ರಾಜ್ಯದ ಪ್ರತಿಷ್ಠಿತ ವಿಶ್ವಾವಿದ್ಯಾಲಯಗಳಲ್ಲಿ ಒಂದಾದ ಕುವೆಂಪು ವಿಶ್ವವಿದ್ಯಾಲಯ 36ವರ್ಷ ಇತಿಹಾಸ ಹೊಂದಿದೆ, 10500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಚಾರ ಮತ್ತು ಅಸಮರ್ಪಕ ಆಡಳಿತದ ಕುರಿತು ಸರ್ಕಾರ, ಉನ್ನತ ಮಟ್ಟದ ತನಿಖೆ ನಡೆಸಿ ಭ್ರಷ್ಟಚಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮಂಗಳವಾರ ವಿಧಾನಪರಿಷತ್ ನಲ್ಲಿ ನಡೆದ ಅಧಿವೇಶನದಲ್ಲಿ ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಅವರ ಮೂಲಕ ಸರ್ಕಾರವನ್ನು ಆಗ್ರಹಿಸಿದರು.
ಕುವೆಂಪು ವಿ.ವಿಯಲ್ಲಿನ ಭ್ರಷ್ಟಾಚಾರ ಹಾಗೂ ದಕ್ಷ ಅಡಳಿತ ನಡೆಸುವಲ್ಲಿ ವಿಫಲವಾಗಿರುವ ಕುಲಸಚಿವರ ವಿರುದ್ಧ ಇತ್ತೀಚಿಗೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಸಮಗ್ರ ತನಿಖೆಗೆ ಆಗ್ರಹಿಸಿವೆ. ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗಿರುವುದು ವಿಶ್ವವಿದ್ಯಾಲಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸುತ್ತದೆ. ದೇಶದ ಮುಂದಿನ ಭವಿಷ್ಯವಾಗಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕನ್ನು ರೂಪಿಸುವ ಮಹತ್ತರ ಜವಬ್ದಾರಿ ನಿರ್ವಹಿಸಬೇಕಾದ ವಿಶ್ವವಿದ್ಯಾಲಯ ಏಕರೂಪದ ವೇಳಾಪಟ್ಟಿ ಅನುಸರಿಸುವಲ್ಲಿ ಲೋಪ, ವಿ.ವಿ.ಯ ಪ್ರಸಾರಾಂಗದಲ್ಲಿ ಲಕ್ಷಾಂತರ ರೂಪಾಯಿಗಳ ಅವ್ಯವಹಾರ ಆಗಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. ವಿ.ವಿ ಯ ದೂರ ಶಿಕ್ಷಣ ಪ್ರವೇಶಾತಿ ಮತ್ತು ವ್ಯಾಸಂಗದ ಇನ್ನಿತರ ನಿರ್ವಹಣೆಗಳನ್ನು ಎಲ್.ಎಂ.ಎಸ್ ಮುಖಾಂತರ ನಡೆಸಲು ಬೆಂಗಳೂರಿನ Pheme Software Limited ಕಂಪನಿಯೊಂದಿಗೆ ಮಾಡಿಕೊಂಡಿರುವ ಒಪ್ಪಂದ, ದರ ನಿರ್ಣಯಗಳಲ್ಲಿನ ತಪ್ಪುಗಳಿಂದಾಗಿ ವಿ.ವಿ.ಗೆ ಲಕ್ಷಾಂತರ ರೂಪಾಯಿಗಳ ನಷ್ಟವಾಗಿರುವುದಾಗಿ ಪ್ರತಿಭಟನಕಾರರು ದೂರಿರುತ್ತಾರೆ ಎಂದು ಹೇಳಿದರು.
ಆಶ್ಚರ್ಯದ ವಿಷಯವೇನೆಂದರೇ ಸದರಿ ಸಂಸ್ಥೆಯವರು ಈ ಹಿಂದೆ ಅಧ್ಯಯನ ಕೇಂದ್ರ ತೆರೆದು ಆ ಮೂಲಕ ವಿದ್ಯಾರ್ಥಿಗಳಿಂದ ಪಡೆಯಲಾಗಿದ್ದ ಶುಲ್ಕಗಳನ್ನು ವಿಶ್ವವಿದ್ಯಾಲಯಕೆ ಪಾವತಿಸದೆ ಕೋಟ್ಯಾಂತರ ಶುಲ್ಕವನ್ನು ಬಾಕಿ ಉಳಿಸಿಕೊಂಡಿದ್ದು, ಸದರಿ ಸಂಸ್ಥೆಯು ವಿಶ್ವಾವಿದ್ಯಾಲಯಕ್ಕೆ ನೀಡಿದ 30 ಲಕ್ಷದ ಚೆಕ್ ಬೌನ್ಸ್ ಆಗಿ ಪ್ರಕರಣ ನ್ಯಾಯಲಯದಲ್ಲಿ ಇದು, ಇಂತಹ ಸಂಸ್ಥೆಯೊಂದಿಗೆ ಮತ್ತೊಮ್ಮೆ ವ್ಯವಹರಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕುವೆಂಪು ವಿಶ್ವಾವಿದ್ಯಾಲಯದವು ದೂರಶಿಕ್ಷಣ ವ್ಯಾಸಂಗ ಮಾಡಲು ಪ್ರವೇಶಾತಿಯನ್ನು ಎಲ್.ಎಂ.ಎಸ್ ಮುಖಾಂತರ ನಡೆಸಲು Pheme Software Limited, Bangalore ಸಂಸ್ಥೆಯೊಂದಿಗೆ ಹಲವು ಆಕ್ಷೇಪಣೆಗಳನ್ನು ಬದಿಗೊತ್ತಿ ಕೆ.ಟಿ.ಟಿ.ಪಿ ಕಾಯ್ದೆಯನ್ನು ಉಲ್ಲಂಘನೆ ಮಾಡಿ ಒಪ್ಪಂದ ಮಾಡಿಕೊಂಡಿರುವುದು ವಿಶ್ವಾವಿದ್ಯಾಲಯಕ್ಕೆ ಕೋಟ್ಯಾಂತರ ರೂಪಾಯಿಗಳ ನಷ್ಟವನ್ನು ಉಂಟುಮಾಡಿದೆ ಮತ್ತು ಇದರಲ್ಲಿ ಭ್ರಷ್ಟಚಾರವಾಗಿರುವದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು ಸೂಕ್ತ ತನಿಖೆ ನಡೆಸುವಂತೆ ಹೇಳಿದರು.
Post a Comment