ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಅವರನ್ನ ಮನೆಗೆ ತಲುಪಿ ಗೌರವಿಸಲಾಗಿದೆ.
ಇಂದು ಬೆಳಿಗ್ಗೆ ಟಲ್ ಬಿಹಾರಿ ವಾಜಪೇಯಿ ಜನ್ಮ ಶತಮಾನದ ರಾಜ್ಯ ಸಮಿತಿಯ ಪ್ರಮುಖರಾದ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯರಾದ ಶ್ರೀ ಡಾ. ಶಿವಯೋಗಿ ಸ್ವಾಮಿ ಯವರು ವಾಜಪೇಯಿಯವರ ಬಗ್ಗೆ ಅವರೊಂದಿಗೆ ಸಂಪರ್ಕ ಹೊಂದ್ದಿದ್ದ ಮಾಜಿ ಸಭಾಪತಿಗಳಾದ ಶ್ರೀ ಡಿ. ಹೆಚ್. ಶಂಕರ್ ಮೂರ್ತಿ ಯಾವರೊಂದಿಗೆ ಸಂಧರ್ಶನ ಮಾಡಿದರು.
ಅವರೊಂದಿಗೆ ಸಮಿತಿಯ ಶಿವಮೊಗ್ಗ ಜಿಲ್ಲಾ ಪ್ರಭಾರಿಯವರು ಹಾಗೂ ರಾಜ್ಯ ಕಾರ್ಯದರ್ಶಿ ಯಾದ ಶ್ರೀಮತಿ ಲಷ್ಮಿ ಅಶ್ವಿನ್ ಗೌಡ ರವರು, ರಾಜ್ಯ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯರಾದ ಶ್ರೀ ಡಿ. ಎಸ್. ಅರುಣ್ ರವರು, ಶಾಸಕರಾದ ಎಸ್. ಎನ್. ಚನ್ನಬಸಪ್ಪ ರವರು, ವಿಧಾನ ಪರಿಷತ್ ಸದಸ್ಯರಾದ ಎಂಎಲ್ ಸಿ ಡಾ. ಧನಂಜಯ ಸರ್ಜಿ, ಬಿಜೆಪಿಜಿಲ್ಲಾ ಅಧ್ಯಕ್ಷರಾದ ಶ್ರೀ ಎನ್ ಕೆ ಜಗದೀಶರವರು ಉಪಸ್ಥಿತರಿರುತ್ತಾರೆ.
Post a Comment