during the Birthday celebration of K.E.Kanthesh-ಕಾಂತೇಶ್ ಹುಟ್ಟುಹಬ್ಬದ ಅಂಗವಾಗಿ ಹಲವು ಕ್ರೀಡೆಗಳು


 ರಾಷ್ಟ್ರಭಕ್ತರ ಬಳಗದ ಸಂಸ್ಥಾಪ ಕೆಎಸ್ ಈಶ್ವರಪ್ಪ ಅವರ ಪುತ್ರ ಕೆ.ಈ.ಕಾಂತೇಶ್ ಅವರ 45 ನೇ ಹುಟ್ಟು ಹಬ್ಬದ ಅಂಗವಾಗಿ ಅವರ ಸ್ನೇಹ ಬಳಗ ಸಂಭ್ರಮವಾಗಿ ಆಚರಿಸಲು ತೀರ್ಮಾನಿಸಿದೆ. ಯುವೋತ್ಸವವನ್ನ ಹಮ್ಮಿಕೊಂಡಿದೆ. 


ಈ ಕುರಿತು ಸುದ್ದಿಗೋಷ್ಠಿ ನಡೆಸಿದ ರಾಷ್ಟ್ರ ಭಕ್ತರ ಬಳಗದ ವಿಶ್ವಾಸ್, ಮಾ. 21,22 ಮತ್ತು 23 ನಡೆಯಲಿದೆ. ಎನ್ ಇ ಎಸ್ ಗ್ರೌಂಡ್, ನೆಹರೂ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. 


ಜಿಲ್ಲಾ ಮಟ್ಟದ ಕಬಡ್ಡಿ ಮತ್ತು ಮಾ.22 ರಂದು ಥ್ರೋಬಾಲ್ ನ್ನ ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿದೆ. ಎನ್ ಇಎಸ್ ನಲ್ಲಿ ಮಾ. 22 ಮತ್ತು 23 ರಂದು ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. 


90 ವರ್ಷದ ದಂಪತಿಗಳಿಗೆ ಶುಭಮಂಗಳದಲ್ಲಿ ಸನ್ಮಾನಿಸಲಾಗುತ್ತಿದೆ. ಚಿತ್ರದುರ್ಗದ ಮಾದರ ಚೆನ್ನಯ್ಯ, ಶೃಂಗೇರಿ ಮಠದ ಶ್ರೀಗಳು, ಈಶ್ವರಾನಂದ ಶ್ರೀಗಳು, ಸಾಯಿನಾಥ ಶ್ರೀಗಳು, ಜಡೆಯ ಮಹಾಂತ ಮಹಾಸ್ವಾಮಿಗಳು, ಬ್ರಹ್ಮಕುನಾರಿ ಅನುಸೂಯಮ್ಮ‌. ಹಲವಾರು ಗಣ್ಯರು ಈ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.


ಹಾಸ್ಯ ನಟ ಶರಣ್ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಕಬಡಿ ಮತ್ತು ಥ್ರೋಬಾಲ್ ಆಡುವ ಕ್ರೀಡಾಪಟುಗಳು ಐಡಿ ತರುವುದು ಕಡ್ಡಾಯಚಾಗಿದೆ. ವಸತಿ ನತ್ತು ಊಟದ ವ್ಯಚಸ್ಥೆ ಮಾಡಲಾಗಿದೆ. ಕಬಡಿ ಪಂದ್ಯಾವಳಿಯಲ್ಲಿ ಭಾಗಿಯಾಗುವವರಿಗೆ ರವೀಂದ್ರ 9986474525 ಸಂಪರ್ಕಿಸಬಹುದಾಗಿದೆ. ಥ್ರೋಬಾಲ್ ಮಠಪತಿ 9945474104, ಕ್ರಿಕೆಟ್ ಗೆ 9008874827 ಸಂಪರ್ಕಿಸಬಹುದು. ಶಶಿ 9880385776 ಇವರನ್ನ ಸಂಪರ್ಕಿಸಬಹುದು. 

Post a Comment

Previous Post Next Post