ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್, ಜಿಲ್ಲಾ ಸಮಿತಿ, ಶಿವಮೊಗ್ಗ ತಾಲೂಕು ಸಮಿತಿ, ಸಾಗರ, ಆನಂದಪುರದ ಹೋಬಳಿ ಸಮಿತಿ, ಚೆನ್ನಮ್ಮಾಜಿ ಜಾನಪದ ಕಲಾ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ 6 ನೇ ಜಾನಪದ ಸಮ್ಮೇಳನ ನಡೆಯಲಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಕಸಾಪ ಅಧ್ಯಕ್ಷ ಡಿ ಮಂಜುನಾಥ್, ಸಾಗರದ ಹೊಸೂರು ಗ್ರಾಮದ ಚೆನ್ನಶೆಟ್ಟಿಕೊಪ್ಪದಲ್ಲಿ ಮಾ.09 ರಂದು ನಡೆಯಲಿದೆ. ಬೆಳಿಗ್ಗೆ 9-30 ಕ್ಕೆ ಸಮ್ಮೇಳನಧ್ಯಕ್ಷರೊಂದಿಗೆ ಜಾನಪದ ನಡಿಗೆಯೊಂದಿಗೆ ಕಾರ್ಯಕ್ರಮ ನಡೆಯಲಿದೆ ಎಂದರು.
ಬೆಳಿಗ್ಗೆ 10-30 ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಮಾಜಿ ಸಭಾಪತಿ ಕಾಗೋಡು ತಿಮ್ಮಪ್ಪನವರಿಗೆ ಸನ್ಮಾನ ನಡೆಯಲಿದೆ. ಸಚಿವ ಮಧು ಬಂಗಾರಪ್ಪ ಹಿರಿಯಕಲಾವಿಧರಿಗೆ ಸನ್ಮಾನಿಸಲಿದ್ದಾರೆ. ಜಾನಪದ ಅಕಾಡೆಮಿಯ ಟಾಕಪ್ಪ ಕಣ್ಣೂರು ಸಮ್ಮೇಳನಾಧ್ಯಕ್ಷರಾಗಿರಲಿದ್ದಾರೆ ಎಂದರು.
31 ಕಲಾತಂಡದಿಂದ ಕಲಾಪ್ರದರ್ಶನಕ್ಕೆ ಅವಕಾಶ ಕಲಗಪಿಸಲಾಗಿದೆ. ಸಂಜೆ ಜಾನಪದ ಸಮ್ಮೇಳನದ ಸಮಾರೋಪ ಸಂಅರಂಭ ನಡೆಯಲಿದೆ ಎಂದರು.
Post a Comment