ಜಿಲ್ಲಾ ಕ್ಷತ್ರೀಯ ಮರಾಠ ಸೇವಾ ಸಂಘದ ಮರಾಠ ಸಮಾಜದ ವೆಬ್ ಸೈಟ್ ಲಾಂಚಿಂಗ್ ಮತ್ತು ಸಮಾಜದ ಹಿರಿಯ ಮುಖಂಡರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಮಾ.15 ರಂದು ಬೆಳಿಗ್ಗೆ 10 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಈ ಕಾರ್ಯಕ್ರಮ ಜರುಗಲಿದೆ. ಗವಿಪುರ ಗೋಸಾಯಿ ಮಠದ ಮಂಜುನಾಥ್ ಭಾರತೀ ಸ್ವಾಮೀಜಿ ದಿವ್ಯ ಸಾನಿದ್ಯ ವಹಿಸಲಿದ್ದಾರೆ.
ಕಾರ್ಮಿಕ ಸಚಿವ ಸಂತೋಷ ಲಾಡ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಚಿವ ಮಧು ಬಂಗಾರಪ್ಪ ವೆಬ್ ಸೈಟ್ ಲಾಂಚ್ ಮಾಡಲಿದ್ದಾರೆ. ಸಂಸದ ರಾಘವೇಂದ್ರ, ಎಂಲ್ ಸಿ ಮುಳೆ ಭಾಗಿಯಾಗಲಿದ್ದಾರೆ.
ಎಸ್ ಜೆ ಕೆಎಂ ಗೂಗಲ್ ನಲ್ಲಿ ಸರ್ಚ್ ಮಾಡಿದರೆ ಅವರ ಹೆಸರು, ಮೊಬೈಲ್ ನಂಬರ್ ದೊರೆಯಲಿದೆ. ವಧು ವರರ ಅನ್ವೇಷಣೆ ಸಹ ಈ ವೆಬ್ ಸೈಟ್ ನಲ್ಲಿ ಪ್ರಕಟವಾಗುತ್ತದೆ. ಮರಾಠ ಮತ್ತು ಕನ್ನಡಿಗರು ಸಹೋದರರು. ಮೊನ್ನೆ ನಡೆದ ಘಟನೆಯನ್ನ ಸಮಾಜ ಸಹಿಸೊಲ್ಲ. ಕೆಲ ಪುಂಡಪೊಕರಿಗಳಿಂದ ಘಟನೆ ನಡೆಯಲ್ಲ ಎಂದರು.
Post a Comment