಗೆ ನಿರ್ದಿಷ್ಟಪಡಿಸಿರುವ ಸ್ಥಳವು ಅತ್ಯಂತ ದೂರವಿರುವುದರಿಂದ ದಯವಿಟ್ಟು ವಲಯ ಕಛೇರಿಯನ್ನು ಮಹಾನಗರ ಪಾಲಿಕೆಯಲ್ಲಿಯೇ ಮುಂದುವರಿಸಬೇಕು ಅಥವಾ ಹೊಳೆಬಸ್ಟಾಪ್ ಈ ಪ್ರದೇಶದಲ್ಲಿ ಇರುವ ಪಾಲಿಕೆಯ ಸ್ಥಳವನ್ನು ನಿರ್ದಿಷ್ಟಪಡಿಸಬೇಕಾಗಿ ಈ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ.

Post a Comment

Previous Post Next Post