ಎಲ್ಲ ಸಮಾಜದವರು ಸಂಘಟಿತರಾಗಿದ್ದಾರೆ. ರಾಜ್ಯದಲ್ಲಿ ಮರಾಠ ಸಮಾಜ ಒಗ್ಗಾಟ್ಟಾಗಬೇಕಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿದರು.
ನಗರದ ಕುವೆಂಪು ರಂಗ ಮಂದಿರದಲ್ಲಿ ಜಿಲ್ಲಾ ಮರಾಠ ಸಮಾಜದವತಿಯಿಂದ ವೆಬ್ ಸೈಟ್ ಲಾಂಚಿಂಗ್ ಹಾಗೂ ಸಮಾಜದ ಹಿರಿಯರಿಗೆ ಸನ್ಮಾನ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದರು.
ಮರಾಠ ಎಂದಾಕ್ಷಣ ಮುಸ್ಲೀಂ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಮುಘಲರ ವಿರುದ್ಧ ತಿರುಗಿಬಿದ್ದ ಶಿವಾಜಿ ಬಗ್ಗೆ ಮಾತನಾಡುವ ಎಲ್ಲರೂ ಮನೆಯಲ್ಲಿ ಒಂದು ಶಿವಾಜಿ ಫೊಟೊ ಇರಲ್ಲ. ಕಾರಣ ಜಾತಿ ಅಷ್ಟೊಂದು ಪ್ರಭಾವವಾಗಿದೆ. ಜಾತಿ ಮೀರಿ ಕೊಡುವ ಮತ್ತು ತೆಗೆದುಕೊಳ್ಳುವ ವ್ಯವಹಾರ ನಡೆಸೊಲ್ಲ ಎಂದರು.
ಜಾತಿ ಎಂಬುದು ಮಧ್ಯಮ ಮತ್ತು ಬಡವರಿಗೆ ಜಾತಿ ವ್ಯವಸ್ಥೆ ಅಡ್ಡಿ ಬರುತ್ತದೆ. ಸಿರಿವಂತರಲ್ಲಿ ಜಾತಿ ಅಡ್ಡಿಬರೊಲ್ಲ. ಅಂಬೇಡ್ಕರ್ ಅವರು ಸಂವಿಧಾನ ಬರೆದಿದ್ದಾರೆ. ಅವರಿಗೆ ಸ್ಪೂರ್ತಿ ನೀಡಿದವರು ನಮ್ಮ ಮರಾಠ ಸಮಾಜವೆಂದರು. ಈ ದೇಶಕ್ಕೆ ಮೀಸಲಾತಿ ನೀಡಿದ ಹೆಗ್ಗಳಿಕೆ ಮರಾಠರಿಗೆ ಆದರೆ ಮರಾಠರು ಇಂದು 2 ಬಿಗೆ ಮೀಸಲಾತಿಗೆ ಹೋರಾಡುವ ಪರಿಸ್ಥಿತಿ ಬೇರೆ ಇದೆ ಎಂದರು.
ಭಾಷಣದಲ್ಲಿ ಮುಸ್ಲೀಂ ವಿರೋಧಿ ಶಿವಾಜಿ ಎಂದು ಹೇಳುತ್ತಾರೆ. ಅದಲ್ಲ. ಔರಂಗಜೇಬನ ಜೈಲಿನಲ್ಲಿದ್ದಾಗ ಶಿವಾಜಿ ಮಹಾರಾಜರಿಗೆ ಪರಾಗಲು ಸಹಾಯ ಮಾಡಿದವರು ಮುಸ್ಲೀಂ ಸೈನಿಕ. ಕೊಲ್ಲಾಪುರದ ಹೋರಾಟದಲ್ಲಿ ಶಿವಾಜಿ ಅವರ ಸೈನ್ಯದಲ್ಲಿ 60 ಸಾವಿರ ಸೈನಿಕರು ಮುಸ್ಲೀಂರಿದ್ದರು. ಅಫ್ಜಲ್ ಖಾನ್ ನ ಹೊಟ್ಟೆಯ ಬಗೆಯಲು ಸಹಾಯ ಮಾಡಿದವನು ಮುಸ್ಲೀಂ ರುಸ್ತಮೇ ಜಮಾಲ್. ಹಾಗಾಗಿ ಶಿವಾಜಿ ಮುಸ್ಲೀ ವಿರೋಧಿ ಅಲ್ಲ ಎಂದರು.
ಜಪಾನ್ ದೇಶ ಅಂತರ ಗೃಹಗಳ ಪ್ರವಾಸೋದ್ಯಮದ ಬಗ್ಗೆ ಚಿಂತಿಸುತ್ತಿದೆ. ಆದರೆ ಭಾರತದಲ್ಲಿ ಜಾತಿ ವ್ಯವಸ್ಥೆಯ ಬಗ್ಗೆನೇ ಮಾತನಾಡಲಾಗುತ್ತಿದೆ. ಹಾಗಾಗಿ ನಾವೆ ಸಿಎಂ ಸಿದ್ದರಾಮಯ್ಯನವರಿಗೆ ಮೀಸಲಾತಿ ಪರ್ಸೆಂಟೇಜ್ ಹೆಚ್ಚಿಸಲು ಕೋರಿದ್ದೇವೆ. ಸಂವಿಧಾನದಲ್ಲಿರುವ ಹಿಂದೂ ಕೋಡಿಫಿಕೇಷನ್ ಬಿಲ್ ಚರ್ಚೆ ಆಗಬೇಕಿದೆ. ಮರಾಠರು ಬಾಬಾ ಸಾಹೇಬರ ಜಯಂತಿಯನ್ನೂ ಆಚರಿಸಬೇಕು.
ಸಂಸ ರಾಘವೇಂದ್ರ ಮಾತನಾಡಿ, ಶಿವಾಜಿ ಮಹಾರಜನ ಪುತಳಿ ಮತ್ತು ಸಮುದಾಯ ಭವನ ನಿರ್ಮಾಣ ಮಾಡುವ ಬಗ್ಗೆ ಮನವಿ ನೀಡಲಾಹಿದೆ. ಮನವಿ ಬೇಡತ್ತು. ಆದರೂ ನೀಡಿದ್ದಾರೆ ಆಲ್ಕೊಳದಲ್ಲಿ ಶಿವಾಜಿ ಮಹಾರಾಜರ ಪುತಳಿ ನಿರ್ಮಿಸೋಣ ಎಂದರು.
ಮುಖ್ಯಮಂತ್ರಿಗಳ ವರ್ಚಸ್ಸನ್ನ ಹೊಂದಿದ್ದಾರೆ. ಕ್ಷತ್ರಿಯ ಸಮಾಜದವರು ನಮ್ಮ ಸಮಾಜದ ವ್ಯಕ್ತಯೊಬ್ಬ ಸಿಎಂ ಆಗಲಿದ್ದಾರೆ ಎಂಬ ಅಭಿಮತ ವ್ಯಕ್ತಪಡಿಸಿದ್ದಾರೆ. ಅದರೆ ಲಾಡ್ ಅವರು ಸಿಎಂ ಆಗಲಿ ಎಂದರು.
ಶಾಸಕ ಎನ್ ಜಿ.ಮೋಳೆ ಮಾತನಾಡಿ, ನೇವಿಯಲ್ಲಿ ಛತ್ರಪತಿ ಶಿವಾಜಿಮಹಾರಾಜರ ಲಾಂಛನ ಹಾಕಿದ್ದಾರೆ. ಇದಕ್ಕೆ ಮೋದಿ ಕಾರಣನೂ ಹೌದು. ಶಿವಾಜಿ ಭಾರತೀಯ ನೇವಿಯ ಪಿತಾಮಹನೂ ಹೌದು. ಶ್ರೀಶೈಲದಲ್ಲಿ ಶಿವಾಜಿ ಮಹಾರಾಜರ ದೇವಸ್ಥಾನವಿದೆ ಎಂದರು.
ಎಂಎಲ್ ಸಿ ಡಾ.ಧನಂಝಯ ಸರ್ಜಿ ಮಾತನಾಡಿ, ನಾಯಕನಾಗಲು ಕಾರ್ಯಕರ್ತರ ಜೊತೆ ಬೆರೆಯಬೇಕು ಮಹಾನಾಕನಾಗಲು ಎಲ್ಲರೊಂದಿಗೆ ಬೆರೆಯಬೇಕು. ಸಚಿವ ಸಂತೋಷ್ ಲಾಡ್ ಎಲ್ಲರೊಂದಿಗೆ ಬೆರೆಯುತ್ಯಾರೆ. ಹಾಗಸಗಿ ಮಹಾನಾಯಕರು ಎಂದರು.
ಭಾರತ್ಲ್ಲಿ ಹಿಂದೂ ಸಮಾಜ ಉಳಿದಿರುವುದು ಮರಾಠರಿಂದ, ಮೊಘಲರು, ಡಚ್ಚರು, ಬ್ರಿಟೀಷರು. ಇವರೆನ್ನ ರಕ್ಷಿಸಿದ್ದು ಶಿವಾಜಿ ಮಹಾರಾಜರಿಂದ ಎಂದ ಅವರು. ಸಂಘಟನೆ ಮೂಲಕ ಮರಾಠ ಸಮಾಜ ಸರ್ಕಾರಿ ಸವಲತ್ತನ್ನ ಸದುಪಯೋಗ ಪಡೆದುಕೊಳ್ಳಲಿ ಎಂದರು.
ಗೋಸಾಯಿ ಮಠದ ಮಂಜುನಾಥ ಭಾರತಿ ಸ್ವಾಮೀಜಿ ಮಾತನಾಡಿ, ವ್ಯಕ್ತಿಗೆ ಬುದ್ದಿವಂತಿಕೆ ಅವಕಾಶವಿದೆ. ಸಚಿವ ಸಂತೋಷ್ ಲಾಡ್ ಅವರನ್ನ ಬುದ್ದಿವಂತನೆಂದು ವಿಪಕ್ಷದವರೆ ಹೊಗಳುತ್ತಾರೆ. ಕಾರಣ ಅವರ ಬುದ್ದಿವಂತರಾಗಿದ್ದಾರೆ. ಬುದ್ದಿವಂತಿಗೆ ಯಾರ ಸ್ವತ್ತು ಅಲ್ಲ ಅದು ಅವನದೇ ಸ್ವತ್ತಾಗಿದೆ ಎಂದರು.
ಮರಾಠರು ಒಂದೇ ಆಗಿರಬೇಕು.ಒಂದಾದರೆ ಭವನ, ಪುತಳಿ ಎಲ್ಲವೂ ಬರುತ್ತದೆ. ಒಂದಾಗಿದ್ದರೆ ಭವನಮಾತ್ರವಲ್ಲ ಸನಾಜದ ಸಂತೋಷ್ ಲಾಡ್ ರಿಗೆ ಸಿಎಂ ಪಟ್ಟವೂ ಲಭಿಸುತ್ತದೆ ಎಂದರು. ಶೀಘ್ರದಲ್ಲಿಯೇ ಶಿವಾಜಿ ಮಹಾರಾಜರ ಗುರುಕುಲವನ್ನ ಆರಂಭಿಸುತ್ತಿದ್ದೇವೆ. ಹಳಿಯಾಳದಲ್ಲಿ ಆರಂಭಿಸಲಾಗುತ್ತಿದೆ. ಮಾ.30 ರಂದು ಧಾರವಾಡದಲ್ಲಿ ಸಭೆ ಬಡೆಯಲಿದೆ. ಸಚಿವ ಲಾಡ್ ಅವರು ಬರುತ್ತಿದ್ದಾರೆ ಎಂದರು.
Post a Comment