ಆರ್ ಆಂಜನೇಯ ಸಳಂಕಿ ಅವರಿಗೆ ಬೆಂಗಳೂರು ಸಂಸ್ಥೆಯೊಂದು ಪ್ರಶಸ್ತಿ ನೀಡಿ ಗೌರವಿಸಿದೆ. ಶಿವಮೊಗ್ಗದ ಆಂಜನೇಯ ಸಳಂಕಿ ಸೇರಿದಂತೆ ಐವರಿಗೆ ಸನ್ಮಾನಿಸಿ ಗೌರವಿಸಲಾಗಿದೆ. ಆಂಜನೇಯರವರಿಗೆ ಡಾ.ಎಸ್ ನಾರಾಯಣ ರಾಜ್ಯ ಪ್ರಶಸ್ತಿ ಲಭಿಸಿದೆ.
ಸಳಂಕಿ ಅವರು 1986ರಲ್ಲಿ ಶಿವಮೊಗ್ಗದಲ್ಲಿ ಜನಮಿಸಿದ ಅವರ ಪೋಷಕರು ತಂದೆ ದಿವಂಗತ ಶ್ರೀ ರಾಮದಾಸ್ ಮತ್ತು ತಾಯಿ ರೂಪಮ್ಮ ಆಗಿದ್ದಾರೆ. ಅವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸರ್ದಾರ್ ವಲ್ಲಭಾಯಿ ಪಟೇಲ್ ಪ್ರೌಢಶಾಲೆಯಲ್ಲಿ ಪೂರೈಸಿದ್ದಾರೆ. ಘೀಸಡಿ ಬುಡಕಟ್ಟು ಕಮ್ಮಾರ ಜನಾಂಗಕ್ಕೆ ಸೇರಿದ ಇವರು, ಅವರ ಅಜ್ಜ, ತಂದೆ ಹಾಗೂ ಕುಟುಂಬದ ಎಲ್ಲ ಸದಸ್ಯರು ಕುಲುಮೆ ಕಾರ್ಮಿಕರಾಗಿದ್ದರು.
ತಮ್ಮ ಜನಾಂಗದ ಅಭಿವೃದ್ಧಿಗೆ ಮತ್ತು ಸಮುದಾಯಕ್ಕೆ ಕೊಡುಗೆ ನೀಡಲು ಇವರು ಸಂಘ-ಸಂಸ್ಥೆಗಳ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಾಜವನ್ನು /ಎಸ್‌ಟಿ ಸಮುದಾಯಕ್ಕೆ ಸೇರಿಸಬೇಕೆಂಬ ಹೋರಾಟವನ್ನು ಅವರು ನಿರಂತರವಾಗಿ ನಡೆಸುತ್ತಿದ್ದಾರೆ.
ಇವರು AI Kannada Varta" ಎಂಬ ಯೂಟ್ಯೂಬ್ ಚಾನೆಲ್ ಸ್ಥಾಪಿಸಿದ್ದು, ಈ ಚಾನೆಲ್‌ನಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಪ್ರಸಾರ ಮಾಡುತ್ತಿದ್ದಾರೆ. ಸಂಪಾದಕರಾಗಿ ಅತ್ಯುತ್ತಮ ಸಾಧನೆ ಮಾಡಿದ ಆಂಜನೇಯ ಸಳಂಕಿಗೆ ಈ ಪ್ರಶಸ್ತಿ ಲಭ್ಯವಾಗಿದೆ.
ಮಹಾರಾಣಾ ಪ್ರತಾಪ್ ಅವರ ಹುಟ್ಟುಹಬ್ಬವನ್ನು ಪ್ರತಿವರ್ಷ ಶಿವಮೊಗ್ಗ ನಗರದಲ್ಲಿ ವಿಜೃಂಭಣೆಯಿಂದ ಆಚರಿಸುವ ಮೂಲಕ ಜನಮನ ಸೆಳೆದಿರುವ ಆಂಜನೇಯರವರು ರಾಜ್ಯ ಘಿಸಾಡಿ ಕುಲುಮೆ ಕಾರ್ಮಿಕರ ಕಮ್ಮಾರ್ ಸಂಘದಲ್ಲಿದ್ದಾರೆ. ಕಮ್ಮಾರ ಬುಡಕಟ್ಟು ಸಮುದಾಯದ ಆಂಜನೇಯರವರು ಮೀಸಲಾತಿ ನೀಡಬೇಕೆಂದು ಇವರು ಅಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಇವರಜೊತೆ ಅರಣ್ಯ ರಕ್ಷಕ ರಾಜ್ಯ ಪ್ರಶಸ್ತಿಯನ್ನ ಶಿವಮೊಗ್ಗದ ರಾಮಚಂದ್ರ ಹೆಚ್ ರಾವಜಿ, ಸಮಾಜ ಶ್ರೀ ರಾಜ್ಯ ಪ್ರಶಸ್ತಿಯನ್ನ ದೇವರಗುಡ್ಡದ ರಾಜಕುಮಾರ್ ಕನ್ನಪ್ಪ ಬಾತಿ, ಶಿವಮೊಗ್ಗದ ಅಬ್ದುಲ್ ರಜಾಕ್, ಹಾವೇರಿಯ ಗೀತಾ.ವಿ, ಬಾಲ ಪುರಸ್ಕಾರ ಪ್ರಶಸ್ತಿಯು ಋತು ಸ್ಪರ್ಷ ಇವರಿಗೆ ಲಭಿಸಿದೆ.
Post a Comment