ಹೋಳಿ ಹುಣ್ಣಿಮೆಯಂದು ದುರ್ಗಿಗುಡಿ ದುರ್ಗಮ್ಮನ ಮತ್ತು ಮರಿಯಮ್ಮನ ತೇರು ಎಳೆಯಲಾಗಿದೆ. ಹೃದಯ ಭಾಗದ ದುರ್ಗಿಗುಡಿಯಲ್ಲಿ ಶುಕ್ರವಾರ ಸಮಸ್ತ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತ್ತಿದೆ.
ದುರ್ಗಪರಮೇಶ್ವರಿ ಸೇವಾ ಸಮಿತಿ ನೇತೃತ್ವದಲ್ಲಿ ಭಕ್ತರು ತೇರನ್ನು ಎಳೆಯಲಾಗಿದೆ. ಶಿವಮೊಗ್ಗ ಮಾತ್ರವಲ್ಲದೆ ಸುತ್ತಮುತ್ತಲ ಗ್ರಾಮಗಳಿಂದಲೂ ಭಕ್ತರು ರಥೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
ಹೋಳಿ ಹುಣ್ಣಿಮೆಯಂದು ನಡೆಯುವ ರಥೋತ್ಸವಕ್ಕೆ ಹಲವು ವರ್ಷಗಳ ಇತಿಹಾಸವಿದೆ. ತೇರು ಎಳೆಯಲು ವಿವಿಧ ಭಾಗಗಳ ಭಕ್ತರು ಆಗಮಿಸಿದ್ದರು. ದುರ್ಗಿಗುಡಿಯಲ್ಲಿ ತೇರನೆಳೆದು ನಂತರ ದೇವಿಯ ಗುಡಿ ಎದುರು ನಿಲ್ಲಿಸಿದ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು.
ದೇಶಾದ್ಯಂತ ಹೋಳಿ ಹುಣ್ಣಿಮೆಯಂದು ಹೋಳಿ ಆಚರಿಸಿದರೆ ಶಿವಮೊಗ್ಗದಲ್ಲಿ ದುರ್ಗಿಗುಡಿಯ ದುರ್ಗಮ್ಮ ದೇವರ ತೇರು ಎಳೆದ ಮರುದಿನ ಹೋಳಿ ಆಚರಿಸುವುದು ಸಂಪ್ರದಾಯ. ಹಾಗಾಗಿ ಶಿವಮೊಗ್ಗದಲ್ಲಿ ಶನಿವಾರ ಹೋಳಿ ಆಚರಣೆ ನಡೆಯಲಿದೆ. ಮಧ್ಯಹ್ನ 2-30 ಕ್ಕೆ ದೇವಿಯ ತೇರು ಎಳೆಯುವ ಸಾಧ್ಯತೆಯಿದೆ. ಶುಭಂ ಹೋಟೆಲ್ ಬಳಿ ದೇವಿಗಳಿಗೆ ಪೂಜೆಗೆ ತೆರಳಲಾಗುತ್ತಿದೆ.
Post a Comment