ಶಿವಮೊಗ್ಗದ ಮಾಚೇನಹಳ್ಳಿಯಲ್ಲಿ ಆರಂಭವಾಗಿರುವ ಎನ್ ಯು ಆಸ್ಪತ್ರೆಂದ ಐದು ವರ್ಷ ಕಳೆದಿದೆ. ಮಲೆನಾಡಿನಲ್ಲಿ ಕಿಡ್ನಿ ಸಂಬಂಧಿತ ಏಕೈಕ ಆಸ್ಪತ್ರೆಯ ಹೆಗ್ಗಳಿಕೆ ಹೊಂದಿದೆ.
18 ಕಿಡ್ನಿ ಟ್ರಾನ್ಸ್ಪಲೆಂಟ್, ರಕ್ತದ ಗುಂಪು ಹೊಂದಾಣಿಕೆ ಆಗದವರಿಗೂ ಯಶಸ್ವಿ ಕಿಡ್ನಿ ಆಪರೇಷನ್ ಮಾಡಲಾಗಿದೆ. ಎನ್ ಆಸ್ಪತ್ರೆ ಇನ್ಮುಂದೆ ಶಿವಮೊಗ್ಗ ಕಿಡ್ನಿ ಆಸ್ಪತ್ರೆ ಎಂದು ಮರುನಾಮಕರಣಗೊಂಡಿದೆ. ಇಂದು ವಿಶ್ವ ಕಿಡ್ನಿ ಸುಸಂಧರ್ಭದಲ್ಲಿ ಎನ್ ಯು ಆಸ್ಪತ್ರೆ ಸುದ್ದಿಗೋಷ್ಠಿ ನಡೆಸಿದೆ.
ಆಸ್ಪತ್ರೆಯ ವೈದ್ಯರಾದ ಡಾ.ಪ್ರವೀಣ್ ಮಾತನಾಡಿ, ಜೀವನ ಶೈಲಿಯ ಅವ್ಯವಸ್ಥೆಯಿಂದ ಶುಗರ್ ಆರಂಭವಾಗುತ್ತದೆ. ಶುಗರ್ ನಿಂದ ಕಿಡ್ನಿಗೆ ಹೊಡೆತಬೀಳುತ್ತದೆ. ಹಾಗಾಗಿ ಜೀವನ ಶೈಲಿಯ ಈ ಕಾಯಿಲೆಗಳನ್ನ ಮುನ್ನಚ್ಚರಿಕೆಯಿಂದ ಕಾಯಿಲೆಯನ್ನ ನಿವಾರಿಸೋಣ ಎಂದರು.
ನೆಫ್ರೋ ಮತ್ತು ಯೂರೋ ಎರಡೂ ಇರುವ ಆಸ್ಪತ್ರೆ ಕಿಡ್ನಿ ಆಸ್ಪತ್ರೆಯಾಗಿದೆ. ಎರಡೂ ವ್ಯವಸ್ಥೆಯಿರುವ ಆಸ್ಪತ್ರೆ ಎಲ್ಲೂ ಇಲ್ಲ. ಹಾಗಾಗಿ ಎನ್ ಯು ಎಂದು ಹೇಳಲಾಗುತ್ತಿದೆ ಎಂದರು.
ಎಲ್ಲಾ ಆಸ್ಪತ್ರೆಗಳು ಕೇಂದ್ರ ಸರ್ಕಾರದ ಪ್ರೊಟೋಕಾಲ್ ಪ್ರಕಾರ ನಡೆಯುತ್ತಿದೆ. ಕಿಡ್ನಿ ಫೈಲ್ಯೂರ್ ಆದರೆ ನೋಂದಣಿ ಮಾಡಿಸಿಕೊಂಡವರ ಸಂಖ್ಯೆಗೆ ಕಾಯಬೇಕಾಗಿದೆ. ಹಾಗಾಗಿ ಕಿಡ್ನಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
Post a Comment