ನಗರ ಪ್ರದೇಶದ ಅನಧಿಕೃತ ಮನೆಗಳಿಗೆ ಹಕ್ಕುಪತ್ರ ಕೊಡುವಂತೆ ಆಗ್ರಹ-Demand to issue title deeds

 

ಸ್ಥಳೀಯ ಸಂಸ್ಥೆಗಳಾದ ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ವ್ಯಾಪ್ತಗಳಲ್ಲಿ ಬಹಳ ವರ್ಷಗಳಿಂದ ಮನೆಕಟ್ಟಿಕೊಂಡು ಇರುವರಿಗೆ ಖಾತೆ ಇದ್ದರೂ ಹಕ್ಕು ಪತ್ರಗಳು ಇಲ್ಲದಂತಾಗಿದ್ದು ಅವತಿಗೆ ಹಕ್ಕುಪತ್ರಗಳನ್ನ ನೀಡುವಂತೆ ಆಗ್ರಹಿಸಲಾಗಿದೆ.


ಈ ಕುರಿತು ಸುದ್ದಿಗೋಷ್ಠಿ ನಡೆಸಿದ ನಗರ ಸಭೆ ಮಾಜಿ ಸದಸ್ಯ ಶ್ಯಾಮ್ ಸುಂದರ್, ಸಾಗರದ ಪುರಸಭೆ ಮಾಜಿ ಅಧ್ಯಕ್ಷರಾದ ತೀ.ನಾಶ್ರೀನಿವಾಸ್ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿಎಉವ ಸರ್ಕಾರಿ ಜಾಗದಲ್ಲಿರುವವರಿಗೆ 94 ಸಿಸಿ ಅನ್ವಯ ಹಕ್ಕುಪತ್ರ ನೀಡಬೇಕು ಎಂದರು. 


ನಗರ ವ್ಯಾಪ್ತಿಯ ನಿವಾಸಿಗಳಿಗೆ ಮೂಲಸೌಕರ್ಯ ನೀಡಬೇಕು. ಈ ಬಗ್ಗೆ ಸಿಎಂಗೆ ಸಚಿವರಿಗೆ ಮನವಿ ಸಲ್ಲಿಸಲಾಗುವುದು. ಇದು ಕಾನೂನು ಬಾಹಿರವಲ್ಲ. ಇದೊಂದು ಹಕ್ಕು. ಇದರಿಂದ ಸರ್ಕಾರಕ್ಕೆ ಆದಾಯವೂ ಹೆಚ್ಚಲಿದೆ ಎಂದರು. 


ಎಸ್ ಎಂ ಕೃಷ್ಣ ಸಿಎಂ ಆಗಿದ್ದಾಗ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಅನಧಿಕೃತ ಮನೆಗಳಿಗೆ ಹಕ್ಕುಪತ್ರ ನೀಡಲಾಗಿತ್ತು. ಪಾಲಿಕೆ ವ್ಯಾಪ್ತಿಯಲ್ಲಿ ಇದನ್ನ ಒಪ್ಪುತ್ತಿಲ್ಲ. ಬೇಡಿಕೆ ಈಡೇರದಿದ್ದರೆ ಪ್ರತಿಭಟನೆ ನಡೆಸಲಾಗುವುದು. 


ಕೇರಳದಲ್ಲಿ 7 ಲಕ್ಷ ಹಣ ಮನೆಗೆ ನೀಡಲಾಗುತ್ತದೆ. ಆದರೆ ರಾಜ್ಯದಲ್ಲಿ ಎರಡೂ ಸರ್ಕಾರದ ವತಿಯಿಂದ 1½ ಲಕ್ಷ ರೂ. ನೀಡಲಾಗುತ್ತದೆ. ಯಾವುದೇ ಸಂಸದರು ಮತ್ತು ಶಾಸಕರು 1½ ಲಕ್ಷ ರೂನಲ್ಲಿ‌ಮನೆಕಟ್ಟಿಸಿಕೊಡಲಿ ಎಂದು ಸವಾಲು ಹಾಕಿದರು. 


ಎ ಖಾತ ಬಿ ಖಾತ ಗಳಿಗೆ ಇ-ಸ್ವತ್ತು ಪಡೆಯಲು ಅವಕಾಶ ನೀಡಲಾಗಿದೆ. ಆದರೆ ಬಿ ಖಾತಾದಲ್ಲಿ ಬ್ಯಾಂಕ್ ಸಾಲ ಪಡೆಯಲು ಸಾಧ್ಯವಿಲ್ಲವೆಂಬ ಸಮಸ್ಯೆ ಹೆಚ್ಚಾಗಿದೆ. ಇದನ್ನ ಡಿಸಿ ಜೊತೆ ಮಾತನಾಡಲಾಗುವುದು. ಈ ಹಿಂದೆ ಅಕ್ರಮ ಸಕ್ರಮ ಕಾಯ್ದೆಗೆ ಪರಿಹಾರವಾಗಿ ಈ ಖಾತೆ ಪಡೆಯಲು ಅವಕಾಶವಿದೆ ಎಂದರು


ನಗರ ಪ್ರದೇಶದ ಅನಧಿಕೃತ ಮನೆಗಳಿಗೆ ಹಕ್ಕುಪತ್ರ ಕೊಡುವಂತೆ ಆಗ್ರಹ-Demand to issue title deeds 

Post a Comment

Previous Post Next Post