ಸಾಗರದ ನಗರ ಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಬಹಳ ಕುತೂಹಲದಿಂದ ನಡೆದಿದ್ದು, ಬಿಜೆಪಿಯ ಅಭ್ಯರ್ಥಿ ಮೈತ್ರಿ ಪಟೇಲ್ ಮತ್ತು ಉಪಾಧ್ಯಕ್ಷ ರಾಗಿ ಸವಿತ ವಾಸು ಗೆದ್ದು ಬೀಗಿದ್ದಾರೆ. ಇದರಿಂದ ಶಾಸಕ ಗೋಪಾಲಕೃಷ್ಣ ಬೇಳೂರಿಗೆ ಮುಖ ಭಂಗವಾಗಿದೆ.
ಕಾಂಗ್ರೆಸ್ ನ ಸದಸ್ಯರು 9 ಜನರಿದ್ದರೂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಾಯಿತು. ಶಾಸಕ ಬೇಳೂರು ಅವರ ಪ್ರಯತ್ನದ ನಡುವೆಯೂ ಎರಡು ಮತಗಳ ಅಂತರದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಕಳೆದುಕೊಳ್ಳುವಂತಾಗಿದೆ.
ಮೊದಲಿಗೆ ಕಾಂಗ್ರೆಸ್ ನ ಮಧು ಮಾಲತಿ ಅಧ್ಯಕ್ಷ ಸ್ಥಾನಕ್ಕೆ, ಗಣಪತಿ ಮಂಡಗಳಲೆ ಉಪಾದ್ಯಾಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದರು. ಬಿ ಜೆಪಿಯಿಂದ
ಅಧ್ಯಕ್ಷ ಕ್ಕೆ ಮೈತ್ರಿ ಪಟೇಲ್
ಉಪಾಧ್ಯಕ್ಷ ಸ್ಥಾನಕ್ಕೆ ಸವಿತ ವಾಸು ಅರ್ಜಿಸಲ್ಲಿಸಿದ್ದರು.
ಬಿಜೆಪಿಯ ಇಬ್ಬರು ಸದಸ್ಯರು ಕೈಕೊಟ್ಟರೆ ಪಕ್ಷೇತರ ಕ್ಯಾಂಡಿಡೇಟ್ ಗಳ ಸಹಾಯದಿಂದ ಬಿಜೆಪಿ ಗೆದ್ದು ಬೀಗಿದೆ. ಒಟ್ಟು 32 ಬಲಾಬಲದಲ್ಲಿ ಕಾಂಗ್ರೆಸ್ 15 ಮತಗಳನ್ನ ಗಳಿಸಿದರೆ ಬಿಜೆಪಿ 17 ಸದಸ್ಯರ ಬಲದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನ ಆಯ್ಕೆಮಾಡಾಗಿದೆ.
Post a Comment