ಶಿವಮೊಗ್ಗ ಜಿಲ್ಲೆಯಲ್ಲಿ ನ್ಯಾಯ ಬೆಲೆ ಅಂಗಡಿಗಳಿಂದ ಸರಿಯಾದ ವೇಳೆಯಲ್ಲಿ ಪಡಿತರ ಪದಾರ್ಥಗಳನ್ನು ನೀಡದೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಕನ್ನಡ ಕಾರ್ಮಿಕ ರಕ್ಷಣ ವೇದಿಕೆ ಇಂದು ಜಿಲ್ಲಾಧಿಕಾರಿಯ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸಲ್ಲಿಸಿದೆ.
ಪಡಿತರ ಅಂಗಡಿ ಮಾಲೀಕರು ಪಡಿತರ ಚೀಟಿದಾರರಿಗೆ ಸರಿಯಾದ ಪಡಿತರ ವಿತರಿಸುತ್ತಿಲ್ಲ. ಒಂದು ದಿನ ಬಂದು ಬಯೋಮೆಟ್ರಿಕ್ ನೀಡಬೇಕು ಹಾಗೂ ನಾವು ಹೇಳಿದ ದಿನ ಬಂದು ಪದಾರ್ಥ ತೆಗೆದುಕೊಂಡು ಹೊಗಬೇಕೆಂದು ಶರತ್ತು ವಿಧಿಸುತ್ತಾರೆ. ಬಯೋಮೆಟ್ರಿಕ್ ಉಚಿತವಾಗಿ ನೀಡಬೇಕೆಂದು ಕಾನೂನು ಇದ್ದರು ರೂ.10 ಶುಲ್ಕ ಅಕ್ರಮವಾಗಿ ಕಾರ್ಡ್ ದಾರರಿಂದ ವಸೂಲು ಮಾಡುತ್ತಾರೆ.ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ನೀಡಬೇಕೆಂಬ ಆದೇಶವಿದ್ದರು ನಿಗದಿ ಸೂಚನ ಫಲಕ ಹಾಕಿರುವುದಿಲ್ಲ. ಅವರು ತಿಳಿದ ದಿನಾಂಕದಲ್ಲಿ ನ್ಯಾಯ ಬೆಲೆ ಅಂಗಡಿ ತೆಗೆದಿರುವುದಿಲ್ಲ. ಸರ್ಕಾರದಿಂದ ನೀಡಿದ ಅಕ್ಕಿಯನ್ನು ಕೆಜಿ ಗೆ ರೂ.15 ಕ್ಕೆ ಅಕ್ರಮ ದಾಸ್ತಾನು ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಾರೆ. ಆದರೂ ಪಡಿತರ ಆಹಾರ ಸರಬರಾಜು ಇಲಾಖೆಯು ನ್ಯಾಯ ಬೆಲೆ ಅಂಗಡಿಯ.ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೆ ಈ ಅಕ್ರಮಗಳನ್ನು ತಡೆಗಟ್ಟಿ ನ್ಯಾಯ ಬೆಲೆ ಅಂಗಡಿಯವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಡಿಸಿ ಬಾಗಿಲಲ್ಲಿ ಧರಣಿ ಸತ್ಯಾಗ್ರಹದ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷರಾದ ವಾಟಳ್ ಮಂಜುನಾಥ್, ಪ್ರಮುಖರಾದ ನಿತೀನ್, ರವಿ, ಬಾಷಾ, ಲೋಕೇಶ್, ಮಾರುತಿ , ಸತೀಶ್ ಗೌಡ, ರಾಘವೇಂದ್ರ ಪ್ರಾಕ್ಲಿನ್ ಸೊಲೆಮಾನ್ ಇತತರು ಇದ್ದರು.
Post a Comment