ಬಜೆಟ್ ಅಧಿವೇಶನದಲ್ಲಿ ಶಿವಮೊಗ್ಗಕ್ಕೆ ಹೆಚ್ಚಿನ ಅನುದಾನಗಳು ಘೋಷಣೆಯಾಗದಿದ್ದರೂ ಹಳೆ ಯೋಜನೆಗಳಿಗೆ ಚಾಲನೆ ದೊರೆತಿದೆ. ಸಿಎಂ ಸಿದ್ದರಾಮಯ್ಯ ಅವರ 16 ನೇ ಬಜೆಟ್ ನಲ್ಪಿ ಶಿವಮೊಗ್ಗ ಜಿಲ್ಲೆಗೆ ಈ ರೀತಿಯ ಅನುಮೋದನೆ ದೊರೆತಿದೆ.
ಸಾಗರದ ಒಳಚರಂಡಿ ಯೋಜನೆಗೆ ಅನುದಾನಕ್ಕೆ ಮನ್ನಣೆ ದೊರೆತಿದೆ, ಶಿಕಾರಿಪುರ ರಾಣೇಬೆನ್ನೂರು ರೈಲು ಮಾರ್ಗ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಲಾಗಿದೆ. ಕೆಎಫ್ ಡಿ ಹಾಗೂ ಇತರೆ ರೋಗಗಳಿಗೆ 50 ಕೋಟಿ ಮೀಸಲಿರಸಲಾಗಿದೆ.
ಕರಾವಳಿ, ಮಲೆನಾಡು ಬಯಲುಸೀಮೆ ಅಭಿವೃದ್ಧಿ ಪ್ರಾಧಿಕಾರ ಎಂಎಡಿಬಿಗೆ 80 ಕೋಟಿ ರೂ ಅನುದಾನ ಇರಿಸಲಾಗಿದೆ. ಈ ಕುರಿತು ಮಾತನಾಡಿದ ಎಂಎಡಿಬಿ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ ಕಳೆದ ಬಾರಿ 35 ಕೋಟಿ ರೂ. ಬಿಡುಗಡೆಯಾಗಿತ್ತು. ಈ ಬಾರಿ ರಾಜ್ಯ ಸರ್ಕಾರ 80 ಕೋಟಿ ಅನುದಾನ ನೀಡಿದೆ. ಸಂತೋಷವಾಗಿದೆ ಎಂದರು.
ಶಿವಮೊಗ್ಗ ಹಾಗೂ ಮಲೆನಾಡಿನಲ್ಲಿ ಭೂಕುಸಿತ ತಡೆಗೆ 200 ಕೋಟಿ ಅನುದಾನ ಬಿಡುಗಡೆಗೆ ಬಜೆಟ್ ಅನುಮೋದಿಸಿದೆ. ಸೊರಬ ತಾಲ್ಲೂಕಿನ ಚಂದ್ರಗುತ್ತಿ ಗ್ರಾಮವನ್ನು ಧಾರ್ಮಿಕ ಹಾಗೂ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಲು ಚಂದ್ರಗುತ್ತಿ ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡುವ ಭರವಸೆ ದೊರೆತಿದೆ.
ಮಲೆನಾಡು ಜಿಲ್ಲೆಗಳಲ್ಲಿ ಎಲೆ ಚುಕ್ಕೆ ರೋಗದ ಬಾಧೆಗೆ ತುತ್ತಾಗಿ 2 ಲಕ್ಷಕ್ಕಿಂತ ಅಧಿಕ ಅಡಿಕೆ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಈ ರೋಗ ನಿಯಂತ್ರಿಸಲು ಸಸ್ಯ ಸಂರಕ್ಷಣಾ ಕ್ರಮಗಳಿಗಾಗಿ 62 ಕೋಟಿ ರೂ. ಒದಗಿಸಲಾಗಿದೆ.
Post a Comment