ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಜ್ಞಾನ ಸಂಗಮ ಬೆಳಗಾವಿ ಅವರ ಸಂಯುಕ್ತಾಶ್ರಯದಲ್ಲಿ ಮಾ.15 ರಿಂದ ಮಾ.18 ರ ವರೆಗೆ ಸಧೃಢ 2.0 ಎಂಬ ಹೆಸರಿನ ಅಡಿ 26 ನೇ ರಾಜ್ಯ ಮಟ್ಟದ ಅಂತರ ಮಹಾವಿದ್ಯಾಲಯ ಅಥ್ಲೆಟಿಕ್ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಎಇಎಸ್ ನ ಅಧ್ಯಕ್ಷ ಜಿ.ಎಸ್ ನಾರಾಯಣ ರಾವ್ ಜವಾಹಾರ್ ಲಾಲ್ ನೆಹರೂ ನ್ಯೂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಈ ಕ್ರೀಡೆಗಳು ನಡೆಯಲಿದ್ದು 44 ಕ್ರೀಡೆಗಳು ನಡೆಯಲಿದೆ.
150 ಕಾಲೇಜುಗಳು ಭಾಗಿಯಾಗಲಿದ್ದು 1500 ಕ್ರೀಡಾಪಟು ಭಾಗಿಯಾಗಲಿವೆ. ಜೆಎನ್ ಎನ್ ಸಿಇ ಯಿಂದ 24 ಜನ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಉಪಕುಲಪತಿಗಳಾದ ಡಾ.ವಿದ್ಯಾಶಂಕರ್ ಕಾರ್ಯಕ್ರಮವನ್ನ ಉದ್ಘಾಟಿಸಲಿದ್ದಾರೆ. ಅರ್ಜುನ ಪ್ರಶಸ್ತಿ ವಿಜೇತ ಎಸ್ ಡಿ ಈಶನ್ ಗೌರವ ಅತಿಥಿಗಳಾಗಿ ಆಗಮಿಸಿದ್ದರು.
ಮಾ. 18 ರಂದು ಸಮಾರೋಪಸಮಾರಂಭ ನಡೆಯಲಿದ್ದು ಬೆಳಗಾವಿ ವಿತಾವಿಯ ಕುಲಸಚಿವ ಡಾ.ಟಿ.ಎನ್ ಶ್ರೀನಿವಾಸ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಹಣಕಾಸು ಅಧಿಕಾರಿಗಳಾದ ಡಾ.ಪ್ರಶಾಂತ್ ಗೌರವ ಅಥಿತಿಗಳಾಗಿ ಆಗಮಿಸಲಿದ್ದಾರೆ ಎಂದು ಸತ್ಯನಾರಾಯಣ್ ತಿಳಿಸಿದರು.
43 ಲಕ್ಷ ರೂ. ವಿತಾವಿಯಿಂದ ಲಭ್ಯವಾಗಿದ್ದು, ಜೆಎನ್ ಎಸ್ ಸಿಇ ಕಾಲೇಜಿನಿಂದ 13 ಲಕ್ಷ ರೂ. ವ್ಯಯಮಾಡಲಾಗುತ್ತಿದೆ.
Post a Comment