ಬಿಪಿಎಲ್ ಕಾರ್ಡ್ ವಿತರಣೆ ವಿಳಂಬ ವಿಚಾರ ಕುರಿತು ಮಾತನಾಡಿರುವ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು, ಕಳೆದ ಸರ್ಕಾರ ಇದ್ದಾಗ 2.95 ಲಕ್ಷ ಕಾರ್ಡ್ ಗಳು ಪರಿಷ್ಕರಣೆಯಲ್ಲಿ ಇದ್ದವು. ನಾವು ಅಧಿಕಾರಕ್ಕೆ ಬಂದ ಮೇಲೆ ಅಧಿಕಾರಿಗಳಿಗೆ ಅದನ್ನ ಪರಿಷ್ಕರಣೆ ಮಾಡಲು ತಿಳಿಸಿದೆ. ಅದರಲ್ಲಿ 1.65 ಲಕ್ಷ ಕಾರ್ಡ್ ಗಳನ್ನ ಬಿಪಿಎಲ್ ಗೆ ಹಾಗೂ ಉಳಿದ ಕಾರ್ಡುಗಳನ್ನು ಎಪಿಎಲ್ ಗೆ ಸೇರಿಸಿದ್ದೇವೆ ಎಂದರು.
ನಾವು ಐದು ಕೆಜಿ ಅಕ್ಕಿಯನ್ನು ಕೊಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದೆವು. ಈಗ ಅದನ್ನ ಜಾರಿಗೊಳಿಸುತ್ತಿದ್ದೇವೆ. ನಾವು ಇಂದು ನುಡಿದಂತೆ ನಡೆದಿದ್ದೇವೆ. ನಾವು ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಅಕ್ಕಿಯನ್ನ ಕೇಳಿದಾಗ ಕೊಟ್ಟಿರಲಿಲ್ಲ. ಈಗ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಫೆಬ್ರವರಿ ತಿಂಗಳಿನಿಂದ ಪ್ರತಿ ತಿಂಗಳು ಕೊಡಲು ನಿರ್ಧಾರ ಮಾಡಿದ್ದೇವೆ ಎಂದರು.
ಇದಕ್ಕೆ 2.10 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕಾಗುತ್ತದೆ. ಈಗಾಗಲೇ ಹಣವನ್ನ ಎಫ್ಸಿಐಗೆ ಪಾವತಿ ಮಾಡಿದ್ದೇವೆ. ಈ ನಿರ್ಧಾರ ತೆಗೆದುಕೊಳ್ಳಲು ಸ್ವಲ್ಪ ತಡವಾಯಿತು. ಹಾಗಾಗಿ ಫೆಬ್ರವರಿ ತಿಂಗಳದ್ದು ಅಕ್ಕಿಯನ್ನು ಸೇರಿಸಿಕೊಡಲಾಗುವುದು. ತಕ್ಷಣ ಕೇಂದ್ರ ಸರ್ಕಾರದಿಂದ ಅಕ್ಕಿಯನ್ನು ಖರೀದಿ ಮಾಡಿ ನೀಡಲಿದ್ದೇವೆ ಎಂದರು.
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಂತೆ ಚಾಚು ತಪ್ಪದೇ ಪಾಲನೆ ಮಾಡುತ್ತಿದ್ದೇವೆ. ಜವಾಬ್ದಾರಿ ಏನು ಅಂದ್ರೆ ನ್ಯಾಷನಲ್ ಫುಡ್ ಸೆಕ್ಯೂರಿಟಿ ಆಕ್ಟ್ ಅನ್ನ ನಾವು ತಂದಿದ್ದೇವೆ. ಯಾವ ಬಡವನು ಕೂಡ ಹಸುವಿನಿಂದ ಮಲಗಬಾರದು ಎಂದು ಈ ನಿರ್ಧಾರ ಮಾಡಿದ್ದೇವೆ.ಸಿಎಂ ಸಿದ್ದರಾಮಯ್ಯ ಅವರು 17ನೇ ಬಜೆಟ್ ಮಂಡನೆ ಮಾಡಲಿದ್ದಾರೆ ಎಂದರು.
ಇದರಿಂದ ಭಾರತದಲ್ಲಿ ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ಈ ಬಜೆಟ್ ನಲ್ಲಿ ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಯ ಯೋಜನೆಗಳು ಬರಲಿವೆ. ಇದಕ್ಕೆ ಯಾವುದೇ ರೀತಿಯ ಹಣದ ಕೊರತೆ ಇಲ್ಲ ಎಂದರು.
ಡಿಕೆಶಿ ಕಾಂಗ್ರೆಸ್ ನ್ನ ಕಟ್ಟಿ ಬೆಳೆಸಿದವರು
ಡಿಕೆ ಶಿವಕುಮಾರ್ ಅವರು ಬಿಜೆಪಿಗೆ ಸೇರ್ಪಡೆ ಆಗುತ್ತಾರೆ ಎಂಬ ವದಂತಿ ವಿಚಾರದ ಬಗ್ಗೆ ಮಾತನಾಡಿದ ಸಚಿವ ಮುನಿಯಪ್ಪ, ನಾವೆಲ್ಲರೂ ಹಿಂದುಗಳಿದ್ದೇವೆ. ಈ ದೇಶದಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತರು ಬೌದ್ಧರು ಎಲ್ಲರೂ ಕೂಡ ಇದ್ದಾರೆ. ಭಾರತ ಒಂದು ಜಾತ್ಯಾತೀತ ರಾಷ್ಟ್ರವಾಗಿದೆ. ಅವರಿಗೆ ಬೇಕಾದ ಧರ್ಮವನ್ನು ಅವರು ಆಚರಣೆ ಮಾಡಬಹುದು
ಅವರುಗಳು ಅವರ ದೇವರ ಕಾರ್ಯಗಳಿಗೆ ಹೋಗುವುದು ಒಂದು ಸಾಮಾನ್ಯ ಸಂಗತಿ. ಇದಕ್ಕೆ ಬಣ್ಣ ಕಟ್ಟುವ ಅವಶ್ಯಕತೆ ಇಲ್ಲ. ಡಿಕೆಶಿ ಅವರು ದೇವಸ್ಥಾನಕಾದರು ಹೋಗಲಿ ಯಾವುದೇ ದೇವರ ಕಾರ್ಯಕ ಆದರೂ ಹೋಗಲಿ ಅವರು ಅವರ ಧರ್ಮದ ಅಡಿಯಲ್ಲಿ ಹೋಗಿದ್ದಾರೆ. ಡಿಕೆಶಿ ಅವರು ಯಾವ ಪಕ್ಷಕ್ಕೂ ಹೋಗುವುದಿಲ್ಲ. ಅವರು ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ ಎಂದರು.
ಡಿಕೆಶಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮೇಲೆ ಹೊಸ ಸಂಚಲನೆ ಮೂಡಿದೆ. ಇಡೀ ರಾಷ್ಟ್ರ ನೋಡುವಂತೆ ಅವರು ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದಾರೆ. ಅವರು ಕಾಂಗ್ರೆಸ್ಸನ್ನ ಬಿಟ್ಟು ಹೋಗುವ ಸಂದರ್ಭ ಎಲ್ಲೂ ಇಲ್ಲ. ಸುಮ್ಮನೆ ರಾಜಕೀಯವಾಗಿ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಮುಂದುವರೆಯುತ್ತಾರೆ. ಪಿಸಿಸಿ ಹಾಗೂ ಉಪಮುಖ್ಯಮಂತ್ರಿಗಳಾಗಿ ಡಿಕೆ ಶಿವಕುಮಾರ್ ಅವರು ಮುಂದುವರೆಯುತ್ತಾರೆ ಎಂದು ಸ್ಪಷ್ಟನೆ ನೀಡಿದರು.
ಮಾರ್ಚ್ 22 ಕರ್ನಾಟಕ ಬಂದ್ ವಿಚಾರ
ಮಾ.22 ರಂದು ಕರ್ನಾಟಕ ಬಂದ್ ಮಾಡುವ ವಿಚಾರದ ಕುರಿತು ಮಾತನಾಡಿದ ಸಚಿವರು, ರಾಜಕೀಯವಾಗಿ ಅವರ ಕೆಲಸ ಅವರು ಮಾಡಲಿ ನಮ್ಮ ಕೆಲಸ ನಾವು ಮಾಡುತ್ತೇವೆ ಎಲ್ಲರೂ ಸ್ವತಂತ್ರರಾಗಿದ್ದಾರೆ ಎಂದರು.
Post a Comment