ನಾಳೆ ಕುಂಭ ಸಂಗಮ ತೀರ್ಥ-ಪ್ರಸಾದ ವಿತರಣೆ ಕಾರ್ಯಕ್ರಮ-Kumbh Sangam Teertha Prasad distribution program

 

ವಿಶ್ವಹಿಂದೂ ಪರಿಷತ್ ಮತ್ತು ದೇವಾಲಯದ ಸಮಿತಿಯಿಂದ ಕುಂಭಮೇಳದಲ್ಲಿ ಭಾಗಿಯಾದವರಿಗೆ ಕುಂಭ ಸಂಗಮ ತೀರ್ಥ-ಪ್ರಸಾದ ವಿತರಣಾ ಕಾರ್ಯಕ್ರಮವನ್ನ ಹಮ್ಮಿಕೊಂಡಿದೆ.


ಈ ಕುರಿತು ಸುದ್ದಿಗೋಷ್ಠಿ ನಡೆಸಿದ ವಿಹೆಚ್ ಪಿ ಜಿಲ್ಲಾ ಅಧ್ಯಕ್ಷ ಜೆ.ಆರ್ ವಾಸುದೇವ್ ಮಾತನಾಡಿ, ದೇವಾಲಯದ ಸಂವರ್ಧನಾ ಸಮಿತಿ ರಾಜ್ಯ ಸಂಯೋಜಕ್ ಮನೋಹರ ಮಠದ್ ಇವರ ಘನ ಉಪಸ್ಥಿತಿಯಲ್ಲಿ 45 ದಿನಗಳ ಕಾಲ ಪ್ರಯಾಗ್ ರಾಜ್ ನಲ್ಲಿ ನಡೆದ ಕುಂಭ ಸಂಭ್ರಮ ಕಾರ್ಯಕ್ರಮ ನಡೆಯಲಿದೆ ಎಂದರು.


ಮಾ.15 ರಂದು ಸಂಜೆ 6 ಗಂಟೆಗೆ ಕಲ್ಲಹಳ್ಳಿಯಲ್ಲಿರುವ ಅಭಿಷ್ಠವರದ ಮಹಾಗಣಪತಿ ದೇವಸ್ಥಾನದಲ್ಲಿ ಕುಂಭ ಸಂಗಮ ತೀರ್ಥ ಮತದತು ಪ್ರಸಾದ ವಿತರಣೆ ನಡೆಯಲಿದೆ. ಈ ವೇಳೆ ಕುಂಭ ಮೇಳದಲ್ಲಿ ಭಾಗಿಯಾದವರು ತಮ್ಮ ಅನುಭವವನ್ನ ಹಂಚಿಕೊಳ್ಳಲಿದ್ದಾರೆ ಎಂದರು. 


ಸುದ್ದಿಗೋಷ್ಠಿಯಲ್ಲಿ ಹಿಂದೂ ಜಾಗರಣ ವೇದಿಕೆಯ ನಾರಾಯಣ್ ವರ್ಣೇಕರ್, ಕುಮಾರ ಸ್ವಾಮಿ, ಜಿತೇಂದ್ರ ಗೌಡ, ಉಪಾಧ್ಯಕ್ಷ ನಟರಾಜ್, ಬಜರಂಗದಳದ ಅಂಕುಶ್ ಉಪಸ್ಥಿತರಿದ್ದರು. ‌

Post a Comment

Previous Post Next Post