ನಮ್ಮ ಪೊಲೀಸ್ ನಮ್ಮ ಹೆಮ್ಮೆ, ದೈಹಿಕ ಸದೃಢತೆಗಾಗಿ ಹಾಗೂ ಮಾದಕ ವಸ್ತುಗಳ ಮುಕ್ತ ಕರ್ನಾಟಕ ನಿರ್ಮಾಣ ಮಾಡಲು ಇಂದು ಡಿಎಆರ್ ಗ್ರೌಂಡ್ ನಲ್ಲಿ ಮ್ಯಾರಥಾನ್ ನಡೆಸಲಾಗಿದೆ.
ಅಶೋಕ ವೃತ್ತ, ಎಎ ವೃತ್ತ, ಕರ್ನಾಟಕ ಸಂಘ, ಡಿವಿಎಸ್ ಸರ್ಕಲ್, ಮಹಾವೀರ ವೃತ್ತ, ಶಿವಮೂರ್ತಿ ವೃತ್ತ, ಜೈಲ್ ವೃತ್ತ ಐಬಿ ವೃತ್ತದ ಮೂಲಕ ಡಿಎಆರ್ ಗ್ರೌಂಡ್ ಗೆ ಬಂದು ಮುಕ್ತಾಯಗೊಳ್ಳುತ್ತದೆ. ಈ ಒಂದು ಸುತ್ತು 5 ಕೆ ಎಙದು ಪರಿಗಣಿಸಲಾಗಿದೆ. ಇದೇ ಮಾರ್ಗವಾಗಿ ಎರಡು ಸುತ್ತು ಓಡಿದರೆ ಅದೇ 10 ಕೆ ಆಗಲಿದೆ. ಹೀಗೆ 5 ಕೆ ಮತ್ತು 10 ಕೆ ಮ್ಯಾರಥಾನ್ ನಲ್ಲಿ 1700ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು.
ಶಾಲಾ ಕಾಲೇಜ್, ಬ್ಯಾಂಕ್ ಸಿಬ್ಬಂದಿ, ಕೆಎಸ್ ಆರ್ ಪಿ, ಸಿಮ್ಸ್ ವೈದ್ಯರು, ಖಾಸಗಿ ವೈದ್ಯರು, ಮಕ್ಕಳು ಮಹಿಳೆಯರು ಭಾಗಿಯಾಗಿದ್ದರು. ಈ ವೇಳೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಚೆನ್ನಬಸಪ್ಪ ಮಾತನಾಡಿ, ಈ ಹಿಂದೆ ನಡೆದಿದ್ದ ಚನ್ನಗಿರಿ ಟು ಶಿವಮೊಗ್ಗದ ಮ್ಯಾರಥಾನ್ ನನ್ನ ಮೆಲಕು ಹಾಕಿದರು. ಒಂದು ಉದ್ದೇಶಕ್ಕಾಗಿ ಮ್ಯಾರಥಾನ್ ನಡೆದಿದೆ. ಸದುದ್ದೇಶದಿಂದ ಓಟ ನಡೆಸಲಾಗಿದೆ ಎಂದರು.
ಹಾಡ್ತ ಹಾಡ್ತಾ ರಾಗ. ಓಡ್ತಾ ಓಡ್ತಾ ಆರೋಗ್ಯಕರ ಸಮಾಜ ನಿರ್ಮಿಸೋಣ, ಫಿಸಿಕಲ್ ಫಿಟ್ ನೆಸ್ ಬಗ್ಗೆಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ. ಆರೋಗ್ಯಕರ ಸಮಾಜದಲ್ಲಿ ಫಿಸಿಕಲ್ ಫಿಟ್ ನೆಸ್ ಅಗತ್ಯ ಎಂದರು.
ಎಂಎಲ್ ಸಿ ಡಾ.ಧನಂಜಯ ಸರ್ಜಿ ಮತನಾಡಿ, ಚಟ ಮತ್ತು ದುಷ್ಚಟದ ಬಗ್ಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಚಟ ಎಂದ ತಕ್ಷಣ ಕಾಫಿ ಟೀ ನೆನಪಾಗಬಹುದು, ದುಷ್ಚಟ ಎಂದರೆ ಸಿಗರೇಟ್, ಮದ್ಯವ್ಯಸನಗಳನ್ನ ನಿರಂತರ ಮಾಡುವ ಮೂಲಕ ದುಶ್ಚಟಕ್ಕೆ ಒಳಗಾಗುವುದು. ಆದರೆ ಅದಕ್ಕಿಂತ ಮಾರಕವಾಗಿರುವುದು ಮಾದಕ ವಸ್ತುಗಳು. ಕಿಕ್ ಗಾಗಿ ಮಾದಕ ವಸ್ತು ಸೇವನೆ ಮಾಡಲಾಗುತ್ತದೆ.
ಈ ರೀತಿಯ ದುಶ್ಚಟಗಳಿಗೆ ಯುವಜನಾಂಗ ಬಲಿಯಾಗುತ್ತಿದೆ. ಇದರಿಂದ ಅವರನ್ನ ಹೊರಗೆ ಬರಲು ಆತ್ಮತೃಪ್ತಿ ಇರಬೇಕು. ಓಟ, ಕ್ರೀಡೆ ಮೊದಲಾದ ದೈಹಿಕ ಚಟುವಟಿಕೆಗಳನ್ನ ಹೆಚ್ಚಿಸಿಕೊಂಡು ಆತ್ಮತೃಪ್ತಿ ಪಡೆದುಕೊಳ್ಳಬೇಕು ಎಂದರು.
ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಪ್ರತಿಜ್ಞ ವಿಧಿ ಭೋಧಿಸಿದರು. ಎಸ್ಪಿ ಮಿಥುನ್ ಕುಮಾರ್ ಮತ್ತು ಶಾಸಕ ಚೆನ್ನಬಸಪ್ಪ ಮ್ಯಾರಥಾನ್ ಗೆ ಗ್ರೀನ್ ಸಿಗ್ನಲ್ ನೀಡುವ ಮೂಲಕ ಮ್ಯಾರಥಾನ್ ಗೆ ಚಾಲನೆ ನೀಡಲಾಯಿತು.
ಮ್ಯಾರಥಾನ್ ನಲ್ಲಿ 5 ಕೆ ಮತ್ತು 10 ಕೆ ಸುತ್ತಿನಲ್ಲಿ ಬಹುಮಾನಗಳನ್ನ ಇಡಲಾಗಿದೆ. ಪ್ರಥಮ 10 ಸಾವಿರ, 8 ಸಾವಿರ ತೃತೀಯ ಬಹುಮಾನವಾಗಿ 5 ಸಾವಿರ ರೂ ಬಹುಮಾನ ದೊರೆಯಲಿದೆ. ನಾಲ್ಕು ಕೇಂದ್ರಗಳಲ್ಲಿ ಕುಡಿಯುವವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಅಂಬ್ಯುಲೆನ್ಸ್ ವ್ಯವಸ್ಥೆ ಸಹ ಮಾಡಲಾಗಿತ್ತು.
ಅಚ್ಚುಕಟ್ಟಿನ ವ್ಯವಸ್ಥೆ
ಮ್ಯಾರಥಾನ್ ನ ವ್ಯವಸ್ಥೆಯನ್ನ ಡಿವೈಎಸ್ಪಿ ಸಂಜೀವ್ ಕುಮಾರ್ ಅಚ್ಚುಕಟ್ಟಾಗಿ ಮಾಡಿದ್ದರು. ಸಂಜೀವ್ ಕುಮಾರ್, ಓಟದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಅಂಬ್ಯುಲೆನ್ಸ್ ಕಾರ್ಯಕ್ರಮಕ್ಕೆ ಭಾಗಿಯಾಗುವವರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಮ್ಯಾರಥಾನ್ ನಲ್ಲಿ ಭಾಗಿಯಾಗಿ ಓಡಿದವರ ವಿಡಿಯೋ ರೆಕಾರ್ಡಿಂಗ್ ವ್ಯವಸ್ಥೆಯನ್ನ ಡಿವೈಎಸ್ಪಿ ವ್ಯವಸ್ಥಿತವಾಗಿ ನಿರ್ವಹಿಸಿದ್ದರು.
Post a Comment