ಶಿವಮೊಗ್ಗದ ಮೇದಾರಿ ಕೇರಿಯ ಮುಖ್ಯರಸ್ತೆಯಲ್ಲಿರುವ ಮನೆಯಲ್ಲಿ ವಿವಾಹಿತ ಮಹಿಳೆಯೋರ್ವಳು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಕುಟುಂಬ ದೂರಿದೆ.
ಗಗನಶ್ರೀ(24) ನೇಣಿಗೆ ಶರಾಣದ ವಿವಾಹಿತ ಮಹಿಳೆ ನೇಣಿಗೆ ಶರಣಾಗಿದ್ದಾಳೆ. ಗಾಂಧಿ ಬಜಾರ್ ನಲ್ಲಿದ್ದಾಗ ಗಗನಶ್ರೀಗೆ ಸಂದೀಪ್ ಎಂಬಾತನೊಂದಿಗೆ ಪ್ರೀತಿ ಹುಟ್ಟಿತ್ತು. ಪ್ರೀತಿ ಮದುವೆಯ ವರೆಗೆ ಕರೆದೊಯ್ದರೂ ಸುಖಕರ ಸಂಸಾರ ನಡೆಸಲು ಸಾಧ್ಯವಾಗಲಿಲ್ಲ.
ಮದುವೆಯಾಗಿ ಮೂರು ವರ್ಷ ಸಂಸಾರ ನಡೆಸಿದ್ದ ಗಗನಶ್ರೀ ಮತ್ತು ಸಂದೀಪನಿಗೆ ಒಂದು ಹೆಣ್ಣುಮಗುವಿದೆ. ನಿನ್ನೆ ನೇಣುಬಿಗಿದು ಗಗನಶ್ರೀ ಸಾವನ್ನಪ್ಪಿದ್ದಾಳೆ. ಮನೆಯೆಲ್ಲ ಬಟ್ಟೆಗಳು ಹರಡಿವೆ. ಸಂದೀಪನೇ ಆಕೆಯನ್ನ ಮೆಗ್ಗಾನ್ ಗೆ ಕರೆತಂದಿದ್ದಾನೆ.
ಮಾರ್ಗಮಧ್ಯದಲ್ಲಿ ಗಗನಶ್ರೀ ಸಾವುಕಂಡಿರುವುದಾಗಿ ತಿಳಿದು ಬಂದಿದೆ. ಪತಿಯೇ ಆಕೆಯ ಆತ್ಮಹತ್ತೆಗೆ ಕಾರಣ ಎಂದು ಮೃತ ಗಗನಶ್ರೀಯ ಕುಟುಂಬ ಆರೋಪಿಸಿದೆ. ಗಗನಶ್ರೀ ಬಿಎಸ್ಸಿ ಪದವೀಧರೆಯಾಗಿದ್ದಳು. ಪ್ರಕರಣ ವಿನೋಬ ನಗರ ಠಾಣೆಯಲ್ಲಿ ದಾಖಲಾಗಿದೆ.
Post a Comment